14 ಆವೃತ್ತಿಗಳ ಐಪಿಎಲ್ ಸಕ್ಸಸ್ಫುಲ್ ಕಂಡಿದೆ. ಆದರೆ ಈ 14 ಸೀಸನ್ಗಳೇ ಒಂದು ಲೆಕ್ಕವಾದ್ರೆ, 15ನೇ ಆವೃತ್ತಿಯ ಶ್ರೀಮಂತ ಲೀಗ್ ಮತ್ತೊಂದು ಲೆಕ್ಕವಾಗಿರಲಿದೆ. ಯಾಕಂದರೆ ಹರಾಜಿಗೆ ಇನ್ನೂ ಒಂದು ತಿಂಗಳಿರೋವಾಗಲೇ, ಫ್ರಾಂಚೈಸಿಗಳು ನಡೆಸ್ತಿರೋ ವಿಶೇಷ ಅಧ್ಯಯನ ಅದಕ್ಕೆ ಸಾಕ್ಷಿಯಾಗ್ತಿದೆ. ಏನದು..? ಬನ್ನಿ ನೋಡೋಣ..!
ವಿಜಯ್ ಹಜಾರೆ, ಬಿಗ್ಬ್ಯಾಷ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್… ಹೀಗೆ ಹಲವು ಟೂರ್ನಿಗಳು ಚಾಲ್ತಿಯಲ್ಲಿವೆ. ಆದರೆ ಈ ಲೀಗ್ಗಳ ಮೇಲೆ IPL ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಮೆಗಾ ಹರಾಜಿಗೆ ಒಂದು ತಿಂಗಳಿದೆ. ಅದಾಗಲೇ ಫ್ರಾಂಚೈಸಿಗಳು ದೇಶೀ ಯುವ ಆಟಗಾರರ ಹುಡುಕಾಟದಲ್ಲಿ ಬ್ಯುಸಿಯಾಗಿವೆ. ಹಾಗಾಗಿ ಆಟಗಾರರ ಖರೀದಿಗೆ ಫ್ರಾಂಚೈಸಿಗಳು, ಸ್ಕೌಟ್ಸ್ಗಳನ್ನ ನೇಮಿಸಿದೆ. ವಿಜಯ್ ಹಜಾರೆ, BBL, LPL ಈ ಲೀಗ್ಗಳಲ್ಲಿ ಯುವ ಪ್ರತಿಭೆಗಳನ್ನ ಗುರುತಿಸುವುದೇ, ಸ್ಕೌಟ್ಸ್ಗಳ ಕೆಲಸವಾಗಿದೆ.
15ನೇ ಆವೃತ್ತಿಯ IPLಗೆ ಹತ್ತು ತಂಡಗಳ ರೋಚಕತೆ, ಊಹೆಗೂ ಸಿಲುಕದ್ದು ಎಂದು ಹೇಳಲಾಗ್ತಿದೆ. ರನ್ಭೂಮಿಯಲ್ಲಿ ಹೊಡಿಬಡಿ ಆಟಕ್ಕೆ ಯುವ ಕ್ರಿಕೆಟಿಗರಿಗಾಗಿ ತಂಡಗಳು ಅಧ್ಯಯನ ನಡೆಸ್ತಿರೋದೇ, ಅದಕ್ಕೆ ಕಾರಣ.! ಸದ್ಯ ಹಳೆಯ 8 ತಂಡಗಳು ಟ್ಯಾಲೆಂಟೆಡ್ ಪ್ಲೇಯರ್ಸ್ಗಳನ್ನ ಕೈ ಬಿಟ್ಟಿವೆ. ಇವರಲ್ಲಿ ಅನೇಕರು ಮತ್ತೆ ಹರಾಜಿಗೆ ಬರೋದು ಕನ್ಫರ್ಮ್. ಆದರೆ ಇವರನ್ನ ಖರೀದಿಸಿದ್ರೆ ಪರ್ಸ್ ಬೇಗನೇ ಖಾಲಿಯಾಗುತ್ತೆ. ಹಾಗಾಗಿ ಪ್ರಸ್ತುತ ಲೀಗ್ಗಳಲ್ಲಿ ಭರವಸೆ ಮೂಡಿಸ್ತಿರುವ ಆಟಗಾರರನ್ನ ಗುರುತಿಸಿ, ಕಡಿಮೆ ಮೊತ್ತಕ್ಕೆ ಖರೀದಿಸೋದು ಫ್ರಾಂಚೈಸಿಗಳ ಫ್ಲಾನ್..! ಅದಕ್ಕಾಗಿಯೇ ಸ್ಕೌಟ್ಸ್ಗಳನ್ನ ನೇಮಿಸಲಾಗಿದೆ.
