ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಥ್ರಿಬಲ್ ಆರ್.. ಈ ಬಾರಿ ರಾಜಮೌಳಿ ಏನ್ ಮಾಡಿರಬಹುದು ಅನ್ನೋ ಪ್ರೇಕ್ಷಕರ ಕುತೂಹಲ ಆಕಾಶ ಮುಟ್ಟಿದೆ.. ರೌದ್ರ ರಣ ರುಧಿರ ಚಿತ್ರದ ಪ್ರತಿಪಾತ್ರವು ಈಗಾಗಲೇ ಚಿತ್ರಪ್ರೇಮಿಗಳ ಮನಸಿನಲ್ಲಿ ಜೀವ ಪಡೆದುಕೊಂಡಿವೆ.. ಇಂತಹ ಟೈಮ್ನಲ್ಲಿ ಥ್ರಿಬಲ್ ಆರ್ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಪಾತ್ರ ಇಷ್ಟೆ ಅಂತ ಮಾತನಾಡಿಕೊಳುತ್ತಿದೆ ಸಿನಿಮಾ ಲೋಕ.. ಹಾಗಾದ್ರೆ ಥ್ರಿಬಲ್ ಆರ್ನಲ್ಲಿ ಅಜಯ್ ಆಲಿಯಾ ಪಾತ್ರವೇನು?
ಕುತೂಹಲಭರಿತ ಸಿನಿಮಾವನ್ನ ನೋಡೋವಾಗ ಸೀಟ್ ಎಡ್ಜ್ನಲ್ಲಿ ಕುಳಿತು ನೋಡೋದು ಮಾಮುಲಿ.. ಆದ್ರೆ ಸಿನಿಮಾ ಬರೋಕ್ಕೂ ಮುನ್ನ ಸಿನಿಮಾ ನೋಡಲು ಪ್ರೇಕ್ಷಕ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡೋದು ಇದೆಯಲ್ಲ ಅದು ನಿಜಕ್ಕೂ ಎಕ್ಸ್ಸ್ಟ್ರಾಡ್ನರಿ.. ಇಂಥದೊಂದು ಕಲೆ ಒಲಿದಿರುವ ಡೈರೆಕ್ಟರ್ಸ್ಗಳಲ್ಲೊಬ್ಬರು ಎಸ್.ಎಸ್.ರಾಜಮೌಳಿ.. ಜಕ್ಕಣ್ಣನ ಕಲ್ಪನೆಯ ಥ್ರಿಬಲ್ ಆರ್ ಚಿತ್ರಕ್ಕೆ ದಿನಗಣನೆ ಶುರುವಾಗಿದೆ.. ಜೊತೆಗೆ ಥ್ರಿಬಲ್ ಆರ್ ಸಿನಿಮಾದ ಪಾತ್ರಗಳು ಹಾಗೂ ನಾಳೆ ಬಿಡುಗಡೆಯಾಗುವ ಟ್ರೈಲರ್ ಬಗ್ಗೆನೂ ಸಖತ್ ಕ್ಯೂರಿಯಾಸಿಟಿ ಎಲ್ಲರಿಲ್ಲಿದೆ.
ರಾಜಮೌಳಿ ಅವರು ಬಾಹುಬಲಿ ಸಿನಿಮಾವನ್ನ ಮಾಡ್ತಿದ್ದಾಗ ಹೊಸ ಫ್ಯಾಂಟಸಿ ಜಗತ್ತನ್ನ ಸೃಷ್ಟಿಸಿದ್ದಾರೆ ಅಂತ ಜನ ಮುಗಿ ಬಿದ್ದು ನೋಡಿದ್ರು.. ಆದ್ರೆ ಈಗ ಥ್ರಿಬಲ್ ಆರ್ ಕಥೆ ಹಂಗಿಲ್ಲ.. ಸ್ವಾತಂತ್ರ್ಯ ಹೋರಾಟದ ಕಥೆಯನ್ನ ಹೇಳಲು ಹೊರಟಿರುವ ರಾಜಮೌಳಿ ಬೇರೆ ಏನೋ ನೋಡಿರದನ್ನ ಸೃಷ್ಟಿಸಿ ಸಿನಿ ಜಗತ್ತಿಗ ಅರ್ಪಿಸಲಿದ್ದಾರೆ ಅನ್ನೋ ಕುತೂಹಲವಿದೆ.. ಜೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ತೇಜ ಪಾತ್ರಗಳ ಬಗ್ಗೆ ಒಂದು ಇಮೇಜಿನ್ ಈಗಾಲೇ ಪ್ರೇಕ್ಷಕ ಕುಲಕ್ಕೆ ಸಿಕ್ಕಿದೆ. ಆದ್ರೆ ಬಾಲಿವುಡ್ನ ತಾರೆಗಳಾಗಿರುವ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಪಾತ್ರಗಳ ವಿಶೇಷವೇನು ಅನ್ನೋದೆ ಕಲರ್ ಕ್ಯೂರಿಯಾಸಿಟಿ..
