ಕಳೆದ 2 ವರ್ಷಗಳಿಂದ ಕೊರೊನಾ ಮಾಹಾಮಾರಿಯಿಂದ ಕನ್ನಡ ಚಿತ್ರರಂಗ ತತ್ತರಿಸಿ ಹೋಗಿದ್ದು ಈಗತಾನೆ ಮೆಲ್ಲಗೆ ಮೇಲೇಳುತ್ತಿದೆ. ಈ ಹೊತ್ತಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೆ ‘ಓಮಿಕ್ರಾನ್’ ಎಂಬ ಮಹಾಮಾರಿ ಅಡ್ಡಗಾಲು ಹಾಕಿದೆ.
ಇದೇ ತಿಂಗಳ 10 ನೇ ತಾರೀಖು ಬಿಡುಗಡೆಗೆ ಸಿದ್ಧವಾಗಿದ್ದ ‘ಅವತಾರ ಪುರುಷ’ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದ್ದು, ಬೇರೆ ಸಿನಿಮಾಗಳು ಅವತಾರ ಪುರುಷನ ದಾರಿಯನ್ನೇ ಹಿಡಿಯುತ್ತಾರಾ ಎಂಬ ಆತಂಕ ಚಿತ್ರಪ್ರೇಮಿಗಳಿಗೆ ಎದುರಾಗಿದೆ. ಹೌದು ಒಮಿಕ್ರಾನ್ ಸೋಂಕು ಪ್ರಕರಣ ಮೊಟ್ಟ ಮೊದಲ ಬಾರಿ ಕರ್ನಾಟಕದಲ್ಲೇ ಕಾಣಿಸಿಕೊಂಡಿದ್ದು, ಸ್ಯಾಂಡಲ್ವುಡ್ಗೆ ಇದರ ಬಿಸಿ ಜೋರಾಗೇ ತಟ್ಟಿದೆ.
ಇದನ್ನೂ ಓದಿ:ಭಾರೀ ನಿರೀಕ್ಷೆ ಮೂಡಿಸಿರೋ ‘ಅವತಾರ ಪುರುಷ’ ರಹಸ್ಯವನ್ನ ಬಿಚ್ಚಿಟ್ಟ ಆಶಿಕಾ
ಕಳೆದ ಗುರುವಾರ ಓಮಿಕ್ರಾನ್ ಸೋಂಕು ಕರ್ನಾಟಕದಲ್ಲಿ ಕಾಣಿಸಿಕೊಂಡ ಹಿನ್ನೆಲೆ , ಚಿತ್ರಮಂದಿರಕ್ಕೆ ಬರುವ ಚಿತ್ರಪ್ರೇಮಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. ಸದ್ಯ ಒಮಿಕ್ರಾನ್ಗೆ ಹೆದರಿದ ‘ಅವತಾರ ಪುರುಷ’ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದ್ದಾನೆ. ಇನ್ನು ಸಾಲು ಸಾಲು ಚಿತ್ರಗಳು ಒಮಿಕ್ರಾನ್ ಆರ್ಭಟಕ್ಕೆ ಬೆದರಿ ರಿಲೀಸ್ ಡೇಟ್ಗಳನ್ನು ಮುಂದೂಡುವ ಸಾಧ್ಯತೆಗಳಿವೆ ಎಂಬುದು ಗಾಂಧಿನಗರ ಗಲ್ಲಿಯ ಮಾತು.
ಇದನ್ನೂ ಓದಿ:ಅವತಾರ ಪುರುಷನ ಬಾಯಿಗೆ ಬಿದ್ದ ಲಡ್ಡು.. ಸುನಿ ಕ್ರಿಯೇಟಿವಿಟಿಗೆ ಫ್ಯಾನ್ಸ್ ಫಿದಾ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post