ರಾಕಿಂಗ್ ಸ್ಟಾರ್ ಯಶ್ ಮತ್ತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೌದು, ಬಾಲಿವುಡ್ ಲೋಕದ ಖ್ಯಾತ ಸೆಲೆಬ್ರಿಟಿ ಪೋಟೋಗ್ರಾಫರ್ ಡಬೂ ರತ್ನಾನಿ ಜೊತೆ ಈ ಹಿಂದೆ ಫೊಟೋಶೂಟ್ ಮಾಡಿಸಿಕೊಂಡು ಸದ್ದು ಮಾಡಿದ್ದ ರಾಕಿ ಭಾಯ್ ಇದೀಗ ಮತ್ತೆ ಸೆಲೆಬ್ರಿಟಿ ಫೊಟೋಗ್ರಾಫರ್ ಕ್ಯಾಮರಾ ಕಣ್ಣಿಗೆ ಪೋಸ್ ನೀಡಿದ್ದಾರೆ.
ವಿಶೇಷ ಏನಂದ್ರೆ ಫೋಟೋಗ್ರಾಫರ್ ರತ್ನಾನಿ ಬಾಲಿವುಡ್ ಅಂಗಳದಲ್ಲಿ ಯಾರದ್ದೇ ಫೋಟೋ ಕ್ಲಿಕ್ಕಿಸಿದರು ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಡುತ್ತಾರೆ. ಆದ್ರೆ ಈ ಬಾರಿ ಫಾರ್ ಏ ಚೇಂಜ್ ಎಂಬಂತೆ ಪತ್ನಿ ರಾಧಿಕಾ ಪಂಡಿತ್ ಕೂಡ ರಾಕಿಂಗ್ ಸ್ಟಾರ್ ಜೊತೆಯಾಗಿದ್ದು ಅದ್ದಯು ಅವರ ಚಿತ್ತರಗಳು ಸಾಕಷ್ಟು ವೈರಲ್ ಆಗುತ್ತಿವೆ.
ಇನ್ನು ಕೆಜಿಎಫ್ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಪದೇ ಪದೇ ಮುಂಬೈಗೆ ಹಾರಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಅಭಿಮಾನಿಗಳು ಯಶ್ ಬಾಲಿವುಡ್ನಲ್ಲಿ ಮಿಂಚಲು ತಯಾರಿ ನಡೆಸಿದ್ದಾರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
🤎♥️💙 #btswithdabboo With The Wonderful Duo @TheNameIsYash & #Radhikapandit ✨✨@DabbooRatnani @ManishaDRatnani @Dabboo #dabbooratnaniphotography #dabbooratnani #yash #radhikapandit #bts #behindthescenes pic.twitter.com/1vNOpYuJ4V
— Dabboo Ratnani (@DabbooRatnani) December 1, 2021
ಇದನ್ನೂ ಓದಿ:ಮುಂದಿನ ಚಿತ್ರಕ್ಕೆ ರೆಡಿಯಾದ್ರಾ ಯಶ್: ಸೆಲೆಬ್ರಿಟಿ ಫೋಟೋಗ್ರಾಫರ್ ಜೊತೆ ಫೋಟೋ ಶೂಟ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post