ತೀವ್ರ ಹಸಿವಿನಿಂದ ಆಹಾರವನ್ನು ಹುಡುಕಲು ಹೊರಟ ಹನಿ ಬ್ಯಾಡ್ಜರ್ ಎಂಬ ಪ್ರಾಣಿಗೆ ಪ್ರಾಚೀನ ಕಾಲದ ರೋಮನ್ ನಾಣ್ಯಗಳು ಸಿಕ್ಕಿವೆ ಎಂದು ಸ್ಪೇನ್ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹೌದು, ಹನಿ ಬ್ಯಾಡ್ಜರ್ ಎಂಬ ಪ್ರಾಣಿ ತೀವ್ರ ಹಸಿವಿನಿಂದ ಬಳಲುತ್ತಿತ್ತು. ಉತ್ತರ ಸ್ಪೇನ್ನ ಆಸ್ಟ್ರೀಯಾಸ್ ಎಂಬ ಪ್ರದೇಶದಲ್ಲಿರೋ ಹನಿ ಬ್ಯಾಡ್ಜರ್ ಆಹಾರಕ್ಕಾಗಿ ಹಿಮದಲ್ಲಿ ಹುಡುಕುತ್ತಾ ಹೊರಟಿತ್ತು. ಆಗ ಇಲ್ಲಿನ ಹಿಮಪ್ರದೇಶದಲ್ಲಿರೋ ಗುಹೆಯೊಂದರಲ್ಲಿ ಈ ಪ್ರಾಚೀನ ಕಾಲದ ರೋಮನ್ ನಾಣ್ಯಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.
ಇನ್ನು, ಸುದ್ದಿ ತಿಳಿದ ಕೂಡಲೇ ಸ್ಪೇನ್ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಇಡೀ ಗುಹೆಯನ್ನು ಶೋಧಿಸಿದೆ. ಗುಹೆಯಲ್ಲಿ ನೆಲ ಅಗೆದಾಗ ಸುಮಾರು 209 ಪ್ರಾಚೀನ ಕಾಲದ ರೋಮನ್ ನಾಣ್ಯಗಳು ಸಿಕ್ಕಿವೆ. ಇವು ಭಾರೀ ಬೆಲೆ ಬಾಳುತ್ತವೆ ಎನ್ನಲಾಗಿದೆ. ಹೀಗಾಗಿ ಸ್ಪೇನ್ ಪುರಾತತ್ವ ಇಲಾಖೆ ಈ ಹನಿ ಬ್ಯಾಡ್ಜರ್ಗೆ ಥ್ಯಾಂಕ್ಸ್ ಹೇಳಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post