ಇದು ರ ರ ರ ರಚಿತಾ ರಾಮ್ ಮೇನಿಯಾ. ಸಾಲು ಸಾಲು ಸೂಪರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ ರಚ್ಚು. ಈಗ ಬುಲ್ ಬುಲ್ ರಚ್ಚು ಅಕೌಂಟ್ಗೆ ಮತ್ತೊಂದು ನಿರೀಕ್ಷಿತ ಸಿನಿಮಾ ಆ್ಯಡ್ ಆಗಿದೆ. ಫರ್ ದಿ ಫಸ್ಟ್ ಟೈಮ್ ರಚ್ಚು ಯೋಗರಾಜ್ ಭಟ್ ಸಿನಿಮಾ ಲೋಕದೋಳ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
ಬುಲ್ ಬುಲ್ ಬೆಡಗಿ ಡಿಂಪಲ್ ಹುಡ್ಗಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯೋ ಬ್ಯುಸಿ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗಕ್ಕೂ ಬಲಗಾಲಿಟ್ಟು ಬಂದಿದ್ದಾರೆ.. ಲಾಕ್ ಡೌನ್ಗಳಾಗದೇ ಇದ್ದಿದ್ರೇ ಇಷ್ಟೊತ್ತಿಗಾಗಲೇ ತಿಂಗಳಿಗೊಮ್ಮೆ ಹೊಸ ಹೊಸ ಸಿನಿಮಾಗಳ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಚಿತ್ತಾರವಾಗುತ್ತಾ ರಂಜನೆ ಚಮತ್ಕಾರವನ್ನ ನೀಡುತ್ತಿದ್ದರು ರಚ್ಚು.
ಹತ್ತ್ ಹತ್ರಾ 10 ಸಿನಿಮಾಗಳಲ್ಲಿ ರಚಿತಾ ರಂಜಿಸಲು ಸಜ್ಜಾಗಿದ್ದಾರೆ. ಒಂದಷ್ಟು ಸಿನಿಮಾ ರಿಲೀಸ್ಗೆ ರೆಡಿಯಾಗಿವೆ ಒಂದಷ್ಟು ಸಿನಿಮಾ ಶೂಟಿಂಗ್ ಆಗುತ್ತಿವೆ ಇನ್ನೊಂದಿಷ್ಟು ಸಿನಿಮಾ ಶೂಟಿಂಗ್ಗೆ ಹೋಗ ಪ್ಲಾನ್ ಮಾಡಿಕೊಂಡಿವೆ.. ಈ ಶೂಟಿಂಗ್ಗೆ ಹೋಗಲು ರೆಡಿಯಾಗಲಿರುವ ರಚಿತಾ ಹೊಸ ಸಿನಿಮಾದ ಹೊಸ ಸಮಾಚಾರ ಇದು. ಮೊಟ್ಟ ಮೊದಲ ಬಾರಿಗೆ ರಚಿತಾ ರಾಮ್, ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಲಿದ್ದಾರೆ. ಅಷ್ಟಕ್ಕೂ ಆ ಸಿನಿಮಾದ ಹೆಸರು ಗರಡಿ.
ಯೋಗರಾಜ್ ಭಟ್ ‘ಗರಡಿ’ಯಲ್ಲಿ ಡಿಂಪಲ್ ರಚಿತಾ
ಫಸ್ಟ್ ಟೈಮ್ ಭಟ್ಟರ ಬಣ್ಣನೆಯಲ್ಲಿ ಬಣ್ಣದ ಬುಲ್ ಬುಲ್
‘ಗರಡಿ’ ಮನೆಗೆ ಸ್ವಾಗತ ರಚಿತಾ ಎಂದ ಯೋಗರಾಜ್ ಭಟ್
ಯೋಗರಾಜ್ ಭಟ್.. ಸ್ಯಾಂಡಲ್ವುಡ್ಗೆ ಐತಿಹಾಸಿಕ ಹಿಟ್ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾವನ್ನ ಕೊಟ್ಟ ಸ್ಟಾರ್ ಡೈರೆಕ್ಟರ್. ಈಗ ಯೋಗರಾಜ್ ಭಟ್ ಗಾಳಿಪಟ-2 ಸಿನಿಮಾದ ಜೊತೆಗೆ ಹೊಸ ಸಿನಿಮಾವೊಂದಕ್ಕೆ ಸಜ್ಜಾಗುತ್ತಿದ್ದಾರೆ. ಆ ಸಿನಿಮಾ ಹೆಸರು ಗರಡಿ. ಕೆಲ ದಿನಗಳ ಹಿಂದೆ ಗರಡಿ ಸಿನಿಮಾ ಮುಹೂರ್ತವಾಗಿತ್ತು. ನಿರ್ಮಾಪಕ , ನಟ ಹಾಗೂ ರಾಜಕಾರಣಿಯಾಗಿರುವ ಬಿ.ಸಿ.ಪಾಟೀಲ್ ನಿರ್ಮಾಣದ ಚಿತ್ರವಿದು.. ಈ ಚಿತ್ರದ ನಾಯಕ ಯಶಸ್ ಸೂರ್ಯ. ಅದೇ ರೀತಿ ಈ ಚಿತ್ರದ ನಾಯಕಿ ರಚಿತಾ ರಾಮ್.
ರಚಿತಾ ರಾಮ್ ತಮ್ಮ ಗರಡಿ ಚಿತ್ರತಂಡದ ಜೊತೆ ಸೇರಿಕೊಂಡಿರುವ ವಿಚಾರವನ್ನ ಸ್ವತಃ ಯೋಗರಾಜ್ ಭಟ್ ಅವರೇ ಸೋಶಿಯಲ್ ಮಿಡಿಯಾದಲ್ಲಿ ಸ್ಪಷ್ಟ ಪಡಿಸಿದ್ದಾರೆ ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ಗೆ ಅಣಿಯಾಗಲಿರುವ ಗರಡಿ ಚಿತ್ರತಂಡದಿಂದ ಮತ್ತಷ್ಟು ಮಾಹಿತಿಗಳು ಹೊರ ಬರಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post