ಮಧ್ಯಪ್ರದೇಶದಲ್ಲಿ ಚಾಯ್ವಾಲಾನೊಬ್ಬನ ಸಖತ್ ಮೆರವಣಿಗೆ ಊರನ್ನೇ ಫಿದಾ ಮಾಡಿದೆ. ಆ ಮೆರವಣಿಗೆ ನೋಡಲು ಎರಡು ಕಣ್ಣು ಸಾಲದು.. ಸಖತ್ ಆಗಿರೋ ರಥ.. ಜೊತೆಯಲ್ಲಿ ಪುಟ್ಟ-ಮಕ್ಕಳು, ಬ್ಯಾಂಡು-ಬಾಜಾ.. ಥರಾವರಿ ಲೈಟಿಂಗ್.. ಡೊಳ್ಳು ಕುಣಿತ.. ಇಂಥ ಮೆರವಣಿಗೆ ನೋಡಿದ್ರೆ ಏನು ಅನಿಸುತ್ತೆ ಹೇಳಿ?
ಓಹ್ ಯಾರಿಽ ಇದು? ಯಾರೋ ಮದ್ವೆ ಗಂಡಿನ ಮೆರವಣಿಗೆ ಹೋಗ್ತಿದೆಯಾ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಇಲ್ಲದಿದ್ದರೆ ಯಾರೋ ಯಾವುದೋ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಚಾಂಪಿಯನ್ ಊರಿಗೆ ಬಂದಿದ್ದಕ್ಕೆ, ಊರವರೇ ಮೆರವಣಿಗೆ ಮಾಡ್ತಿದ್ದಾರೆ ಅಂತಾನೂ ಅನಿಸಬಹುದು.. ಅಥವಾ ಕೊನೆ ಪಕ್ಷ ಯಾರೋ ತಾಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿರಬಹುದು.. ಅದಕ್ಕೆ ಇಂಥ ಮೆರವಣಿಗೆಯಲ್ಲಿ ಹೊರಟಿದ್ದಾರೆ ಅನ್ನೋ ಭಾವನೆ ಬರಬಹುದು.. ಆದ್ರೆ ನಂಬಿ ಇದ್ಯಾವ ಕಾರಣಕ್ಕೂ ಈ ಮೆರವಣಿಗೆ ನಡಿಯುತ್ತಿಲ್ಲ..
ಭವ್ಯ ಮೆರವಣಿಗೆಗೆ ಕಾರಣವೇನು?
ಅಷ್ಟಕ್ಕೂ ಈ ಭವ್ಯ ಮೆರವಣಿಗೆಗೆ ಕಾರಣ ಏನು ಅಂದ್ರೆ.. ನಿಮಗೆ ನಂಬಿಕೇನೇ ಬಾರದಿರಬಹುದು.. ಯಾಕಂದ್ರೆ ಈ ವ್ಯಕ್ತಿ ಮೆರವಣಿಗೆಗೆ ಕಾರಣ ಒಂದು ಹೊಸ ಸ್ಮಾರ್ಟ್ಫೋನ್..!
ಯೆಸ್ ಮಧ್ಯಪ್ರದೇಶದ ಶಿವಪುರಿಯಲ್ಲಿ ಮುರಾರಿ ಅನ್ನೋ ಹೆಸರಿನ ಚಾಯ್ವಾಲಾ ಇದ್ದಾರೆ. ಇವ್ರು ಇದೇ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಅನ್ನ ಕೊಂಡುಕೊಂಡಿದ್ದಾರೆ. 12,500 ರೂಪಾಯಿಯ ಈ ಸ್ಮಾರ್ಟ್ಫೋನ್ ಅವರ ಬದುಕಿನ ಮೊಟ್ಟ ಮೊದಲ ಸ್ಮಾರ್ಟ್ಫೋನ್.. ಇದು ಅವರಿಗೆ ಅದ್ಯಾವ ಪರಿ ಖುಷಿ ತಂದು ಕೊಡುತ್ತೆ ಅಂದ್ರೆ.. ತಮ್ಮ ಫೋನ್ ಜೊತೆ ಮೆರವಣಿಗೆಯಲ್ಲಿ ಹೋಗೋಕೆ ಅವರು ನಿರ್ಧಾರ ಮಾಡ್ತಾರೆ.. ಬಣ್ಣ ಬಣ್ಣದ ಲೈಟು, ಬ್ಯಾಂಡ್-ಢೋಲ್ ಜೊತೆ ರಥದಲ್ಲಿ ಕುಳಿತು ಕೈಯಲ್ಲಿ ಫೋನ್ ಹಿಡಿದು ಮೆರವಣಿಗೆಯಲ್ಲಿ ಸಾಗ್ತಾರೆ.. ತಾವಿಷ್ಟೇ ಅಲ್ಲ ತಮ್ಮ ಜೊತೆ ತಮ್ಮ ಮಕ್ಕಳನ್ನೂ ಕೂರಿಸಿಕೊಂಡು ಊರೆಲ್ಲ ಮೆರವಣಿಗೆ ಮಾಡಿಕೊಂಡು ಮನೆಗೆ ಹೋಗ್ತಾರೆ.. ಸದ್ಯ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಅಂದಹಾಗೆ, ಇದು ನೋಡೋರಿಗೆ ವಿಚಿತ್ರ ಅನಿಸಬಹುದು. ಅದೆಷ್ಟೋ ಜನರಿಗೆ ಕೋಟ್ಯಂತರ ಮೌಲ್ಯದ ವಸ್ತುಕೊಂಡು ತಂದರೂ ಮುಖದಲ್ಲಿ ಖುಷಿ ಮೂಡಲ್ಲ.. ಆದ್ರೆ ಕೆಲವರಿಗೆ ಪುಟ್ಟ ಪುಟ್ಟ ಸಂತಸಗಳೂ ಬದುಕಿನ ಮಹತ್ವದ ಸಂಗತಿಯಾಗಿ ಬದಲಾಗುತ್ತವೆ.. ಅಷ್ಟಕ್ಕೂ ಸಂತಸ ಪಡಲು ಯಾವುದೇ ನಿಯಮವಂತೂ ಇಲ್ಲವಲ್ಲ..!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post