ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸಮರ ಮುಗೀತು. ಇನ್ನೇನಿದ್ದರೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಕಡೆ ಗಮನ. ಈ ಟೆಸ್ಟ್ ಸರಣಿಗೆ ಯಾವೆಲ್ಲಾ ಆಟಗಾರರು ಆಯ್ಕೆ ಆಗ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಆಟಗಾರನಿಗೆ, ತಂಡದಲ್ಲಿ ಸ್ಥಾನವೇ ಇಲ್ಲ ಎಂದು ಹೇಳಲಾಗ್ತಿದೆ. ಯಾರು ಆ ಆಟಗಾರ..? ಬನ್ನಿ ನೋಡೋಣ..
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನ ಭಾರತ ಗೆದ್ದು ಬೀಗಿದೆ. ಇದೀಗ ಕೊಹ್ಲಿ ಬಾಯ್ಸ್ ಚಿತ್ತ, ಸೌತ್ ಆಫ್ರಿಕಾ ಪ್ರವಾಸದ ಮೇಲೆ.! ಇದೇ ವಾರದಲ್ಲಿ ಆಫ್ರಿಕಾ ಸರಣಿಗೆ, ತಂಡ ಕೂಡ ಪ್ರಕಟಗೊಳ್ಳಲಿದೆ. ಈ ಹಿಂದಿನ ಮತ್ತು ಪ್ರಸ್ತುತ ನೀಡಿದ ಪ್ರದರ್ಶನದ ಮಾನದಂಡದ ಆಧಾರದ ಮೇಲೆ, ಆಟಗಾರರಿಗೆ ಮಣೆ ಹಾಕೋದಕ್ಕೆ ಆಯ್ಕೆ ಸಮಿತಿ ಸಿದ್ಧತೆ ನಡೆಸಿದೆ. ಆದರೆ ಅನುಭವಿ ವೇಗಿ ಇಶಾಂತ್ ಶರ್ಮಾ, ಸ್ಥಾನ ಪಡೆಯೋದೇ ಅನುಮಾನ, ಎನ್ನಲಾಗ್ತಿದೆ.
ಕಿವೀಸ್ ಸರಣಿಯಲ್ಲೂ ಇಶಾಂತ್ ಫ್ಲಾಪ್ ಶೋ..!
ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ, ವೇಗಿ ಇಶಾಂತ್ ಶರ್ಮಾ ಕಳಪೆ ಪ್ರದರ್ಶನ ಮುಂದುವರೆದಿದೆ. ಟೀಮ್ ಇಂಡಿಯಾ ಸ್ಪಿನ್ನರ್ಗಳು ಮ್ಯಾಜಿಕ್ ಸ್ಪೆಲ್ ಮಾಡ್ತಿದ್ರೆ, ವೇಗಿ ಇಶಾಂತ್ ಮಾತ್ರ ಪ್ರವಾಸಿ ತಂಡದ ಬ್ಯಾಟರ್ಗಳ ಸದ್ದಡಗಿಸಲು, ಆಗಲೇ ಇಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಇಶಾಂತ್, ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಳಪೆ ಪ್ರದರ್ಶನದಿಂದ ಇಶಾಂತ್, ಎರಡನೇ ಟೆಸ್ಟ್ ಪಂದ್ಯದಿಂದ ದೂರ ಉಳಿಯಬೇಕಾಯ್ತು.
WTC ಫೈನಲ್, ಇಂಗ್ಲೆಂಡ್ ವಿರುದ್ಧವೂ ಇಶಾಂತ್ ಕಳಪೆ ಬೌಲಿಂಗ್..!
ಕೇವಲ ನ್ಯೂಜಿಲೆಂಡ್ ಸರಣಿಯಲ್ಲಿ ನೀಡಿದ ಕೆಟ್ಟ ಪ್ರದರ್ಶನದಿಂದ ಮುಂದಿನ ಸರಣಿಗೆ ದೂರ ಆಗ್ತಾರೆ ಎಂದು ಹೇಳಲಾಗ್ತಿಲ್ಲ. ಈ ಹಿಂದೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲೂ ಇಶಾಂತ್, ಕೆಟ್ಟ ಪ್ರದರ್ಶನ ನೀಡಿದ್ದಾರೆ.
