ಖಾಯಂ ನಾಯಕ ವಿರಾಟ್ ಕೊಹ್ಲಿಯ ಕಮ್ಬ್ಯಾಕ್ನಿಂದ ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಬಲವೇನೋ ಹೆಚ್ಚಿದೆ. ಆದ್ರೆ, ಕಮ್ ಬ್ಯಾಕ್ ಸ್ಟಾರ್ ಕೊಹ್ಲಿ ಮುಂದೆ ಸವಾಲಿನ ಬೆಟ್ಟವೇ ಇದೆ. ವಿಶ್ರಾಂತಿಯ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಿರೋ ಕೊಹ್ಲಿ ಮುಂದಿರೊ ಚಾಲೆಂಜಸ್ಗಳ ಡಿಟೇಲ್ಸ್ ಇಲ್ಲಿದೆ.
ಮೊದಲ ಪಂದ್ಯದಲ್ಲಿ ಮಿಡಲ್ ಆರ್ಡರ್ ವೈಫಲ್ಯದ ಸಮಸ್ಯೆ ಎದುರಿಸಿದ್ದ ಟೀಮ್ ಇಂಡಿಯಾ, ಕೊಹ್ಲಿ ಕಮ್ಬ್ಯಾಕ್ನಿಂದ ಬಲ ಬಂತು ಅನ್ನೋ ಭಾವನೆಯಲ್ಲಿದೆ. ಅಭಿಮಾನಿಗಳ ವಲಯದಲ್ಲೂ ಕೊಹ್ಲಿ ಮೇಲೆ ನಿರೀಕ್ಷೆಯ ಭಾರವೇ ಇದೆ. ಆದ್ರೆ, ಕಮ್ಬ್ಯಾಕ್ ಮಾಡಿರುವ ಟೀಮ್ ಇಂಡಿಯಾ ನಾಯಕನ ಮುಂದೆ ಹಲವು ಸವಾಲುಗಳಿವೆ.
Back to Test cricket ❤️ pic.twitter.com/IgjfuySCWK
— Virat Kohli (@imVkohli) December 2, 2021
ವಿರಾಟ್ ಕೊಹ್ಲಿ ಶತಕ ಸಿಡಿಸಿ ಆಗಿದೆ 2 ವರ್ಷ.!
ವಿಶ್ರಾಂತಿ ಬಳಿಕ ಕಮ್ಬ್ಯಾಕ್ ಮಾಡ್ತಿದ್ದಂತೆ ಕೊಹ್ಲಿಗೆ ಎದುರಾಗಇರುವ ಮೊದಲ ಪ್ರಶ್ನೆಯೇ ಇದಾಗಿದೆ. ವಿರಾಟ್ ಕೊಹ್ಲಿ ಕೊನೆಯ ಶತಕ ಸಿಡಿಸಿದ್ದು, 2019ರಲ್ಲಿ ಬಾಂಗ್ಲಾದೇಶ ವಿರುದ್ಧ. ಅದಾದ ಬಳಿಕ ಮೂರು ಮಾದರಿಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ರೂ ಮೂರಂಕಿ ಗಡಿ ದಾಟುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆ ಶತಕದ ಬರವನ್ನ ನೀಗಿಸಿಕೊಳ್ಳಬೇಕಾದ ಸವಾಲು ಕೊಹ್ಲಿ ಮುಂದಿದೆ. ಶತಕದ ಬರ ಮಾತ್ರವಲ್ಲ.. ಫಾರ್ಮ್ ಸಮಸ್ಯೆಯೂ ಕೊಹ್ಲಿಯನ್ನ ಕಾಡ್ತಿದೆ.
