ಸೌತ್ ಆಫ್ರಿಕಾ ವಿರುದ್ಧದ ಟೀಂ ಇಂಡಿಯಾ ಮೂರನೇ ಟೆಸ್ಟ್ ಕೇಪ್ ಟೌನ್ನಲ್ಲಿ ನಡೆಯುತ್ತಿದೆ. ಈಗ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಮಾತಾಡಿದ ಗೌತಮ್ ಗಂಭೀರ್, ಕೊಹ್ಲಿ ಕಮ್ಬ್ಯಾಕ್ನಿಂದ ಹನುಮ ವಿಹಾರಿಗೆ ಕೊಕ್ ನೀಡಲಾಗಿದೆ. ನಾನ ಆಗಿದ್ರೆ ವಿಹಾರಿಗೆ ಅವಕಾಶ ನೀಡಿ ಅಜಿಂಕ್ಯಾ ರಹಾನೆಗೆ ಕೊಕ್ ನೀಡ್ತಿದ್ದೆ ಎಂದಿದ್ದಾರೆ.
ಎಷ್ಟು ಬಾರಿ ಅವಕಾಶ ನೀಡಿದ್ರೂ ರಹಾನೆ ಎಡವುತ್ತಲೇ ಇದ್ದಾರೆ. ಕೇವಲ 9 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಇವರ ಬದಲಿಗೆ ವಿಹಾರಿಗೆ ಅವಕಾಶ ನೀಡಿದ್ರೆ ಉತ್ತಮವಾಗಿ ಆಡೋರು. ರಹಾನೆಗೆ ಚಾನ್ಸ್ ನೀಡಿ ಟೀಂ ಇಂಡಿಯಾ ಯುವ ಆಟಗಾರರಿಗೆ ಅನ್ಯಾಯ ಮಾಡಲಾಗ್ತಿದೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post