ಸ್ಯಾಂಡಲ್‌ವುಡ್‌ನ ಮೊದಲ ರಾಮಾಚಾರಿ ಡಾ. ವಿಷ್ಣುವರ್ಧನ್. ಎರಡನೇ ರಾಮಾಚಾರಿ ವಿ.ರವಿಚಂದ್ರನ್, ಆ ನಂತರ ಧೂಳೆಬ್ಬಿಸಿದ ರಾಮಾಚಾರಿ ನ್ಯಾಷನಲ್ ಸ್ಟಾರ್ ಯಶ್. ಈಗ ಸ್ಮಾಲ್ ಸ್ಕ್ರೀನ್‌ಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾನೆ.
ಖ್ಯಾತ ಡೈರೆಕ್ಟರ್, ಪ್ರೊಡ್ಯೂಸರ್ ರಾಮ್‌ಜೀ ಬ್ಯಾನರ್‌ನಲ್ಲಿ ಮೂಡಿಬರ್ತಿರೋ ಹೊಚ್ಚ ಹೊಸ ಸೀರಿಯಲ್ ರಾಮಾಚಾರಿ. ಈ ಸೀರಿಯಲ್ ಮೂಲಕ ಸ್ಮಾಲ್‌ಸ್ಕ್ರೀನ್ ಮೊದಲ ರಾಮಾಚಾರಿ ಸಿಕ್ಕಿದ್ದಾನೆ. ಆತನ ಹೆಸರೇ… ರಿತ್ವಿಕ್ ಕೃಪಾಕರ್.
ರಾಮಾಚಾರಿ ರಿತ್ವಿಕ್ ಕೃಪಾಕರ್ ಅವರ ಮೊದಲ ಸೀರಿಯಲ್. ಈ ಪ್ರಾಜೆಕ್ಟ್ ಮೂಲಕ ಸೀರಿಯಲ್ ಇಂಡಸ್ಟ್ರಿಗೆ ರಿತ್ವಿಕ್ ಕಾಲಿಟ್ಟಿದ್ದಾರೆ. ದೊಡ್ಡ ಬ್ಯಾನರ್ ಮೂಲಕವೇ ಅವರು ಇಂಡಸ್ಟ್ರಿಗೆ ಲಾಂಚ್ ಆಗ್ತಿದ್ದಾರೆ. ಈ ಬಗ್ಗೆ ನಮ್ಮ ಜೊತೆ ರಿತ್ವಿಕ್ ಮಾತಾಡಿದ್ದಾರೆ.
‘ನಿಜಕ್ಕೂ ನನಗೆ ತುಂಬಾ ನರ್ವಸ್ ಆಗ್ತಿದೆ. ಸ್ಮಾಲ್ ಸ್ಕ್ರೀನ್ ರಾಮಾಚಾರಿನ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಭಯವಿದೆ. ವಿಷ್ಣುವರ್ಧನ್ ಸರ್, ರವಿಚಂದ್ರನ್ ಮತ್ತು ಯಶ್ ಸರ್ ನಿರ್ವಹಿಸಿರೋ ರಾಮಾಚಾರಿ ಪಾತ್ರ ಮಾಡುವಾಗ ಸಹಜವಾಗಿಯೇ ಒತ್ತಡ ಇರುತ್ತದೆ. ನಾನು ರಂಗಭೂಮಿಯಲ್ಲಿ 10 ವರ್ಷ ಸಕ್ರಿಯನಾಗಿದ್ದೆ. ರಂಗಭೂಮಿಯಲ್ಲಿ ಪಾತ್ರ ನ್ಯಾಯ ಒದಗಿಸಲು ಪ್ರತಿ ಬಾರಿಯೂ ಯತ್ನಿಸುತ್ತಿದೆ. ಈ ಪಾತ್ರಕ್ಕೂ ನ್ಯಾಯ ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ. ಈ ಪಾತ್ರವನ್ನ ಜನರು ಹೇಗೇ ಸ್ವೀಕರಿಸತ್ತಾರೋ ನೋಡ್ಬೇಕು’ ಅಂತಾ ಹೇಳಿದ್ದಾರೆ.
ನಾನು 10 ವರ್ಷದಿಂದ ನಟ ಮಂಡ್ಯ ರಮೇಶ್ ಅವರ ನಟನಾ ತಂಡದಲ್ಲಿ ಸಕ್ರಿಯವಾಗಿದ್ದೇನೆ. ನಾನು ಹಾಡ್ತೀನಿ, ಡ್ಯಾನ್ಸ್ ಮಾಡ್ತೀನಿ, ಮಾರ್ಷಲ್ ಆರ್ಟ್ಸ್ ಕಲಿತ್ತಿದ್ದೇನೆ. ಓರ್ವ ನಟನಿಗೆ ಬೇಕಾದ ಎಲ್ಲಾ ತಯಾರಿ ಮಾಡ್ಕೊಂಡಿದ್ದೀನಿ. ನನ್ನ ತಂದೆಯೂ ನಿರ್ದೇಶಕರೇ. ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ ತಲೆತಂಡ ಚಿತ್ರವನ್ನ ನನ್ನ ತಂದೆಯೇ ನಿರ್ದೇಶಿಸಿದ್ದಾರೆ. ರಾಮಾಚಾರಿ ಸೀರಿಯಲ್ ನನಗೆ ಅದ್ಭುತ ಅನುಭವ ನೀಡಿದೆ ಅಂತಾ ರಿತ್ವಿಕ್ ಹೇಳಿದ್ದಾರೆ.
ರಂಗಭೂಮಿಯಲ್ಲಿ ಸಕ್ರಿಯವಾಗಿರುವ ರಿತ್ವಿಕ್ ಅನೇಕ ಪಾತ್ರಗಳ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಅವರ ಪ್ರತಿಭೆಗ ಸಂದ ಯಶಸ್ಸೇ ರಾಮಾಚಾರಿ ಪಾತ್ರ. ಸಾಂಪ್ರದಾಯಿಕ ಕುಟುಂಬದ ಕುಡಿಯಾಗಿರುವ ರಾಮಾಚಾರಿ ಆಕಸ್ಮಿಕವಾಗಿ ಶ್ರೀಮಂತ ಕುಟುಂಬದ ಹುಡುಗಿಯನ್ನ ಮೀಟ್ ಮಾಡ್ತಾರೆ. ಆ ನಂತರ ಅವರಿಬ್ಬರ ಬದುಕಿನಲ್ಲಿ ಏನಾಗುತ್ತೋ ಅನ್ನೋದೇ ಈ ಸೀರಿಯಲ್ ಒನ್ ಲೈನ್ ಸ್ಟೋರಿ. ಇನ್ನೂ ಕೆಲವೇ ದಿನಗಳಲ್ಲಿ ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಲಾಂಚ್ ಆಗ್ಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post