ನವದೆಹಲಿ: ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಿತು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸಂಸದರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವು ಸಂಸದರು ಆಗಾಗ ಸಭೆಗಳಿಗೆ ಮತ್ತು ಸಂಸತ್ ಕಲಾಪಗಳಿಗೆ ಗೈರಾಗುತ್ತಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮೋದಿ.. ಸಂಸತ್ತಿನಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಖಡಕ್ ಆಗಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಸದರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸಿರುವ ಮೋದಿ.. ದಯವಿಟ್ಟು ಸಂಸತ್ತಿನ ಕಲಾಪಗಳಿಗೆ ನಿಯಮಿತವಾಗಿ ಹಾಜರಾಗಿ. ನೀವು ಬದಲಾಗಬೇಕು. ಅಥವಾ ಇಲ್ಲದಿದ್ರೆ ಬದಲಾವಣೆ ಆಗಲಿದೆ. ಮಗುವಿನಂತೆ ನಿರಂತರವಾಗಿ ಅದರ ಬಗ್ಗೆ ಒತ್ತಡ ಹೇರುವುದು ನನಗೆ ಒಳ್ಳೆಯದನಿಸುವುದಿಲ್ಲ. ನೀವು ನಿಮ್ಮನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬದಲಾವಣೆಗಳು ಸಂಭವಿಸುತ್ತವೆ ಎಂದು ಎಚ್ಚರಿಸಿದ್ದಾರೆ.
ಜನರನ್ನ ತಲುಪುವ ಕಾರ್ಯ ಮಾಡಬೇಕು. ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವಂತೆ ಸಂಸದರಿಗೆ ಮೋದಿ ಇದೇ ವೇಳೆ ಸೂಚಿಸಿದ್ದಾರೆ ಅಂತಾ ವರದಿಯಾಗಿದೆ. ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ನಡೆಯಿತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post