ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತರಕಾರಿ ಬೆಲೆಗಳೆಲ್ಲಾ ಗಗನಕ್ಕೇರಿಕೆಯಾಗಿದೆ.
ಅದರಲ್ಲೂ ಟೊಮ್ಯಾಟೋ ಬೆಲೆಯಂತೂ ಪೆಟ್ರೋಲ್ ರೇಟ್ಗಿಂತ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಭಾರೀ ಹೊರೆ ಬಿದ್ದಂತಾಗಿದೆ. ಭಾರೀ ಮಳೆಯಾದ ಹಿನ್ನೆಲೆ ಸರಕು ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ಟೊಮ್ಯಾಟೋ 1 ಕೆಜಿಗೆ 140 ರಿಂದ 150 ರೂಪಾಯಿಯಷ್ಟು ಏರಿಕೆಯಾಗಿದೆ.
ಇನ್ನುಳಿದಂತೆ ಕ್ಯಾರೇಟ್, ಬೀನ್ಸ್ ಇನ್ನಿತರ ತರಕಾರಿ ಬೆಲೆಗಳು ಸಹ 100 ರ ಗಡಿ ತಲುಪಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇತ್ತ ಬೆಂಗಳೂರಿನಲ್ಲೂ ಮತ್ತೆ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು, ಕೆಜಿಗೆ 80 ರಿಂದ 90 ರೂಪಾಯಿಯಷ್ಟಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post