ಮುಂಬೈ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎರಡನೇ ಟೆಸ್ಟ್ ಮ್ಯಾಚ್ ನಡೆಯುತ್ತಿದೆ. ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲೂ ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ, ಕಳೆದ 42 ಟೆಸ್ಟ್ಗಳಲ್ಲಿ ಒಂದೇ ಒಂದು ಶತಕ ಬಾರಿಸಲು ವಿಫಲವಾದ ಚೇತೇಶ್ವರ್ ಪೂಜಾರ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕಳವಳ ವ್ಯಕ್ತಪಡಿಸಿದ್ದಾರೆ.
ನನಗೆ ನಿಜವಾಗಿಯೂ ಪೂಜಾರ ಪರ್ಫಾಮೆನ್ಸ್ ಕಳವಳವುಂಟು ಮಾಡುತ್ತದೆ. ನೀವು ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ ಐದು ಮತ್ತು ಆರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬರೋರಿಗಿಂತಲೂ ಶತಕ ಗಳಿಸಲು ಹೆಚ್ಚು ಅವಕಾಶ ಹೊಂದಿರುತ್ತೀರಿ ಎಂದಿದ್ದಾರೆ. ಅಲ್ಲದೇ ಶ್ರೇಯಸ್ ಐಯ್ಯರ್, ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ ಉತ್ತಮ ಆಟ ಆಡುತ್ತಿರುವಾಗ ನೀವ್ಯಾಕೆ ಕಳಪೆ ಪ್ರದರ್ಶನ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post