ಹೊಸ ಪ್ರತಿಭೆಗಳಿಗೆ ವೇದಿಕೆ
ರಿಟೆನ್ಶನ್ ಪ್ರಕ್ರಿಯೆ ಮುಗಿದ ಬಳಿಕ ಕೈ ಬಿಟ್ಟ ಆಟಗಾರರನ್ನ ಮರಳಿ ಹರಾಜಿನಲ್ಲಿ ಪಡೆಯಬಹುದು. ಆದ್ರೆ ಮರಳಿ ಖರೀದಿಸಿದರೆ, ಹೆಚ್ಚು ಮೊತ್ತಕ್ಕೆ ಬಿಡ್ ಮಾಡಬೇಕು. ಹೀಗಾಗಿ BBL, LPL, ವಿಜಯ್ ಹಜಾರೆಯಲ್ಲಿ ಯುವ ಪ್ರತಿಭೆಗಳನ್ನ ಗುರುತಿಸಿ ಅವರ ಪಟ್ಟಿ ಸಿದ್ಧಪಡಿಸಲಾಗ್ತಿದೆ. ಹೊಸ ಪ್ರತಿಭೆಗಳನ್ನ ಗುರುತಿಸಿ ಅವರಿಗೆ ವೇದಿಕೆ ಸಜ್ಜು ಕಲ್ಪಿಸಿಕೊಡುತ್ತೇವೆ. ಆದರಿದು ನಮಗೆ ಒತ್ತಡದ ಕೆಲಸ’ಫ್ರಾಂಚೈಸಿ, ಸ್ಕೌಟ್ಸ್
ಹಾಗಾದ್ರೆ ಸ್ಕೌಟ್ಸ್, ಟಿ-ಟ್ವೆಂಟಿ ಲೀಗ್ಗಳಲ್ಲಿ ಆಟಗಾರರನ್ನ ಹೇಗೆ ಗುರುತಿಸ್ತಾರೆ..?
ಸ್ಕೌಟ್ಸ್ಗಳ ಕೆಲಸವೇನು..?
BPL, LPL, ವಿಜಯ್ ಹಜಾರೆ ಟೂರ್ನಿಗಳಿಗೆ ಭೇಟಿ ನೀಡಿರುವ ಆಯಾ ಫ್ರಾಂಚೈಸಿಗಳ ಸ್ಕೌಟ್ಸ್ಗಳು, ಟೂರ್ನಿಯ ಪ್ರತಿ ಆಟಗಾರರ ಮೇಲೆ ಗಮನ ಹರಿಸಲಿದ್ದಾರೆ. ಅದ್ಭುತ ಪ್ರದರ್ಶನ ತೋರಿದ ಪ್ಲೇಯರ್ಗಳ ಪಟ್ಟಿ ಸಿದ್ಧಪಡಿಸಿ, ತಮ್ಮ ಫ್ರಾಂಚೈಸಿಗಳಿಗೆ ಸಲ್ಲಿಸಬೇಕು. ಪಟ್ಟಿಯಲ್ಲಿರುವ ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದೇ ಆದರೆ ಅವರನ್ನೇ ಖರೀದಿಗೆ ಮೊದಲ ಆದ್ಯತೆಯಾಗಿ ಪರಿಗಣಿಸೋದು ಇದರ ಉದ್ದೇಶವಾಗಿದೆ.
