ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿಮಾನಿಗಳ ಮೇಲೆ ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳನ್ನು ಯಾವಾಗಲೂ ಸಪೋರ್ಟ್ ಮಾಡುವ, ಸಲ್ಲು ಭಾಯ್ ಈಗ ಅಭಿಮಾನಿಗಳ ವಿರುದ್ಧ ಸಿಟ್ಟಾಗಲು ಕಾರಣ ಏನು ಗೊತ್ತಾ?
ಸಲ್ಮಾನ್ ಖಾನ್ ನಟನೆಯ ‘ಅಂತಿಮ್’ ಸಿನಿಮ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಲು ಥಿಯೇಟರ್ಗೆ ಬಂದ ಅಭಿಮಾನಿಗಳು ಸಲ್ಮಾನ್ ಖಾನ್ ಎಂಟ್ರಿ ಕೊಡುತ್ತಿದ್ದಂತೆಯೇ, ಥಿಯೇಟರ್ನಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ಇದನ್ನು ನೋಡಿದ ಸಲ್ಲು ಭಾಯ್ ಅಭಿಮಾನಿಗಳ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರೀತಿ ನೀವು ಚಿತ್ರ ಮಂದಿರಗಳಲ್ಲಿ ಪಟಾಕಿ ಹೊಡೆಯುವುದರಿಂದ ಅಪಾಯಗಳು ಸಂಭವಿಸುತ್ತದೆ. ಸಾಕಷ್ಟು ಭಾರಿ ಪ್ರಾಣಾಪಾಯಗಳು ಸಂಭವಿಸಿವೆ. ಆದ್ದರಿಂದ ಯಾರೂ ಈ ರೀತಿ ಮುಂದಿನ ದಿನಗಳಲ್ಲಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಚಿತ್ರ ಮಂದಿರದ ಮಾಲೀಕರಿಗೆ ,ಯಾರೇ ಆದರೂ ಚಿತ್ರ ಮಂದಿರದ ಒಳಗೆ ಪಟಾಕಿ ಜೊತೆ ಬಂದರೆ ಬಿಡಬೇಡಿ ಎಂದು ವಾರ್ನಿಂಗ್ ಕೂಡ ಮಾಡಿದ್ದಾರೆ. ಸಾಕಷ್ಟು ವಿವಾದಗಳಿಂದ ಯಾವಾಗಲೂ ಬ್ಯಾಡ್ ಬಾಯ್ ಎನಿಸಿಕೊಳ್ಳುತ್ತಿದ್ದ ಸಲ್ಲು, ಈಗ ಗುಡ್ ಬಾಯ್ ಅಂತಲೂ ಪ್ರೂ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post