ಎರಡು ವರ್ಷದಿಂದ ಇದ್ದ ತನ್ನ ಲುಕ್ಗೆ ಮುಕ್ತಿ ಹಾಡಿ ಹೊಸ ಲುಕ್ನೊಂದಿಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಎಂಟ್ರಿಕೊಡಲು ಸಜ್ಜಾಗಿದ್ದಾರೆ.. ಪ್ರಜ್ಜುಗೆ ಈ ಬಾರಿ ಡೈನಾಮಿಕ್ ಸ್ಟಾರ್ ದೇವರಾಜ್ ಸಾಥ್ ಕೊಡ್ತಿದ್ದಾರೆ.. ಒಂದೇ ಸಿನಿಮಾದಲ್ಲಿ ಅಪ್ಪ ಮಗ ಇಬ್ಬರು ಕಾಣಿಸಿಕೊಳ್ತಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ?
ಸಿನಿಮಾ ಸೋಲಲಿ ಗೆಲ್ಲಲಿ.. ತನ್ನ ಪ್ರಯತ್ನವನ್ನ ಪ್ರಾಮಾಣಿಕವಾಗಿ ಮಾಡುತ್ತಾ ಪ್ರೇಕ್ಷಕರನ್ನ ವಿಧವಿಧವಾದ ಸಿನಿಮಾಗಳ ಮೂಲಕ ರಂಜಿಸುತ್ತಿರೋ ಕಲಾವಿದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜಂಟಲ್ ಮನ್ ಸಿನಿಮಾ ನಂತರ ಕೊಂಚ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದ್ದಾರೆ ಪ್ರಜ್ವಲ್ ದೇವರಾಜ್.. ಈ ಬಾರಿ ಪ್ರಜ್ಜು ಕಡೆಯಿಂದ ಸಿನಿಲೋಕಕ್ಕೆ ಸಿಗುತ್ತಿರುವ ಹೊಸ ಸಿನಿಮಾ ಮಾಫಿಯಾ.
ಮಾಫಿಯಾ.. ಇದೇ ಹೆಸರಿನಲ್ಲಿ ಥ್ರಿಲ್ಲರ್ ಮಂಜು ಅವರ ಕಾಲದಲ್ಲಿ ಒಂದು ಸಿನಿಮಾ ಬಂದಿತ್ತು.. ಆದ್ರೆ ಇದು ಪ್ರಜ್ವಲ್ ದೇವರಾಜ್ ನಟಿಸಲಿರುವ ಹೊಸ ಸಿನಿಮಾ ಮಾಫಿಯಾ.. ಕೆಲ ದಿನಗಳ ಹಿಂದೆ ಪೊಸ್ಟರ್ ಒಂದನ್ನ ಬಿಟ್ಟು ಚಿತ್ರಪ್ರೇಮಿಗಳ ಗಮನ ತನ್ನತ ಸೆಳೆದಿತ್ತು ಮಾಫಿಯಾ ಸಿನಿಮಾ ತಂಡ.. ಈಗ ಮುಹೂರ್ತವನ್ನ ಆಚರಿಸಿಕೊಂಡು ಶೂಟಿಂಗ್ ಸೆಟ್ಗೆ ಕಾಲಿಡಲು ಸಜ್ಜಾಗಿದೆ ಚಿತ್ರತಂಡ.
ಒಂದೇ ಸಿನಿಮಾದಲ್ಲಿ ಅಪ್ಪ ಮಗ ಪೊಲೀಸ್ ಪಾತ್ರ
ಈ ಸಿನಿಮಾದ ಮತ್ತೊಂದು ವಿಶೇಷವೆನೆಂದ್ರೆ ಪ್ರಜ್ವಲ್ ದೇವರಾಜ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವ ಈ ಮಾಫಿಯಾ ಚಿತ್ರದಲ್ಲಿ ಮತ್ತೊಬ್ಬ ಪೊಲೀಸ್ ಆಗಿ ಪ್ರಜ್ವಲ್ ಅವರ ತಂದೆ ದೇವರಾಜ್ ಕೂಡ ಕಾಣಿಸಿಕೊಳ್ತಿರೊದು ವಿಶೇಷ.ಅದಿತಿ ಪ್ರಭುದೇವ ಮಾಫಿಯಾ ಚಿತ್ರದ ನಾಯಕಿ. ಜರ್ನಲಿಸ್ಟ್ ಪಾತ್ರವನ್ನ ನಿರ್ವಹಿಸಲಿದ್ದಾರೆ. ಮಮ್ಮಿ ಖ್ಯಾತಿಯ ಲೋಹಿತ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ..
ಇನ್ನು ‘ಮಾಫಿಯಾ’ಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, ‘ಟಗರು’, ‘ಸಲಗ’ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ತರುಣ್ ಈ ಚಿತ್ರದ ಛಾಯಾಗ್ರಾಹಕರು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಮಾಫಿಯಾ ಸಿನಿಮಾವನ್ನ ತರೋ ಯೋಚನೆ ಯೋಜನೆಯಲ್ಲಿ ಚಿತ್ರತಂಡವಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post