ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ತಮ್ಮ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅರ್ಜುನ್ ಕಪೂರ್ ಇಂತಹ ಕೆಟ್ಟ ವದಂತಿಗಳಿಗೆ ನಮ್ಮಲ್ಲಿ ಸ್ಥಳವಿಲ್ಲ ಎಂದಿದ್ದಾರೆ.
ಮಲೈಕಾ ತಮ್ಮ ಪತಿ ಅರ್ಬಾಜ್ ಖಾನ್ ಅವರಿಂದ ಡಿವೋರ್ಸ್ ಪಡೆದ ನಂತರ ಅರ್ಜುನ್ ಕಪೂರ್ ಅವರೊಂದಿಗೆ ಡೇಟ್ ಮಾಡಲು ಆರಂಭಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅರ್ಜುನ್ ಹಾಗೂ ಮಲೈಕಾ ಡೇಟಿಂಗ್ ಮಾಡುತ್ತಿದ್ದಾರೆ. ಇನ್ನು ಈ ಜೋಡಿ ನಡುವೆ ಸುಮಾರು 12 ವರ್ಷಗಳ ವಯಸ್ಸಿನ ಅಂತರ ಇದ್ದರೂ ಸಹ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿತ್ತಿದ್ದರು. ಈ ವಿಚಾರವಾಗಿ ಈ ಜೋಡಿ ಸಾಕಷ್ಟು ಬಾರಿ ಟ್ರೋಲ್ ಕೂಡ ಆಗಿದ್ದರು. ಅದರೆ ಅರ್ಜುನ್ ಅಗಲಿ ಮಲೈಕಾ ಅಗಲಿ ಇದು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರವನ್ನು ನೀಡುತ್ತಿದ್ದರು.
View this post on Instagram
ಸದ್ಯ ಈ ಜೋಡಿ ನಡುವೆ ವೈಮನಸು ಮೂಡಿದೆ ಹೀಗಾಗಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ವದಂತಿ ಬಿಟೌನ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಕಳೆದ ಆರು ದಿನಗಳಿಂದ ಮಲೈಕಾ ಬಹಳ ದುಃಖಿತರಾಗಿದ್ದು ತಮ್ಮ ಮನೆಯಿಂದ ಹೋರ ಬಂದಿಲ್ಲ ಅಂತಲೂ ವದಂತಿಗಳನ್ನು ಹರಿಬಿಡಲಾಗಿತ್ತು.
ಈ ನಡುವೆ ಅರ್ಜುನ್ ಕಪೂರ್ ಕಳೆದ ಮೂರು ದಿನಗಳ ಹಿಂದೆಯಷ್ಟೇ ಅವರ ಸಹೋದರಿ ರಿಯಾ ಕಪೂರ್ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಾಲ ಕಳೆದು ಊಟ ಮಾಡಿ ಬಂದಿದ್ದರು. ಆದರೆ ಮಲೈಕಾ ಮನೆ ಕೂಡ ರಿಯಾ ಮನೆಯ ಸಮೀಪದಲ್ಲಿದರೂ ಸಹ ಅರ್ಜುನ್ ಮಲೈಕಾರನ್ನ ನೋಡಲು ಅವರ ಮೆನೆಗೆ ಹೋಗಿಲ್ಲ ಎನ್ನಲಾಗಿತ್ತು.
ಆದರೆ ಪ್ರತಿ ಬಾರಿ ಅರ್ಜುನ್ ಕುಟುಂಬಸ್ಥರ ಜೊತೆಗೆ ಯಾವುದೇ ಡಿನರ್ ಪಾರ್ಟಿ ಇದ್ದರೂ ಅಲ್ಲಿ ಮಲೈಕಾ ಹಾಜರಾಗುತ್ತಿದ್ದರು. ಆದರೆ ಈ ಬಾರಿ ಮಲೈಕಾ, ರಿಯಾ ಮನೆಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಮಲೈಕಾ ಹಾಗೂ ಅರ್ಜುನ್ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post