ಕೋವಿಡ್ ಸೋಂಕಿಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 104 ವರ್ಷದ ಪದ್ಮಶ್ರೀ ಪುರಸ್ಕೃತ ಒಡಿಶಾದ ಅಕ್ಷರ ಸಂತ ನಂದಾ ಸರ್ ಖ್ಯಾತಿಯ ನಂದಕಿಶೋರ್ ಪ್ರಸ್ಟಿ ವಿಧಿವಶರಾಗಿದ್ದಾರೆ.
ಕಳೆದ ನವೆಂಬರ್ 27 ರಿಂದ ಕೋವಿಡ್ ಸೋಂಕು ತಗುಲಿದ ಪರಿಣಾಮ ಅವರನ್ನು ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಂದು ಸಂಜೆ ಕೊನೆಯಿಸಿರೆಳದಿದ್ದಾರೆ.
ಒಡಿಶಾದ ಅಕ್ಷರ ಸಂತ ಎಂದೇ ಖ್ಯಾತರಾಗಿದ್ದ ಇವರು ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದರು. ತಮ್ಮ 100 ನೇ ವಯಸಿನವರೆಗೂ ಅವರು ಈ ಕಾರ್ಯವನ್ನು ನಡೆಸಿಕೊಂಡು ಬಂದು 30 ಸಾವಿರ ಮಕ್ಕಳಿಗೆ ಶಿಕ್ಷಣ ನೀಡಿ ಅಕ್ಷರ ಕ್ರಾಂತಿಯನ್ನೇ ಸಾರಿದ್ದರು. ಇವರ ಈ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ ಇವರಿಗೆ 2020ನೇ ಸಾಲಿನ ದೇಶದ ಅತ್ಯುನ್ನತ ಪುರಸ್ಕಾರ ಪದ್ಮಶ್ರೀಯನ್ನು ನೀಡಿ ಗೌರವಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಗಣ್ಯಾತಿಗಣ್ಯರು ನಂದಾ ಮಾಸ್ಟರ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ರಾಷ್ಟಪತಿಗಳ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿ ಪದ್ಮಶ್ರೀ ಸ್ವೀಕರಿಸಿದ ಓಡಿಶಾದ ಅಕ್ಷರ ಸಂತ
Sad to learn about the demise of Shri Nanda Prusty. ‘Nanda sir’ spread joy of education with dedication. His gesture of blessing me when I conferred him with Padma Shri last month will remain etched in my memory. May his rich legacy endure! Condolences to his family & admirers. pic.twitter.com/tJb48zDbTf
— President of India (@rashtrapatibhvn) December 7, 2021
Pained by the demise of Shri Nanda Prusty Ji. The much respected “Nanda Sir” will be remembered for generations due to his efforts to spread the joys of education in Odisha. He drew the nation’s attention and affection a few weeks ago at the Padma Awards ceremony. Om Shanti. pic.twitter.com/VUpyPWP9FP
— Narendra Modi (@narendramodi) December 7, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post