ಅಜಯ್ – ಆಲಿಯಾ ಪಾತ್ರಗಳ ವಿಶೇಷವೇನು?
ಎಷ್ಟು ನಿಮಿಷ ಕಾಣುತ್ತಾರೆ ಅಲಿಯಾ-ಅಜಯ್
ಆಲಿಯಾ ಭಟ್ ಹಾಗೂ ಅಜಯ್ ದೇವಗನ್.. ಈ ಇಬ್ಬರು ಬೇರೆ ಬೇರೆ ರೋಲ್ಗಳನ್ನ ಥ್ರಿಬಲ್ ಆರ್ ಸಿನಿಮಾದಲ್ಲಿ ಮಾಡಿದ್ದಾರೆ.. ಈ ಇಬ್ಬರ ಪಾತ್ರಗಳ ವಿಶಿಷ್ಠವೇನು ಅನ್ನೋ ಜನವರಿ 7ನೇ ತಾರೀಖ್ ಗೊತ್ತಾಗುತ್ತೆ.. ಆದ್ರೆ ಆಲಿಯಾ ಮತ್ತು ಅಜಯ್ ಪಾತ್ರಗಳು ಇಷ್ಟೆ ಇಷ್ಟು ಇರುತ್ತೆ ಅಂತ ಮಾತುಕಥೆಗಳು ಈಗ ಶುರುವಾಗಿದೆ..ಸೀತಾ ಅನ್ನೋ ಪಾತ್ರವನ್ನ ರೌದ್ರ ರಣ ರುಧಿರ ಚಿತ್ರದಲ್ಲಿ ನಿರ್ವಹಿಸುತ್ತಿರುವ ಆಲಿಯಾ ಭಟ್ ಈ ಚಿತ್ರದಲ್ಲಿ ಕಾಣೋದು ಎಷ್ಟು ನಿಮಿಷ ಗೊತ್ತಾ.. ಜಸ್ಟ್ 15 ಮಿನಿಟ್.. ಹೌದು. ಕೇವಲ 15 ನಿಮಿಷ ಮಾತ್ರ ಆಲಿಯಾ ಭಟ್ ಈ ಚಿತ್ರದಲ್ಲಿ ಕಂಗೋಳಿಸುತ್ತಾರಂತೆ..ಇನ್ನು ಬಾಲಿವುಡ್ನ ಸಿಂಗಂ ಅಜಯ್ ದೇವಗನ್.. ಆಲಿಯಾ ಭಟ್ ಅವರ ಪಾತ್ರ 15 ನಿಮಿಷ ಥ್ರಿಬಲ್ ಆರ್ ನಲ್ಲಿ ಕಂಡ್ರೆ ಅಜಯ್ ದೇವಗನ್ ಪಾತ್ರ ಕೇವಲ ಎಂಟೇ ನಿಮಿಷ ಮಾತ್ರ ಕಾಣಿಸುತ್ತದೆ ಅಂತೆ.