WTC ಫೈನಲ್ನಲ್ಲಿ ಇಶಾಂತ್ ಪ್ರದರ್ಶನ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಇಶಾಂತ್, ಮೊದಲ ಇನ್ನಿಂಗ್ಸ್ನಲ್ಲಿ 25 ಓವರ್ ಬೌಲ್ ಮಾಡಿದ್ರು. ಅದ್ರಲ್ಲಿ 9 ಓವರ್ ಮೇಡಿನ್ ಎಸೆದಿದ್ದು, 48ರನ್ ನೀಡಿ 3 ವಿಕೆಟ್ ಪಡೆದಿದ್ರು. ಇನ್ನು 2ನೇ ಇನ್ನಿಂಗ್ಸ್ನಲ್ಲಿ 6.2 ಓವರ್ ಬೌಲಿಂಗ್ ಮಾಡಿ, 2 ಓವರ್ ಮೇಡಿನ್ ಮಾಡಿದ್ದಾರೆ. 21 ರನ್ ನೀಡಿ ವಿಕೆಟ್ ಲೆಸ್ ಆಗಿದ್ದಾರೆ.
ಅಷ್ಟೆ ಅಲ್ಲ, ಸೆಪ್ಟೆಂಬರ್ನಲ್ಲಿ ನಡೆದ ಇಂಗ್ಲೆಂಡ್ ಸರಣಿಯಲ್ಲೂ ಇಶಾಂತ್ ಶರ್ಮಾದ್ದು, ಇದೇ ಫಜೀತಿ. ಜೊತೆಗೆ ಫೆಬ್ರವರಿಯಲ್ಲಿ ನಡೆದ ಭಾರತ-ಇಂಗ್ಲೆಂಡ್ ಸರಣಿಯಲ್ಲೂ ಫ್ಲಾಪ್ ಆಗಿದ್ರು. ಹಾಗಂತ ಆ ಸರಣಿಯಲ್ಲಿ ಇಶಾಂತ್ರ ಅಂಕಿ-ಅಂಶಗಳೇ ಬಹಿರಂಗಪಡಿಸಿವೆ.
ಇಂಗ್ಲೆಂಡ್ ವಿರುದ್ಧ ಸರಣಿಗಳಲ್ಲಿ ಇಶಾಂತ್
ಇಂಗ್ಲೆಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಸರಣಿಗಳಲ್ಲಿ ಇಶಾಂತ್ 06 ಪಂದ್ಯಗಳನ್ನಾಡಿದ್ದು, ಬರೋಬ್ಬರಿ 115 ಓವರ್ ಎಸೆದು 690 ರನ್ ನೀಡಿದ್ದಾರೆ. ಆದರೆ ಇಷ್ಟು ಪಂದ್ಯಗಳಲ್ಲಿ ಇಶಾಂತ್ ಪಡೆದಿರೋ ವಿಕೆಟ್ಗಳು 11 ಮಾತ್ರ.
ಫಿಟ್ನೆಸ್ ಸಮಸ್ಯೆಗೂ ಸಿಲುಕಿದ್ದಾರೆ ಡೆಲ್ಲಿ ಸ್ಟಾರ್..!
ಇಶಾಂತ್ ಶರ್ಮಾ ಅಂಕಿ-ಅಂಶಗಳು ಮಾತ್ರವಲ್ಲ, ಫಿಟ್ನೆಸ್ ಸಮಸ್ಯೆ ಕೂಡ ಆತನಿಗೆ ಹಿನ್ನಡೆಯಾಗುವಂತೆ ಮಾಡ್ತಿದೆ. ಇದರಿಂದಲೇ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಬೆಂಚ್ ಕಾಯುವಂತೆ ಆಗಿತ್ತು. ಹೀಗಾಗಿ ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆ ಮಾಡಬೇಕೆ.? ಬೇಡವೇ ಎಂಬ ಪ್ರಶ್ನೆ ಆಯ್ಕೆ ಸಮಿತಿಯದ್ದಾಗಿದೆ.
