ದೇಶಕ್ಕೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮಾತ್ರವಲ್ಲದೆ ಮತ್ತೊಂದು ಕೊರೊನಾ ಲಸಿಕೆ ಲಭ್ಯವಾಗಿದೆ. ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್ ಡಿ ಲಸಿಕೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಲ್ಲದೇ ದೇಶದ 7 ರಾಜ್ಯಗಳಲ್ಲಿ ಆರಂಭಿಕವಾಗಿ ಜೈಕೋವ್ ಡಿ ಲಸಿಕೆ ಬಳಸಲು ಕೇಂದ್ರ ಮುಂದಾಗಿದೆ. ಬಿಹಾರ್, ಜಾರ್ಖಂಡ್, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಅಂದರೆ 7 ರಾಜ್ಯಗಳಲ್ಲಿ ಬಳಕೆಗೆ ಕೇಂದ್ರ ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊರೊನಾ ಲಸಿಕೆಯ ಸಾರ್ವತ್ರಿಕ ಅಭಿಯಾನವೂ ವೇಗ ಪಡೆದುಕೊಂಡಿದೆ. ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್-ಡಿ ಲಸಿಕೆಯನ್ನು ಕಂಪನಿಯಿಂದ ಖರೀದಿಸಿ ಸಾರ್ವತ್ರಿಕ ಲಸಿಕಾ ಅಭಿಯಾನದಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್-ಡಿ ಕೊರೊನಾ ಲಸಿಕೆಯು ಡಿಎನ್ಎ ಆಧಾರಿತ ಲಸಿಕೆಯಾಗಿದೆ.
ವಿಶ್ವದ ಮೊದಲ ಡಿಎನ್‌ಎ ಲಸಿಕೆಯೇ ಜೈಕೋವ್ ಡಿ ಲಸಿಕೆ. ಇದು ಭಾರತದ ಮತ್ತೊಂದು ಸ್ವದೇಶಿ ಲಸಿಕೆ. ಈಗಾಗಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಜೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ತನ್ನ ಒಪ್ಪಿಗೆ ನೀಡಿದೆ. 12 ರಿಂದ 18 ವರ್ಷದೊಳಗಿನವರಿಗೆ ನೀಡಬೇಕು ಎಂಬ ಉದ್ದೇಶ ಇಟ್ಟುಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post