ಮಹಿಳೆಯೊಬ್ಬರು ಪ್ರವಾಸದಲ್ಲಿದ್ದ ಪತಿ ತೆಗೆದುಕೊಂಡಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಫೋಟೋದಿಂದಲೇ ತನ್ನ ಪತಿಯ ನೈಜ ಮುಖವಾಡ ತಿಳಿದು ಬಂದಿದ್ದು, ಅವರಿಂದ ದೂರವಾಗಿದ್ದೀನಿ. ಫೋಟೋ ನೋಡಿದರೆ ನಿಮ್ಗೆ ಏನು ಅನ್ನಿಸುತ್ತಿದೆ ಎಂದು ತನ್ನ ಫಾಲೋವರ್ಗಳನ್ನು ಪ್ರಶ್ನೆ ಮಾಡಿದ್ದಾರೆ.
ನನ್ನ ಪತಿ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ತಾನು ಧರಿಸಿದ್ದ ಕೋಟ್ ಹೇಗಿದೆ ಎಂದು ತೋರಿಸಲು ಈ ಸೆಲ್ಫಿ ಫೋಟೋ ಕಳುಹಿಸಿದ್ದರು. ಆದರೆ ಇದರಲ್ಲಿ ಕೆಲವು ವಸ್ತುಗಳು ನನ್ನ ಕಣ್ಣಿಗೆ ಬಿದ್ದು, ಈಗ ಆತ ನನ್ನಿಂದ ದೂರ ಆಗಿದ್ದಾನೆ. ನಿಮ್ಗೆ ಅಂತಹ ವ್ಯತ್ಯಾಸಗಳೇನಾದರೂ ಕಂಡು ಬಂದಿದೆಯಾ ಅಂತ ಕೇಳಿದ್ದಾರೆ.
ಈ ಪೋಸ್ಟ್ ಹಲವು ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಒಬ್ಬ ಕನ್ನಡಿಯ ಎದುರಿದ್ದ ಹೇರ್ ಸ್ಟ್ರೈಟರ್ನರ್ ಕಾಣ್ತಿದೆ.. ಫೋಟೋದಲ್ಲಿರೋ ವ್ಯಕ್ತಿಯ ಕೈಯಲ್ಲಿ ಉಂಗುರ ಮಿಸ್ ಆಗಿದೆ.. ಮಹಿಳೆಯರು ಬಳಸೋ ಬಾಡಿ ವಾಶ್ ಟೇಬಲ್ ಮೇಲಿದೆ.. ಬಾಚಣಿಗೆ.. ಇದೇ ಎಂದು ಹಲವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇನ್ನು ಕೆಲವರು ಕಾಮೆಂಟ್ಗಳಿಗೆ ಪ್ರತಿಕ್ರಿಯೆ ನೀಡಿ, ಹೇರ್ ಸ್ಟ್ರೈಟರ್ನರ್ ಕೆಲ ಹೋಟೆಲ್ಗಳಲ್ಲಿ ನೀಡುತ್ತಾರೆ. ಆದರೆ ಅದನ್ನು ಬಳಬೇಕಾದರೆ ನಾವು ವಾರ್ಡ್ಬೋರ್ಡ್ನಿಂದ ತೆಗೆಯ ಬೇಕು ಯಾರು ಕನ್ನಡಿ ಎದುರು ಇಟ್ಟಿರುವುದಿಲ್ಲ ಎಂದು ಸಮರ್ಥನೆಯನ್ನು ನೀಡಿದ್ದಾರೆ. ಇನ್ನು ಕೆಲವರು ಈ ಫೋಟೋ ಬಗ್ಗೆ ಇನ್ನಷ್ಟು ತನಿಖೆ ಮಾಡಿ ಅಂತ ಸಲಹೆ ನೀಡಿದ್ದಾರೆ.
ಎಲ್ಲರ ಪ್ರತಿಕ್ರಿಯೆಗಳಿಗೆ ಮತ್ತೆ ಉತ್ತರ ನೀಡಿರೋ ಮಹಿಳೆ, ಮೊದಲು ನಾನು ಹೇರ್ ಸ್ಟ್ರೈಟರ್ನರ್ ಅನ್ನು ನೋಡಿದೆ. ಆ ಬಳಿಕ ನೆಲದ ಮೇಲಿರೋ ಹ್ಯಾಂಡ್ ಬ್ಯಾಗ್. ಅದು ಆತನದ್ದು ಅಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಅದು ನನ್ನ ರೂಮ್ ಅಲ್ಲ ಎಂದ. ಆದ್ರೆ ಬೇರೆಯವರ ರೂಮ್ನಲ್ಲಿ ಸೆಲ್ಫಿ ಯಾಕ್ ತಗೋತೀಯ ಅಂತ ಕೇಳಿದ್ರೆ.. ಉತ್ತರ ಇರಲಿಲ್ಲ. ಆದ್ದರಿಂದಲೇ ಆತನಿಂದ ದೂರ ಆದೇ ಅಂತ ಬರೆದುಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post