ಏಕದಿನ ಕ್ರಿಕೆಟ್ ನಾಯಕನಾಗಿ ರೋಹಿತ್ ಶರ್ಮಾ ಅವರು ನೇಮಕವಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವ ಇಲ್ಲಿಗೆ ಯುಗಾಂತ್ಯ ಕಂಡಿದೆ. ಈ ಹಿಂದೆ ಟಿ20 ನಾಯಕತ್ವ ತೊರೆದಿದ್ದ ವಿರಾಟ್ ಕೊಹ್ಲಿ, ಏಕದಿನ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಕೇವಲ ಟೆಸ್ಟ್ ತಂಡದಲ್ಲಿ ಮಾತ್ರ, ನಾಯಕನಾಗಿ ಕೊಹ್ಲಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ: ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ತಂಡ
2021ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರೆ, ರೋಹಿತ್ ಶರ್ಮಾ ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ತಂಡಕ್ಕೆ ರೋಹಿತ್ ಶರ್ಮಾರನ್ನ ನೇಮಿಸಲಾಗಿದೆ.
ಏಕದಿನ ಹಾಗೂ ಟಿ20 ಮಾದರಿಗೆ ಒಬ್ಬನೇ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಆಯ್ಕೆ ಸಮಿತಿ ಮೊದಲೇ ಹೇಳಿತ್ತು. ಈ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆ ಚರ್ಚೆ ನಡೆಸಿದ್ರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
ನಾಯಕತ್ವದಿಂದ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದ ಕೊಹ್ಲಿ, ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸಿದ್ರು. ಹೀಗಾಗಿ ಕೊಹ್ಲಿ, ಮರಳಿ ಫಾರ್ಮ್ಗೆ ಬರಲಿ ಎಂಬ ಕಾರಣಕ್ಕೆ ನಾಯಕತ್ವವನ್ನ ಕೊಹ್ಲಿಯಿಂದ ರೋಹಿತ್ ಶರ್ಮಾಗೆ ಹಸ್ತಾಂತರಿಸಲಾಗಿದೆ.
More details on #SAvIND tour here – https://t.co/zPwreJoFkT#TeamIndia
— BCCI (@BCCI) December 8, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post