ಚಿಕ್ಕಬಳ್ಳಾಪುರ: ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ನಿನ್ನೆ ರಾತ್ರಿ ನಡೆದಿದೆ. ಕೊಲೆಗಡುಕನೊಬ್ಬ ಮಹಿಳೆಯೊಬ್ಬಳನ್ನ ತನ್ನ ಮನೆಗೆ ಕರೆಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿ, ಯಾವುದೇ ಆತಂಕವಿಲ್ಲದೇ ನಿದ್ರೆಗೆ ಜಾರಿದ ಘಟನೆ ನಡೆದಿದೆ.
ಅಂಜಿನಮ್ಮ ಕೊಲೆಯಾದ ಮಹಿಳೆ. ನರಸಿಂಹಪ್ಪ ಕೊಲೆ ಮಾಡಿ ನಿದ್ರೆಗೆ ಜಾರಿದ ಆರೋಪಿ. ಕೆಲವು ವರದಿಗಳ ಪ್ರಕಾರ, ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯನ್ನು ನರಸಿಂಹಪ್ಪ ಮನೆಗೆ ಕರೆಸಿಕೊಂಡಿದ್ದ. ನಂತರ ಇಬ್ಬರ ನಡುವೆ ಗಲಾಟೆ ಸಂಭವಿಸಿದೆ.
ಕುಡಿದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಮಾರಕಾಸ್ತ್ರದಿಂದ ಮಹಿಳೆಯ ತೆಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಶವವನ್ನ ಹೊರಹಾಕಿ ಮನೆಯೊಳಗೆ ಹೋಗಿ ನಿದ್ರೆ ಮಾಡಿದ್ದಾನೆ. ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post