ಬಾಲಿವುಡ್ ಸೆಲೆಬ್ರಿಟಿ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವೆಲ್ಕಮ್ ಕಾರ್ಡ್ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಡಿ. 9 ರಂದು ವಿಕ್ಕಿ ಕತ್ರಿನಾ ವಿವಾಹ ರಾಜಸ್ಥಾನದ ಸಿಕ್ಸ್ ಸೆನ್ಸ್ ಹೋಟೆಲ್ನಲ್ಲಿ ನಡೆಯಲಿದ್ದು, ವಿವಾಹಪೂರ್ವ ಕಾರ್ಯಗಳು ಆರಂಭ ಆಗಿವೆ. ಮದುವೆ ನಡೆಯುವ ಸ್ಥಳಕ್ಕೆ ಅತಿಥಿಗಳು ಆಗಮಿಸುತ್ತಿದ್ದಾರೆ. ಮದುವೆ ಸ್ಥಳಕ್ಕೆ ಆಗಮಿಸಿದ ಅತಿಥಿಗಳಿಗೆ ವೆಲ್ಕಮ್ ಕಾರ್ಡ್ ನೀಡುವ ಮೂಲಕ ಅವರನ್ನು ಮದುವೆ ಮನೆಗೆ ಸ್ವಾಗತಿಸಲಾಯ್ತು.
ಅತಿಥಿಗಳಿಗೆ ನೀಡಲಾದ ಈ ವೆಲ್ಕಮ್ ಕಾರ್ಡ್ನಲ್ಲಿ ಮದುವೆ ಸಂಭ್ರಮದ ಮಾಹಿತಿಗಳನ್ನು ಯಾರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ” ಕೊನೆಗೂ ನೀವು ಇಲ್ಲಿಗೆ ಬಂದು ತಲುಪಿದ್ದೀರ. ಜೈಪುರದಿಂದ ರಣರಂಬೂರ್ವರೆಗೂ ನಿಮ್ಮ ಪ್ರಯಾಣ ಸುಖಕರವಾಗಿತ್ತು ಅಂತ ಭಾವಿಸುತ್ತೇವೆ. ನಾವು ನಿಮಗಾಗಿ ಸಿದ್ಧಪಡಿಸಿದ ಆಹಾರಗಳನ್ನು ಸ್ವೀಕರಿಸಿ. ದಯವಿಟ್ಟು ಯಾರೂ ಕೂಡ ಮದುವೆ ಸಂಭ್ರಮಕ್ಕೆ ಬರುವಾಗ ನಿಮ್ಮ ಮೊಬೈಲ್ ಪೋನ್ಗಳನ್ನು ತರದೇ ನಿಮ್ಮ ರೂಮ್ನಲ್ಲಿ ಇಡಿ. ಮದುವೆ ಸಂಭ್ರಮದ ಪೋಟೋಗಳನ್ನು ಯಾರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ.” ಎಂದು ವೆಲ್ಕಮ್ ಕಾರ್ಡ್ನಲ್ಲಿ ಬರೆಯಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post