ಎಲ್ಲಾ ಮಾದರಿಯೂ ಸೇರಿ 56 ಇನ್ನಿಂಗ್ಸ್ಗಳಿಂದ ಬಂದಿಲ್ಲ ಶತಕ
ಟೆಸ್ಟ್, ಏಕದಿನ, ಟಿ20 ಈ ಮೂರು ಮಾದರಿಯಲ್ಲಿ ಕಳೆದ 56 ಇನ್ನಿಂಗ್ಸ್ಗಳಿಂದ ಕೊಹ್ಲಿ ಶತಕ ಸಿಡಿಸಿಲ್ಲ. ಕೊನೆಯ ಶತಕ ಸಿಡಿಸಿದ ಬಳಿಕ 21 ಇನ್ನಿಂಗ್ಸ್ಗಳನ್ನಾಡಿರುವ ಕೊಹ್ಲಿ, ಕೇವಲ 5 ಬಾರಿ ಮಾತ್ರ ಅರ್ಧಶತಕದ ಗಡಿ ದಾಟಿದ್ದಾರೆ. ಇನ್ನೂ ಈ 21 ಇನ್ನಿಂಗ್ಸ್ಗಳಲ್ಲಿ 3 ಬಾರಿ ಡಕೌಟ್ ಆಗಿದ್ರೆ, 4 ಬಾರಿ ಒಂದಂಕಿ ಮೊತ್ತಕ್ಕೆ ಔಟ್ ಆಗಿದ್ದಾರೆ. ಇನ್ನು ಕೊನೆಯ ಶತಕದ ಬಳಿಕ ಕೊಹ್ಲಿ ಟೆಸ್ಟ್ ಸರಾಸರಿ ಕೇವಲ 26.80 ಆಗಿದೆ.
ನಾಯಕನಾಗಿ ಯಶಸ್ಸು ಕಂಡಿದ್ರೂ, ಬ್ಯಾಟ್ಸ್ಮನ್ ಆಗಿ ಟೆಸ್ಟ್ ಮಾದರಿಯಲ್ಲಿ ಕಳೆದ 2 ವರ್ಷಗಳಿಂದ ಕೊಹ್ಲಿ ಕುಸಿತ ಕಂಡಿದ್ದಾರೆ. ಈಗಾಗಲೇ ರಹಾನೆ, ಪೂಜಾರರ ಫಾರ್ಮ್ ಬಗ್ಗೆ ಹೆಚ್ಚು ಚರ್ಚೆಯಾಗ್ತಿದ್ದು, ಈ ಟೆಸ್ಟ್ನಲ್ಲಿ ವೈಫಲ್ಯ ಕಂಡರೆ ಕೊಹ್ಲಿ ಸ್ಥಾನದ ಬಗ್ಗೆ ಚರ್ಚೆ ಆರಂಭವಾದ್ರೂ ಅಚ್ಚರಿಯಿಲ್ಲ. ಇದರಿಂದ ಪಾರಾಗಬೇಕಂದ್ರೆ, ಕೊಹ್ಲಿ ಮಾಸ್ಟರ್ಕ್ಲಾಸ್ ಇನ್ನಿಂಗ್ಸ್ ಕಟ್ಟಲೇಬೇಕಿದೆ.
ಡ್ರೆಸ್ಸಿಂಗ್ ರೂಮ್ನಲ್ಲಿ ಗೌರವ ಉಳಿಸಿಕೊಳ್ಳುವ ಸವಾಲು..
ಈಗಾಗಲೇ ಟಿ20 ನಾಯಕತ್ವ ತೊರೆದಿರುವ ಕೊಹ್ಲಿಗೆ ಏಕದಿನ ನಾಯಕತ್ವದಿಂದಲೂ ಕೊಕ್ ಕೊಡಲಾಗುತ್ತೆ ಎಂಬ ಮಾತುಗಳು ಕೇಳಿ ಬರ್ತಿವೆ. ಅದಲ್ಲದೇ ಇಂಗ್ಲೆಂಡ್ ಪ್ರವಾಸದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿ ರೆಸ್ಪೆಕ್ಟ್ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. ಬ್ಯಾಟಿಂಗ್ ಫಾರ್ಮ್ ಕಂಡುಕೊಂಡ್ರೆ ಮಾತ್ರ ಕೊಹ್ಲಿ ಈ ಸವಾಲನ್ನು ಮೀರಲು ಸಾಧ್ಯ.
Hello & good morning from Mumbai for the second @Paytm #INDvNZ Test! 👋#TeamIndia pic.twitter.com/Pvkm9F2WbG
— BCCI (@BCCI) December 3, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post