ಥ್ರಿಬಲ್ ಆರ್ ಸಿನಿಮಾ ಎರಡು ಮುಕ್ಕಾಲ್ ಗಂಟೆ ಇದೆ ಅನ್ನೋ ಮಾಹಿತಿ ಇದೆ.. ಅಂತ್ರದಲ್ಲಿ ಕೇವಲ ಇಷ್ಟು ಕಡಿಮೆ ಅವಧಿಗೆ ಆಲಿಯಾ ಮತ್ತು ಅಜಯ್ ಬಾಲಿವುಡ್ನಿಂದ ಟಾಲಿವುಡ್ಗೆ ಬಂದು ಹೊದ್ರಾ ಅನ್ನೋ ಪ್ರಶ್ನೆಗೆ ಉತ್ತರ ಇಬ್ಬರಿಂದಲೂ ಸಿಕ್ಕಿದೆ. ನಟ ಅಜಯ್ ದೇವಗನ್ ಅವರಿಗೆ ಸಂಜಯ್ ಲೀಲಾ ಬನ್ಸಾಲಿ ಹಾಗೂ ರಾಜಮೌಳಿ ಅವರ ಜೊತೆಗೆ ಕೆಲಸ ಮಾಡಬೇಕು ಅನ್ನೋ ಆಸೆ ಇತಂಥೆ.. ದೇವಗನ್ ಅವರ ಒಂದು ಆಸೆ ಥ್ರಿಬಲ್ ಆರ್ ಚಿತ್ರದಿಂದ ಈಡೇರಿದೆ.. ಇನ್ನು ಆಲಿಯಾ ಭಟ್ ಅವರಿಗೂ ರಾಜ್ ಮೌಳಿ ಡೈರೆಕ್ಷನ್ ಅಂದ್ರೆ ಬಲು ಪ್ರೀತಿ.. ಹೀಗಾಗಿ ಎಷ್ಟ್ ನಿಮಿಷ ಬಂದ್ರು ಪರವಾಗಿಲ್ಲ ಒಂದು ಪವರ್ ಫುಲ್ ಪಾತ್ರ ಮಾಡಿದ್ರೆ ಸಾಕು ಅನ್ನೋ ಉದೇಶದಿಂದ ಥ್ರಿಬಲ್ ಆರ್ ಚಿತ್ರವನ್ನ ಒಪ್ಪಿಕೊಂಡಿದ್ದಾರೆ ಅಜಯ್ ಮತ್ತು ಆಲಿಯಾ..
ಒಂದು ಯಶಸ್ವಿ ಸಿನಿಮಾದಲ್ಲಿ ಅದ್ರಲೂ ರಾಜಮೌಳಿ ಅವರ ಸಿನಿಮಾದಲ್ಲಿ ಎಷ್ಟು ನಿಮಿಷ ಕಲಾವಿದರು ಕಂಡರು ಅನ್ನೋ ಮುಖ್ಯವಲ್ಲ ಪ್ರೇಕ್ಷಕರ ಮನಸಿನಲ್ಲಿ ಉಳಿದುಕೊಂಡ್ರಾ ಅನ್ನೋದೆ ಮುಖ್ಯ.. ರಾಜ್ ಮೌಳಿ ಸಿನಿಮಾ ಅಂದ್ಮೆಲೆ ಸಣ್ಣ ಸಣ್ಣ ಪಾತ್ರವು ಪ್ರೇಕ್ಷಕರ ಕಂಗಳಲ್ಲಿ ಐಡೆಂಟಿಟಿಯನ್ನ ಹೊಂದೇ ಹೊಂದುತ್ತೆ.. ಮುಂಬರುವ ಜನವರಿ 7ನೇ ತಾರೀಖ್ ರೌದ್ರ ರಣ ರುಧಿರ ಸಿನಿಮಾ ವಿಶ್ವಾದ್ಯಂತ ಪ್ರದರ್ಶನಗೊಳ್ಳಲಿದೆ.. ಕನ್ನಡ ಅವತರಣಿಕೆಯ ಥ್ರಿಬಲ್ ಆರ್ ಚಿತ್ರವನ್ನ ಕರ್ನಾಟಕಕ್ಕೆ ಅರ್ಪಿಸಲಿದೆ ಕೆವಿಎನ್ ಸಿನಿಮಾ ಪ್ರೋಡಕ್ಷನ್ಸ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post