ಬೆಂಗಳೂರು: ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ವಿನೂತನ ಪ್ರತಿಭಟನೆ ಕೈಗೊಂಡ ಸಾರ್ವಜನಿಕರು ಪಾಲಿಕೆ ಫೋಟೋಗೆ ತಿಥಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ತಿಂಗಳ 26 ರಂದು ಸುಂಕದಕಟ್ಟೆ ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿಯ ಅಂತ್ಯ ಸಂಸ್ಕಾರ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಆ ಬಳಿಕ ರಸ್ತೆ ಗುಂಡಿ ಮುಚ್ಚುವಂತೆ ಪಾಲಿಕೆಗೆ ಮನವಿ ಮಾಡಿ 11 ದಿನಗಳ ಗಡುವನ್ನ ಕೂಡ ನೀಡಲಾಗಿತ್ತು. ಆದ್ರೆ ಸಾರ್ವಜನಿಕರ ಮನವಿಗೆ ಕ್ಯಾರೆ ಎನ್ನದ ಪಾಲಿಕೆ ಸೈಲೆಂಟ್ ಆಗಿತ್ತು.
ಇದರಿಂದ ಗರಂ ಆದ ಸಾರ್ವಜನಿಕರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೇ ಪ್ರತಿಭಟನೆಗೆ ನಿಂತಿದ್ದಾರೆ. ಈ ವೇಳೆ ಪಾಲಿಕೆ ಪೋಟೋ ಇಟ್ಟು, ಹೂ ಹಾಕಿ, ಹಣ್ಣು, ಚಕ್ಕುಲಿ, ನಿಪ್ಪಟ್ಟು, ವಡೆ, ಪಾಯಸ ಎಡೆ ಇಟ್ಟಿದ್ದಾರೆ . ಅಷ್ಟೇ ಅಲ್ಲದೆ ತಲೆ ಬೊಳಿಸಿಕೊಂಡು, 11ನೇ ದಿನದ ತಿಥಿ ಮಾಡಿ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post