ಬಾಲಿವುಡ್ ಸೆಲೆಬ್ರಿಟಿ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಸದ್ಯದಲ್ಲೇ ಸಪ್ತಪದಿ ತುಳಿಯಲ್ಲಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸ್ ಹೋಟೆಲ್ನಲ್ಲಿ ಕತ್ರಿನಾ ವಿಕ್ಕಿ ಕಲ್ಯಾಣ ನಡೆಯಲ್ಲಿದ್ದು, ಈಗಾಗಲೆ ಭರ್ಜರಿ ತಯಾರಿ ನಡೆಯುತ್ತಿದೆ. ಇಷ್ಟೆಲ್ಲಾ ತಯಾರಿ ನಡೀತಿದ್ರು ಕೂಡ ಈ ಜೋಡಿ ಮಾತ್ರ ತಮ್ಮ ಮದುವೆ ಬಗ್ಗೆ ಆಗಲಿ ಅಥವಾ ತಮ್ಮ ಪ್ರೀತಿ ಬಗ್ಗೆ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕತ್ರಿನಾ ಮತ್ತು ವಿಕ್ಕಿ ಲವ್ ಸ್ಟೋರಿ ಎಲ್ಲಿಂದ ಶುರುವಾಯ್ತು ಇಲ್ಲಿದೆ ಮಾಹಿತಿ.
2018ರಲ್ಲಿ ಕಾಫಿ ವಿತ್ ಕರಣ್ ಶೋಗೆ ಕತ್ರಿನಾ ಗೆಸ್ಟ್ ಆಗಿ ಬಂದಿದ್ದರು. ಅಂದು ಕರಣ್ ಜೋಹರ್ ಕತ್ರಿನಾಗೆ ನೀವು ಯಾವ ನಟನ ಜೊತೆ ಚೆನ್ನಾಗಿ ಕಾಣಿಸುತ್ತಿರಾ ಅಂತ ನಿಮಗೆ ಅನ್ನಿಸುತ್ತದೆ ಅಂತ ಪ್ರಶ್ನೆ ಕೇಳುತ್ತಾರೆ. ಆಗ ಕತ್ರಿನಾ ವಿಕ್ಕಿ ಕೌಶಲ್ ಅಂತ ಉತ್ತರಿಸುತ್ತಾರೆ. ಇನ್ನು ವಿಕ್ಕಿ ಕೌಶಲ್ ಕಾಫಿ ವಿತ್ ಕರಣ್ ಶೋಗೆ ಗೆಸ್ಟ್ ಆಗಿ ಬಂದಾಗ ಕರಣ್, ಹಿಂದೊಮ್ಮೆ ಕತ್ರಿನಾ ಈ ಶೋಗೆ ಬಂದಾಗ ವಿಕ್ಕಿ ಬಗ್ಗೆ ಆಡಿದ ಮಾತುಗಳನ್ನು ಹೇಳುತ್ತಾರೆ. ಕರಣ್ ಮಾತುಗಳನ್ನು ಕೇಳಿದ ವಿಕ್ಕಿ ನಾಚಿ ನೀರಾಗುತ್ತಾರೆ.
2019ರ IIFA ಅರ್ವಾಡ್ ಫಂಕ್ಷನ್ನಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಗೆ ಕಾಣಿಸಿಕಳ್ಳುತ್ತಾರೆ. ಇದಾದ ನಂತರ ಮತ್ತೊಂದು ಅರ್ವಾಡ್ ಫಂಕ್ಷನ್ನಲ್ಲಿ ಎಲ್ಲರ ಮುಂದೆ ವೇದಿಕೆ ಮೇಲೆ ವಿಕ್ಕಿ ಕತ್ರಿನಾಗೆ ಪ್ರಪೋಸ್ ಮಾಡುತ್ತಾರೆ. ಈ ವಿಷಯ ಬಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತದೆ.
2020ರ ಹೋಲಿ ಹಬ್ಬದಂದು ಇಶಾ ಅಂಬಾನಿ ಆಯೋಜಿಸಿದ್ದ ಹೋಲಿ ಪಾರ್ಟಿಗೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿತ್ತು. ಅದರಂತೇ ವಿಕ್ಕಿ ಮತ್ತು ಕತ್ರಿನಾ ಕೂಡ ಭಾಗಿಯಾಗಿದ್ದು , ಈ ವೇಳೆ ವಿಕ್ಕಿ , ಕತ್ರಿನಾ ಹಣೆಗೆ ಹೋಲಿ ಹಚ್ಚುವ ಪೋಟೋ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ: ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿರೋ ಐತಿಹಾಸಿಕ ಸ್ಥಳದ ಸ್ಪೆಷಾಲಿಟಿ ಏನು ಗೊತ್ತಾ?
ವಿಕ್ಕಿ ಮತ್ತು ಕತ್ರಿನಾ ಒಂದೇ ರೀತಿಯ ಹೂಡಿ ಜ್ಯಾಕೆಟ್ ಆನ್ನ ಧರಿಸಿದ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆ ಇವರಿಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಬಿಟೌನ್ನಲ್ಲಿ ಸಖತ್ ಸದ್ದು ಮಾಡಿತ್ತು. ಕತ್ರಿನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯಾರನ್ಣೊ ಹಗ್ ಮಾಡುವ ಪೋಟೋವೊಂದನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಆ ಪೋಟೋದಲ್ಲಿ ಕೇವಲ ಹಳದಿ ಬಣ್ಣದ ಟಿ-ಶರ್ಟ್ ಮಾತ್ರ ಕಾಣಿಸುತ್ತದೆ.
ಅದಾದ ನಂತರ ವಿಕ್ಕಿ ಹಳದಿ ಬಣ್ಣ ಧರಿಸಿದ ಪೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ಎರಡು ಟಿ-ಶರ್ಟ್ ಒಂದೇ ರೀತಿಯಿದ ಕಾರಣ ಕತ್ರಿನಾ ಪೋಟೋದಲ್ಲಿರುವ ವ್ಯಕ್ತಿ ವಿಕ್ಕಿ ಕೌಶಲ್ ಅಂತ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗುತ್ತೆ. ಇಷ್ಟೆಲ್ಲಾ ಆದರೂ ಕೂಡ ಈ ಜೋಡಿ ಮಾತ್ರ ತಮ್ಮ ಪ್ರೀತಿಯ ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಂಡು ಇದೇ ಡಿಸೆಂಬರ್ 9 ಕ್ಕೆ ಹಸೆಮಣೆ ಏರುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post