ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ರಾಜಕೀಯದಿಂದ ಸಾಕಷ್ಟು ವರ್ಷಗಳ ಕಾಲ ಸಿನಿಮಾಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ, ಅತ್ತ ರಾಜಕೀಯದಲ್ಲೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಇದರಿಂದ ಮತ್ತೆ ಸಿನಿಮಾ ಕಡೆ ಮುಖ ಮಾಡಿದ ಚಿರಂಜೀವಿ, ‘ಖೈದಿ 150’ ಮೂಲಕ ಸೆಕೆಂಡ್ ಇನಿಂಗ್ಸ್ ಪ್ರಾರಂಭ ಮಾಡಿದ್ದಾರೆ.
ಖೈದಿ 150 ಸಿನಿಮಾ ತಮಿಳಿನ ಸೂಪರ್ ಸ್ಟಾರ್ ವಿಜಯ್ ನಟನೆಯ ‘ಕತ್ತಿ’ ಸಿನಿಮಾದ ರಿಮೇಕ್. ಸದ್ಯ ಚಿರಂಜೀವಿ ಸಾಲು ಸಾಲು ಸಿನಿಮಾಗಳಳ್ಲಿ ಬ್ಯುಸಿಯಾಗಿದ್ದು, ಆದಷ್ಟು ಬೇಗ ಸಿನಿಮಾಗಳನ್ನು ಮಾಡಲು ನಿರ್ಧಾರ ಮಾಡಿದ್ದಾರಂತೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ‘ಲೂಸಿಫರ್’ ಸಿನಿಮಾವನ್ನು ಚಿರಂಜೀವಿ ‘ಗಾಡ್ ಫಾದರ್’ ಆಗಿ ರೀಮೇಕ್ ಮಾಡುತ್ತಿದ್ದಾರೆ. ಅಜಿತ್ ಕುಮಾರ್ ನಟನೆಯ ‘ವೇದಾಲಂ’ ಸಿನಿಮಾವನ್ನು ‘ಭೋಳಾ ಶಂಕರ’ ಹೆಸರಿನಲ್ಲಿ ರೀಮೇಕ್ ಮಾಡುತ್ತಿದ್ದಾರೆ.
ಈ ನಡುವೆ ಮತ್ತೊಂದು ರಿಮೇಕ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಚಿರಂಜೀವಿ. ಕೆ. ಎಸ್. ಬಾಬಿ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಚಿರು ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದು ಯಾವ ಸಿನಿಮಾದ ರೀಮೇಕ್ ಎಂದು ಇನ್ನು ಮಾಹಿತಿ ನೀಡಿಲ್ಲ. ಜೊತೆಗೆ ಸಾಕಷ್ಟು ರೀಮೇಕ್ ಸಿನಿಮಾಗಳ ಮೊರೆ ಹೋಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ ಚಿರು ಸುಮ್ಮನೆ ಕಥೆ ಕೇಳಿ ಸಮಯ ವ್ಯರ್ಥ ಮಾಡುವುದಕ್ಕಿಂತ, ಸಿನಿಮಾಗಳನ್ನು ಮಾಡುತ್ತಲೇ ಕಥೆ ಕೇಳುವುದು, ಒಂದು ವೇಳೆ ಕಥೆ ಇಷ್ಟ ಆದರೆ ಮಾಡುವುದು.
ಈ ಮಧ್ಯೆ ರಿಮೇಕ್ಗಳನ್ನು ಮಾಡುವುದು ಉತ್ತಮ ಎಂದು ಭಾವಿಸಿದ್ದಾರಂತೆ. ಸದ್ಯ ‘ಆಚಾರ್ಯ’ ಸಿನಿಮಾ ಒಂದೇ ಚಿರು ಅವರ ಸ್ವಮೇಕ್ ಸಿನಿಮಾ. ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾಗೆ ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದು, ಆಚಾರ್ಯ ಸಿನಿಮಾದಲ್ಲಿ ರಾಮ್ಚರಣ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಆಚಾರ್ಯ ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post