The stepping stone to success in #VIVOIPL – the #VIVOIPLRetention is here! 🤩
Who's retaining whom? Find out LIVE, only on @StarSportsIndia
Tonight, 9:30 PM onwards | Star Sports 1/1HD/1 Hindi/1HD Hindi pic.twitter.com/fanXGVxBRR
— IndianPremierLeague (@IPL) November 30, 2021
ಸ್ಕೌಟ್ಸ್ಗಳು ಗುರುತಿಸಿದ ಆಟಗಾರರಲ್ಲಿ, ಆರ್ಸಿಬಿ ಟಿಮ್ ಡೇವಿಡ್..
ಹರಾಜಿಗೂ ಮುನ್ನ ಟಿ20 ಲೀಗ್ಗಳಲ್ಲಿ ಮಿಂಚಿದವರ ಪಟ್ಟಿಯಲ್ಲಿ, ಆರ್ಸಿಬಿಯ ಟಿಮ್ ಡೇವಿಡ್ ಕೂಡ ಇದ್ದಾರೆ. ವೇಗದ ಬೌಲರ್ಗಳ ತಾಣವಾಗಿರುವ BBLನಲ್ಲಿ, ಮೆರಿಡಿತ್, ಜೈ ರಿಚರ್ಡ್ಸನ್ರಂತಹ ಆಟಗಾರರನ್ನ ಸ್ಕೌಟ್ಸ್ಗಳು ಗುರುತಿಸಿದ್ದಾರೆ. ಜೊತೆಗೆ ಆಲ್ರೌಂಡರ್ ಡಿ ಡಾರ್ಸಿ ಶಾರ್ಟ್, ಕ್ರಿಸ್ ಲಿನ್ ಮೇಲೂ ಆಸಕ್ತಿ ತೋರಿದ್ದಾರೆ. ವಿಜಯ್ ಹಜಾರೆ ಟೂರ್ನಿಗೆ ಬಂದರೆ, ಆಟಗಾರರ ಪಟ್ಟಿಯೇ ದೊಡ್ಡದಿದೆ. ಇನ್ನು LPLನಲ್ಲಿ ವನಿಂದು ಹಸರಂಗ, ದುಷ್ಮಂತ ಚಮೀರಾ.. ಹೀಗೆ ಹಲವರ ಮೇಲೆ ಸ್ಕೌಟ್ಸ್ಗಳು ಕಣ್ಣಿಟ್ಟಿದ್ದಾರೆ.
IPLನಲ್ಲಿ ರಿಟೈನ್ ಆಗದ ಆಟಗಾರರ ಮೇಲೆ ಕೂಡ ಮೇಲ್ವಿಚಾರಣೆ ನಡೆಸುವಂತೆ ಫ್ರಾಂಚೈಸಿಗಳು, ಸ್ಕೌಟ್ಸ್ಗಳಿಗೆ ಸೂಚಿಸಿದ್ವು. ಮೆಗಾ ಹರಾಜಿಗೆ ಮೊದಲೇ ತಂಡಕ್ಕೆ ಬೇಕಾದ ಆಟಗಾರರ ಆಯ್ಕೆಗೆ, ಅಧ್ಯಯನ ನಡೆಸ್ತಿರೋದು ಇದೇ ಮೊದಲ ಬಾರಿಗೆ. ಹಾಗಾಗಿ ರಂಗು ರಂಗಿನ ಐಪಿಎಲ್, ಈ ಬಾರಿ ಮತ್ತಷ್ಟು ರಂಗು ಪಡೆದುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.
A complete breakdown of the VIVO IPL 2022 Player Retention.
More details here – https://t.co/osE28OG4VS #VIVOIPL pic.twitter.com/TcTpKaznKd
— IndianPremierLeague (@IPL) November 30, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post