ಬಾಲಿವುಡ್ನ ಸೆಲೆಬ್ರಿಟಿ ಜೋಡಿ ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರ್ತಾನೆ ಇದೆ. ದೇಶದಲ್ಲಿ ಸಾಕಷ್ಟು ಸದ್ದು ಮಾಡಿರೋ ಇಬ್ಬರ ವಿವಾಹ ವಿಷಯ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.
ಹೌದು ಮೊನ್ನೆ ತಮ್ಮ ಮದುವೆಗೆ ಆಗಮಿಸುತ್ತಿರುವ ಗಣ್ಯಾತಿಗಣ್ಯರಿಗೆ ಕಂಡಿಶನ್ ಮೇಲೆ ಕಂಡಿಶನ್ಸ್ ಹಾಕಿ ಬೆರಗು ಮೂಡಿಸಿದ್ದರು ವಿಕ್ಕಿ ಮತ್ತು ಕತ್ರಿನಾ. ಸದ್ಯ ಈ ಅದ್ದೂರಿ ಮದುವೆಗೆ ಕತ್ರಿನಾ ತಮ್ಮ ಹಳೆಯ ಬಾಯ್ಫ್ರೆಂಡ್ಗಳನ್ನು ಕರೆದಿಲ್ಲ ಅನ್ನೊ ಸುದ್ದಿ ಗಾಸಿಪ್ ಗಾಳಿಪಟವಾಗಿ ಬಾಲಿವುಡ್ ಬಾಗಿಲಲ್ಲಿ ಗಿರಕಿ ಹೊಡೆಯುತ್ತಿದೆ.
ಇದನ್ನೂ ಓದಿ:ಇದು ‘ಕಂಡೀಷನ್ ಮದ್ವೆ’: ವಿಕ್ಕಿ-ಕತ್ರಿನಾ ಷರತ್ತುಗಳಿಗೆ ಬೆಚ್ಚಿಬಿದ್ದ ಬಾಲಿವುಡ್ ಗಣ್ಯರು..!
ಯೆಸ್ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಒಂದು ಕಾಲದಲ್ಲಿನ ಹಾಟ್ ಜೋಡಿ. ಇವರ ಮಧ್ಯೆ ಲವ್ವಾಗಿದೆ, ಇವರಿಬ್ಬರು ಸದ್ಯದಲ್ಲೇ ಮದುವೆಯಾಗುತ್ತಾರೆ ಅನ್ನೋ ಲೆವೆಲ್ಗೆ ಈ ಜೋಡಿ ಕಮಾಲ್ ಮಾಡಿತ್ತು. ಅದ್ಯಾರ ಕೆಟ್ಟ ಕಣ್ಣು ಈ ಜೋಡಿಯ ಮೇಲೆ ಬಿತ್ತೋ ಅವರ ಸಂಬಂಧ ಮುರಿದು ಬಿದ್ದಿತ್ತು. ಇನ್ನು ಚಾಕಲೇಟ್ ಬಾಯ್ ರಣಬೀರ್ ಕಪೂರ್ ಜೊತೆ ಕೂಡ ಕ್ಯಾಟ್ ಕೆಲವು ದಿನ ಸುತ್ತಾಟ ನಡೆಸಿ ಲವ್ವು, ಗಿವ್ವು, ಇತ್ಯಾದಿ ಅನ್ನೋ ಸುದ್ದಿಗಳಿಗೆ ಆಹಾರವಾಗಿದ್ದರು ಇಲ್ಲಿಯು ನಡೆದಿದ್ದು ಸೇಮ್ ಟು ಸೇಮ್ ಬ್ರೇಕ್ಪ್.
ಅದಾದ ನಂತರ ‘ಉರಿ’ ಹುಡಗ ವಿಕ್ಕಿ ಕೌಶಲ್ ಜೊತೆ ಹಾಟ್ ಹಾಟ್ ಕತ್ರಿನಾ ಹಸೆಮಣೆ ಏರಲು ಸಜ್ಜಾಗಿದ್ದು ತಮ್ಮ ಎಕ್ಸ್ ಬಾಯ್ಫ್ರೆಂಡ್ಸ್ಗಳಿಗೆ ಮದುವೆಗೆ ಇನ್ವೈಟ್ ಮಾಡಿಲ್ಲವಂತೆ. ಈ ಗಾಸಿಪ್ಗಳಿಗೆ ಇಂಬು ಕೊಡುವಂತೆ ಸಲ್ಮಾನ್ಖಾನ್ ಸಹೋದರಿ ಕತ್ರಿನಾ ಇದುವರೆಗೆ ನಮಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post