ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರೋ ಸವಾಲುಗಳನ್ನು ಒಂದೇ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ನಿಮಿತ್ತ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅವರು ಬಳಗೆರೆಯ ಶಾಸಕ ಗೌರಿಶಂಕರ್ ನಿವಾಸದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಪ್ರಧಾನಿಗೆ ಇರುವಂತಾ ಕಷ್ಟವನ್ನ ಒಂದು ಮಾತಲ್ಲಿ ಹೇಳೋಕೆ ಆಗಲ್ಲಾ. ಇಡೀ ಪ್ರಪಂಚವನ್ನ ಪೀಡಿಸ್ತಿರೋ ಕೊರೋನಾನ ಎದುರಿಸೋದು ಅಷ್ಟು ಸುಲಭ ಅಲ್ಲಾ.
ಇದನ್ನೂ ಓದಿ: ‘ಬನ್ನಿ ಗೌಡ್ರೇ ಕುತ್ಕೋಳಿ’ಎಂದ ಮೋದಿ..ಬಾಯ್ತುಂಬ ನಕ್ಕ ದೇವೇಗೌಡ
ನಮ್ಮ ದೇಶ ಚಿಕ್ಕ ದೇಶವಲ್ಲಾ,130 ಕೋಟಿ ಜನಸಂಖ್ಯೆಇರೋ ದೇಶ. ಇದರಲ್ಲೇನಾದ್ರು ಆರ್ಥಿಕ ಅವ್ಯವಹಾರ ಇದ್ರೆ ಅಧಿಕೃತ ವಿರೋಧ ಪಕ್ಷ ಇದರ ಬಗ್ಗೆ ವ್ಯಾಖ್ಯಾನ ಮಾಡ್ತಿದೆ ಎಂದು ಟೀಕಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post