ಲಾಹೋರ್: ಶ್ರೀಲಂಕಾದ ಫ್ಯಾಕ್ಟರಿ ಮ್ಯಾನೇಜರ್ ಮೇಲೆ ಪಾಕ್ನಲ್ಲಿ ಗುಂಪು ಹಲ್ಲೆ ನಡೆದಿದೆ. ಕಿಡಿಗೇಡಿಗಳ ಗುಂಪೊಂದು ಶ್ರೀಲಂಕಾ ಪ್ರಜೆಗೆ ಕಿರುಕುಳ ನೀಡಿ ಮನಸೋಇಚ್ಛೆ ಹಿಂಸಿಸಿ ಕೊಂದು ಸಜೀವ ದಹನ ಮಾಡಿದ್ದಾರೆ. ಪಾಕಿಸ್ತಾನದ ಪಂಜಾಬ್ ರಾಜ್ಯದ ಸಿಯಾಲ್ಕೋಟ್ ಬಳಿಯ ವಾಜೀರಾಬಾದ್ ರಸ್ತೆಯಲ್ಲಿ ಶ್ರೀಲಂಕಾದ ಫ್ಯಾಕ್ಟರಿ ಮ್ಯಾನೇಜರ್ನನ್ನು ಹತ್ಯೆ ಮಾಡಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ.
ಈ ಸಂಬಂಧ ಮಾತಾಡಿದ ಸಿಯಾಲ್ಕೋಟ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮರ್ ಸಾಹೀದ್ ಮಲ್ಲಿಕ್, ಮೃತ ದುರ್ದೈವಿ ಪ್ರಿಯಂತಾ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಶ್ರೀಲಂಕಾದ ಪ್ರಜೆ. ಯಾವುದೋ ಒಂದು ಖಾಸಗಿ ಫ್ಯಾಕ್ಟರಿಯಲ್ಲಿ ಎಕ್ಸ್ಪೋರ್ಟ್ ಮ್ಯಾನೇಜರ್ ಆಗಿದ್ದರು ಎಂದಿದ್ದಾರೆ.
ಸದ್ಯ ಪ್ರಿಯಂತಾ ಕುಮಾರ್ಗೆ ಕಿರುಕುಳ ನೀಡಿ ಜೀವಂತ ಸುಟ್ಟುಹಾಕಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪಾಕ್ ಪಂಜಾಬ್ ಮುಖ್ಯಮಂತ್ರಿ ಸರ್ದಾರ್ ಉಸ್ಮಾನ್ ಬುಜ್ದಾರ್, ಇದೊಂದು ದುರಂತ ಘಟನೆ ಎಂದಿದ್ದಾರೆ. ಅಲ್ಲದೇ ಕೇಸ್ ತನಿಖೆಗಾಗಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ತನಿಖಾ ಸಮಿತಿ ರಚಿಸಿದ್ದಾರೆ. ಕೂಡಲೇ ತನಿಖೆ ನಡೆಸಿ ಈ ಸಂಬಂಧ ರಿಪೋರ್ಟ್ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷಯಾಗಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post