ಬಾಲಿವುಡ್ ಸೆಲೆಬ್ರಿಟಿ ಜೋಡಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಇದೇ ಡಿಸೆಂಬರ್ 9 ರಂದು ಹಸೆಮಣೆ ಏರುವ ಸಂಭ್ರಮದಲ್ಲಿದ್ದಾರೆ. ಸದ್ಯ ಜೋಡಿ ವಿರುದ್ಧ ರಾಜಸ್ಥಾನ ಮೂಲದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಯಾಕೆ ದೂರು..?
ರಾಜಸ್ಥಾನದಲ್ಲಿರುವ ಮಾಧೋಪುರದ ಸಿಕ್ಸ್ ಸೇನ್ಸ್ ಹೋಟಲ್ನಲ್ಲಿ ಕತ್ರಿನಾ-ವಿಕ್ಕಿ ಮದುವೆ ತಯಾರಿ ಭಾರದಿಂದ ಸಾಗುತ್ತಿದೆ. ವಕೀಲ ನೇತ್ರಬಿಂದ್ ಸಿಂಗ್ ಜಾದೂನ್ ವಿಕ್ಕಿ ಕತ್ರಿನಾ ಮತ್ತು ಸಿಕ್ಸ್ ಸೆನ್ಸ್ ಹೋಟಲ್ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಕ್ಸ್ ಸೆನ್ಸ್ ಹೋಟೆಲ್ನ ಆಡಳಿತ ಮಂಡಳಿ ವಿರುದ್ಧ ಅಲ್ಲಿನ ಜನಪ್ರಿಯ ದೇಗುಲ ಚೌಥ್ ಮಾತಾ ದೇವಾಲಯಕ್ಕೆ ಹೋಗುವ ರಸ್ತೆಯನ್ನ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಅದ್ದೂರಿ ಕಲ್ಯಾಣದಲ್ಲಿ ಮದುವೆ ಮಂಟಪಕ್ಕೆ ವಿಕ್ಕಿ ಸ್ಪೇಷಲ್ ಎಂಟ್ರಿ ಹೇಗಿರುತ್ತೆ ಗೊತ್ತಾ?
ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೋಟೆಲ್ ಇದ್ದು, ಡಿಸೆಂಬರ್ 6 ರಿಂದ 12 ರವರೆಗೆ ಮದುವೆ ಕಾರ್ಯಕ್ರಮಗಳು ಜರಗಲಿದೆ. ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಹೋಟೆಲ್ ಆಡಳಿತ ಮಂಡಳಿ ಬಂದ್ ಮಾಡಿದೆ. ಹೀಗಾಗಿ ಭಕ್ತರಿಗೆ ತೊಂದರೆ ಉಂಟಾಗಿದೆ ಎಂದು ದೂರು ದಾಖಲಿಸಿದ್ದಾರೆ.
ಚೌಥ್ ಮಾತಾ ದೇವಾಲಯವು ಐತಿಹಾಸಿಕ ದೇವಾಲಯವಾಗಿದೆ. ದೈನಂದಿನ ಪೂಜೆಯಲ್ಲಿ ಪಾಲ್ಗೊಳ್ಳಲು ಹಲವಾರು ಭಕ್ತರು ಆಗಮಿಸುತ್ತಾರೆ. ಆದರೆ ಚೌತ್ ಮಾತಾ ದೇವಸ್ಥಾನದ ಮುಖ್ಯ ಮಾರ್ಗವನ್ನು ಇವರು ಬಂದ್ ಮಾಡಿದ್ದಾರೆ. ಇದರಿಂದ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಕೀಲರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವಿಕ್ಕಿ-ಕತ್ರಿನಾಗೆ ಬಂಪರ್ ಆಫರ್; ‘100 ಕೋಟಿ ಕೊಡ್ತೀವಿ ರೈಟ್ಸ್ ಕೊಡಿ’ ಎಂದ OTT ಸಂಸ್ಥೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post