ನವದೆಹಲಿ: ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ಲಾಲೂ ಪ್ರಸಾದ್ ಯಾದವ್ ಪುತ್ರ ಹಾಗೂ ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಇದೀಗ ಹೊಸದೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ.
ಪಾಟ್ನಾದ ಬೀದಿಗಳಲ್ಲಿ ಪೆನ್ನು ಮಾರಾಟ ಮಾಡ್ತಿದ್ದ ಬಡ ಹುಡುಗಿಗೆ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತೇಜ್ ಪ್ರತಾಪ್ ತನ್ನ ಸ್ನೇಹಿತರೊಂದಿಗೆ ಪಾಟ್ನಾದ ಬೌರಿಂಗ್ ರೋಡ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ.
ಈ ರಸ್ತೆಯಲ್ಲಿ ಚಿಕ್ಕ ಬಾಲಕಿಯೊಬ್ಬಳು ಪೆನ್ನು ಮಾರಾಟ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ತೆರಳಿದ ತೇಜ್ ಪ್ರತಾಪ್ ಆಕೆಯ ಜೊತೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿ ನಂತರ ಐಫೋನ್ ಕೊಟ್ಟಿದ್ದಾರೆ.
तेज भैया गलत खानदान में पैदा हो गए..
तेज भैया पटना में टहल रहे थे तभी पेन बेचने वाली एक बच्ची आई भैया ने पूछा पढ़ाई करती हो तो बच्ची बोली नहीं मेरे पास फोन नहीं है ऑनलाइन क्लास चल रहा है इसीलिए पढ़ाई नहीं करती
तेज भैया ने तुरंत अपना आईफोन उसे दे दिया और कहा लो अब पढ़ाई करना। pic.twitter.com/u3iSunpNR8— हम लोग We The People (@humlogindia) December 5, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post