ಇಶಾಂತ್ ಕಾಂಪಿಟೇಟರ್ ಆಗಿದ್ದಾರೆ ಆವೇಶ್, ಉಮೇಶ್, ಪ್ರಸಿದ್ಧ್..!
ಹೌದು..! ಈ ಹಿರಿಯ ವೇಗಿಗೆ ಕಾಂಪಿಟೇಟರ್ ಆಗಿ, ಯುವ ವೇಗಿಗಳಾದ ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ ಇದ್ದಾರೆ. ಜೊತೆಗೆ ಉಮೇಶ್ ಯಾದವ್ ಕೂಡ ಪೈಪೋಟಿ ನೀಡ್ತಿದ್ದಾರೆ. ಇನ್ನು ಸಿಕ್ಕ ಅವಕಾಶದಲ್ಲೂ ಉಮೇಶ್ ವಿಕೆಟ್ ಬೇಟೆಯಾಡಿ, ಮೇಲುಗೈ ಸಾಧಿಸ್ತಿದ್ದಾರೆ. ಹಾಗೆಯೇ ಆವೇಶ್, ಪ್ರಸಿದ್ಧ್ ಕೃಷ್ಣ ಕೂಡ, ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇಂತಹ ಸಮಯದಲ್ಲಿ ಇಶಾಂತ್ ವೈಫಲ್ಯ, ಈ ಮೂವರಿಗೂ ವರದಾನವಾಗೋ ಸಾಧ್ಯತೆ ಇದೆ.
ಮೊದಲಿನಂತಿಲ್ಲ ಇಶಾಂತ್ ಬೌಲಿಂಗ್ನಲ್ಲಿದ್ದ ಧಮ್.!
ಇದು ನೂರಕ್ಕೆ ನೂರು ಸತ್ಯ. ಈ ಅಜಾನುಬಾಹು ಬೌಲರ್ ಅಂದರೆ, ಕ್ರಿಕೆಟ್ಗೆ ಕಾಲಿಟ್ಟ ಸಂದರ್ಭದಲ್ಲಿ ದಿಗ್ಗಜ ಬ್ಯಾಟ್ಸ್ಮನ್ ಕೂಡ ಹೆದರುತ್ತಿದ್ದರು. ಪರ್ಫೆಕ್ಟ್ ಲೈನ್ ಅಂಡ್ ಲೆಂಥ್ ಬೌಲಿಂಗ್ ಮಾಡಿ, ವಿಕೆಟ್ ಬೇಟೆಯಾಡ್ತಿದ್ರು. ವಿಕೆಟ್ ಪಡೆಯದ ಪಂದ್ಯವೇ ಇರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಶಾಂತ್ ಪ್ರದರ್ಶನ ತೀವ್ರವಾಗಿ ಕಳೆಗುಂದಿದೆ. ಇದು ಒಂದಲ್ಲ ಒಂದು ದಿನ ತಂಡದಿಂದಲೇ ದೂರು ಮಾಡುವಂತೆ ಮಾಡುತ್ತೆ.
ಒಟ್ಟಿನಲ್ಲಿ ಡೆಲ್ಲಿ ಎಕ್ಸ್ಪ್ರೆಸ್ ಇಶಾಂತ್ ಶರ್ಮಾ, ಫಿಟ್ನೆಸ್ ಮತ್ತು ಕೆಟ್ಟ ಪ್ರದರ್ಶನದ ಕಾರಣ, ಮುಂದಿನ ಸೌತ್ ಆಫ್ರಿಕಾ ಸರಣಿಗೆ ಆಯ್ಕೆ ಆಗೋದು ಅನುಮಾನ ಎಂದೇ ಹೇಳಲಾಗ್ತಿದೆ. ಹಾಗಾಗಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.
Winning is a great feeling and celebrating it with the team makes it even better!💪🇮🇳 pic.twitter.com/RzhsvmFQeG
— Ishant Sharma (@ImIshant) December 6, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post