ಟಾಲಿವುಡ್ ಬಾಹುಬಲಿ ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಫೀವರ್ ಶುರುವಾಗಿದೆ.. ಪ್ಯಾನ್ ಇಂಡಿಯಾ ಸಿನಿಮಾವಾದ ರಾಧೆಶ್ಯಾಮ್ ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯ್ತಿದ್ದಾರೆ..ಜನವರಿ 14 ಸಂಕ್ರಾಂತಿ ಹಬ್ಬಕ್ಕೆ ರಾಧೆ ಶ್ಯಾಮ್ ರಿಲೀಸ್ ಆಗಲಿದ್ದು, ಈ ಗ್ಯಾಫ್ನಲ್ಲಿ ಚಿತ್ರತಂಡ ಚಿತ್ರದ ಹಾಡೊಂದನ್ನು ಹಿಂದಿಯಲ್ಲಿ ರಿಲೀಸ್ ಮಾಡಿದೆ.. ”ಆಶಿಕಿ ಆಯೆ ಗಯಿ” ಹಾಡು ಕಲರ್ ಪುಲ್ ಆಗಿ ಮೂಡಿ ಬಂದಿದ್ದು, ಈ ಹಾಡಿನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗಡೆ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
”ರಾಧೆ ಶ್ಯಾಮ್” ಸಿನಿಮಾ ಪ್ರಭಾಸ್ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾ. ಈ ಹಿಂದೆ ಎಂದು ಕಾಣದ ರೀತಿಯಲ್ಲಿ ಪ್ರಭಾಸ್ ಕಾಣಿಸಲಿದ್ದಾರೆ.ಕಮರ್ಷಿಯಲ್ ಸಿನಿಮಾಗಳ ಮೂಲಕ ಸೌಂಡ್ ಮಾಡುತ್ತಿದ್ದ ಪ್ರಭಾಸ್ ಸ್ಮಾಲ್ ಗ್ಯಾಪ್ ನಂತ್ರ ”ರಾಧೆ ಶ್ಯಾಮ್” ಮೂಲಕ ಫುಲ್ ಟೈಮ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಟೀಸರ್, ಪೋಸ್ಟರ್ ಲಿರಿಕಲ್ ಸಾಂಗ್ಗಳ ಮೂಲಕ ಯುವ ಪ್ರೇಮಿಗಳ ಮನಸ್ಸನ್ನು ಗೆದ್ದಿರುವ ”ರಾಧೆ ಶ್ಯಾಮ್” ಈಗ ಒಂದೊಳ್ಳೆ ಹಾಡಿನ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ”ರಾಧೆ ಶ್ಯಾಮ್ ”ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಪ್ರತಿ ಭಾಷೆಯಲ್ಲು ಹಾಡುಗಳ ಮೇಲೆ ವಿಶೇಷ ಗಮನ ಹರಿಸಿದ್ದಾರೆ ನಿರ್ದೇಶಕ ರಾಧಾಕೃಷ್ಣ. ಸದ್ಯ ಹಿಂದಿಯಲ್ಲಿ ರಿಲೀಸ್ ಆಗಿರುವ ”ಆಶಿಕ್ ಆಯಿ ಗಯಿ” ಹಾಡಿಗೆ ಮಿಥುನ್ ಸಂಗೀತ ಸಂಯೋಜನೆ ನೀಡಿದ್ದು, ಸೋಶಿಯಲ್ ಸಾಗರದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.
”ಆಶಿಕ್ ಆಯಿ ಗಯಿ” ಹಾಡನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಸಖತ್ ಕ್ಯೂಟ್ ಆಗಿ ಕಾಣಿಸಿದ್ದು, ಫುಲ್ ರೊಮ್ಯಾಂಟಿಕ್ ಮೂಡ್ನಲ್ಲಿದ್ದಾರೆ. ಹಾಡನಲ್ಲಿ ಪಾಜಾ ,ಮತ್ತು ಪ್ರಭಾಸ್ ಎಷ್ಟು ಮುದ್ದಾಗಿ ಕಾಣಿಸಿದ್ದಾರೋ ಅಷ್ಟೇ ಅದ್ಭುತವಾದ, ಸುಂದರ ಲೊಕೇಶನ್ಗಳು ಪ್ರೇಕ್ಷಕರ ಗಮನ ಸೆಳೆಯುತ್ತದೆ.ಪ್ರಭಾಸ್ ಮತ್ತು ಪೂಜಾ ”ರಾಧೆ ಶ್ಯಾಮ”ರಾಗಿ ಪ್ರೇಕ್ಷಕರ ಮನದಲ್ಲಿ ”ಆಶಿಕ ಆಯಿ ಗಯಿ” ಅಂತ ಗುನುಗುಟ್ಟುವಂತೆ ಮಾಡಿದ್ದಾರೆ.
”ರಾಧೆ ಶ್ಯಾಮ್” ಪ್ರಭಾಸ್ ಸಿನಿ ಕೆರಿಯರ್ನ ಹೊಸ ರೀತಿಯ ಸಿನಿಮಾ ಆಗಿದ್ದು, ” ರಾಧೆ ಶ್ಯಾಮ್” ಸಿನಿಮಾಗೆ ರಾಧಾಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ”ರಾಧೆ ಶ್ಯಾಮ್” ಮುಂದಿನ ವರ್ಷ ಅಂದರೆ 2022 ರ ಜನವರಿ 14 ನೇ ತಾರೀಖು 5 ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ.
I'm glad to share this Love Anthem #AashiquiAaGayi from Radhe Shyam, with all of you. https://t.co/7Nlm4QV8Cc – #Prabhas pic.twitter.com/tBsRYANM3E
— Prabhas (@PrabhasRaju) December 1, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post