ಮೆಗಾ ಸ್ಟಾರ್ ಚಿರಂಜೀವಿ ಅವರ ಸೊಸೆ ಉಪಾಸನಾ ತಮ್ಮ ಮನೆಯ ಮದುವೆ ಕಾರ್ಯಕ್ರಮಕ್ಕೆ ತೃತೀಯ ಲಿಂಗ ಸಮುದಾಯದವರನ್ನು ಕರೆಸಿ ಅವರಿಂದ ಆರ್ಶಿವಾದ ಪಡೆದುಕೊಂಡಿದ್ದಾರೆ.
ರಾಮ್ ಚರಣ್ ಪತ್ನಿ ಉಪಾಸನಾ ಸಮಾಜ ಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಉಪಸನಾ ಲಿಂಗ ತಾರತಮ್ಯಕ್ಕೆ ಪ್ರತಿಕ್ರಿಯಿಸಿ ತೃತೀಯ ಲಿಂಗ ಸಮುದಾಯದವರ ಜೊತೆ ತಾನು ಉತ್ತಮ ಸ್ನೇಹವನ್ನು ಹೊಂದಿದ್ದೇನೆ ಎಂದು ಹೇಳಿದ್ದರು.
ಇನ್ನು ಉಪಾಸನಾ ಸಹೋದರಿ ಅನುಷ್ಪಾಲ ಶೀಘ್ರದಲ್ಲೇ ವಿವಾಹವಾಗಲಿದ್ದು, ತಮ್ಮ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ವಿಶೇಷ ಅಂದ್ರೆ ಉಪಾಸನಾ, ಮದುವೆ ಮನೆಗೆ ತೃತೀಯ ಲಿಂಗಿ ಸಮುದಾಯದವರನ್ನು ಕರೆಸಿಕೊಂಡು ತಾವು ಹಾಗೂ ತಮ್ಮ ಸಹೋದರಿ ಅವರಿಂದ ಅರ್ಶಿವಾದವನ್ನು ಪಡೆದುಕೊಂಡಿದ್ದಾರೆ.
ಸದ್ಯ ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಸಂಭ್ರಮದ ಪೋಟೋಗಳನ್ನು ಹಂಚಿಕೊಂಡಿದ್ದು, ಅನುಷ್ಪಾಲ ವಿವಾಹ ಮಹೋತ್ಸವದ ಕಾರ್ಯಕ್ರಮವನ್ನು ಬಹಳ ಪ್ರೀತಿಯಿಂದ ಆರಂಭಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಾನು ಹೈದರಾಬಾದ್‌ನ ತೃತೀಯ ಲಿಂಗಿ ಸಮುದಾಯದವರನ್ನು ಬಹಳ ಗೌರವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post