ಬದುಕು ಅದೆಂಥ ದುರಂತಗಳನ್ನು ತೆರೆದಿಟ್ಟೀತು ಅನ್ನೋದನ್ನ ಊಹಿಸಲೂ ಸಾಧ್ಯವಿಲ್ಲ.. ನಗುವಿನ ಬೆನ್ನ ಹಿಂದೆಯೇ ಅಳುವು ಕಾಯುತ್ತಿರುತ್ತಂತೆ.. ಹುಟ್ಟಿನ ಹಿಂದೆಯೇ ಸಾವು ಆವರಿಸಿಕೊಂಡಿರುತ್ತಂತೆ. ಆದ್ರೆ, ಇಂಥಸಾವು ಇಂತ ದುರಂತ ಮಾತ್ರ ಯಾರಿಗೂ ಬೇಡ. ಯಾಕಂದ್ರೆ ನನ್ನಮ್ಮ ಸೂಪರ್ ಸ್ಟಾರ್ನಲ್ಲಿ ಮಿಂಚಿದ್ದ ಪುಟ್ಟ ಸಮನ್ವಿ ಇಂದು ಅಪಘಾತಕ್ಕೆ ಬಲಿಯಾಗಿದ್ದಾಳೆ. ಇವಳ ಸಾವು ಅವರ ತಾಯಿಗೆ ಎಂದೂ ಭರಿಸಲಾರದ ಆಘಾತ ತಂದಿಟ್ಟಿದೆ.
ಹೌದು.. ಇದು ಎರಡನೇ ದೊಡ್ಡ ಪ್ರಹಾರ.. ತಾಯಿ ಅಮೃತಾರ ಇಬ್ಬರು ಮಕ್ಕಳೂ ಸಾವನ್ನಪ್ಪಿದ್ದಾರೆ. ಎರಡನೇ ಮಗುವಲ್ಲಿ ಎಲ್ಲ ನೋವು ಮರೆತಿದ್ದ ಆ ತಾಯಿಗೆ ಯಮರೂಪಿ ಟಿಪ್ಪರ್ ಲಾರಿ ಬರಸಿಡಿಲು ಬೀಳಿಸಿದೆ. ಮೊದಲ ಮಗು ಹುಟ್ಟಿದಾಗ ಈ ತಾಯಿಗೆ ಸಂಭ್ರಮವಿದ್ದರೂ, ನೋವೂ ಇತ್ತು. ಒಂದೆಡೆ ಬಡತನ.. ಮತ್ತೊಂದೆಡೆ ಅತ್ಯಂತ ಅಪೌಷ್ಠಿಕವಾದಂಥ ಮಗು ಜನಿಸಿತ್ತು. ಈ ವಿಷಯವನ್ನು ಅವರೇ ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಪೇಪರ್ ಅಲ್ಲಿ ಸುತ್ತಿಕೊಟ್ಟಿದ್ದ ಆಸ್ಪತ್ರೆ ಸಿಬ್ಬಂದಿ
ತಾವು ಹೆತ್ತ ಮಗುವನ್ನು ಉಳಿಸಿಕೊಳ್ಳಲು ಅಮೃತಾ ನಾಯ್ಡು ಹರಸಾಹಸ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಹಲವು ದಿನ ಚಿಕಿತ್ಸೆ ಕೊಡಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತ್ತಂತೆ. ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪೇಪರ್ನಲ್ಲಿ ಸುತ್ತಿಕೊಟ್ಟಿದ್ದರು ಅಂತ ಹೇಳಿ ಅಮೃತಾ ನಾಯ್ಡು ಕಣ್ಣೀರು ಹಾಕಿದ್ದರು. ಆದ್ರೆ ತಮ್ಮ ಎರಡನೇ ಮಗು ಸಮನ್ವಿ ಜನಿಸಿದ ಬಳಿಕ ಅವರ ಬದುಕು ಹಸನಾಗಿತ್ತಂತೆ. ಆ ಮಗುವಿನ ನಗುವಲ್ಲೇ ಎಲ್ಲ ನೋವು ಮರೆತಿದ್ದ ಈ ಕುಟುಂಬ, ಈಗ ಮತ್ತೆ ದುಃಖಕ್ಕೆ ಈಡಾಗಿದೆ.. ನಿಜಕ್ಕೂ ದೇವರು ಇಷ್ಟ್ಯಾಕೆ ಕ್ರೂರಿ ಕಣ್ರಿ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post