ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ ‘ಕೆಜಿಎಫ್-2 ’ ಚಿತ್ರದ ಹಿಂದಿ ಆವೃತ್ತಿಯಲ್ಲಿ ಸ್ವತಃ ಯಶ್ ಅವರೆ ತಮ್ಮ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ‘
ಹೌದು ಹಿಂದಿ ಭಾಷೆಯನ್ನು ಬಹಳ ಚೆನ್ನಾಗಿ ಮಾತನಾಡುವ ಯಶ್ ಕೆಜಿಎಫ್ -1 ರ ಹಿಂದಿ ಅವೃತಿಯಲ್ಲಿ ತಮ್ಮ ಪಾತ್ರಕ್ಕೆ ಧ್ವನಿ ನೀಡಿರಲಿಲ್ಲ. ಆದರೆ ಲಾಕ್ಡೌನ್ ಟೈಮ್ನಲ್ಲಿ ಬಹಳಷ್ಟು ಸಮಯವಿದ್ದ ಕಾರಣ ಯಶ್ ಹಿಂದಿ ಭಾಷೆ ಮಾತನಾಡುವ ಶೈಲಿಯನ್ನು ಮತಷ್ಟು ಉತ್ತಮಗೊಳಿಸಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕೆಲ ವರದಿಗಳ ಪ್ರಕಾರ ಖ್ಯಾತ ಹಿಂದಿ ಬರಹಗಾರ ಜೊತೆ ದೂರವಾಣಿ ಮೂಲಕ ಮಾತನಾಡಿದ ಯಶ್ ‘ನನ್ನ ಹಿಂದಿ ಚೆನ್ನಾಗಿದೆ. ಅದರೆ ಕೆ.ಜಿ.ಎಫ್ ಭಾಗ ಒಂದರಲ್ಲಿ ನನ್ನ ಸ್ವಂತ ಧ್ವನಿಯಲ್ಲಿ ಡಬ್ ಮಾಡವಷ್ಟು ಉತ್ತಮವಾಗಿ ಇರಲಿಲ್ಲ ಆದರೆ ಈಗ ನಾನು ಹಿಂದಿ ಮಾತನಾಡುವ ಶೈಲಿ ಸುಧಾರಣೆಗೊಂಡಿದೆ’ ಎಂದಿದ್ದಾರಂತೆ. ಹೀಗಾಗಿ ಕೆಜಿಎಫ್-2 ಹಿಂದಿ ಅವೃತಿಯಲ್ಲಿ ಸ್ವತಃ ಯಶ್ ತಮ್ಮ ಪಾತ್ರಕ್ಕೆ ತಾವು ಧ್ವನಿ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಇಡೀ ಭಾರತೀಯ ಚಿತ್ರರಂಗವೇ ಕೆಜಿಎಫ್-2 ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ಮುಂದಿನ ವರ್ಷ ಏಪ್ರಿಲ್ 14 ನೇ ತಾರೀಖು ಚಿತ್ರ ಬಿಡುಗಡೆಯಾಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post