ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಸುಳಿಯಲ್ಲಿದೆ. ಆ ಮೂಲಕ ಸರಣಿ ಗೆಲ್ಲುವ ಕನಸನ್ನೂ ಕೈಚೆಲ್ಲುವ ಆತಂಕಕ್ಕೆ ಸಿಲುಕಿದೆ. ಆದರೂ ಗೆಲುವಿಗಾಗಿ ಟೀಮ್ ಇಂಡಿಯಾ ಬೌಲರ್ಗಳು ಹರಸಾಹಸಪಡ್ತಿದ್ದಾರೆ.
ದಕ್ಷಿಣ ಆಫ್ರಿಕಾ – ಭಾರತ ನಡುವಿನ ಅಂತಿಮ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ ಗೆಲುವಿಗಾಗಿ ಉಭಯ ತಂಡಗಳು ಹೋರಾಟ ನಡೆಸ್ತಿದ್ದು, ಮೇಲುಗೈ ಸಾಧಿಸಲು ಸಾಕಷ್ಟು ಪ್ರಯತ್ನ ಮಾಡ್ತಿವೆ. ಆದರೆ ಈ ಹೋರಾಟದಲ್ಲಿ ಆಫ್ರಿಕಾವೇ ಒಂದು ಹೆಜ್ಜೆ ಮುಂದೆ ಇದ್ದು, ಭಾರತ ತೀವ್ರ ಹಿನ್ನಡೆಯಲ್ಲಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್ ಅಗತ್ಯ ಇದ್ರೆ, ಭಾರತಕ್ಕೆ ಇನ್ನೂ 8 ವಿಕೆಟ್ಗಳು ಬೇಕಿದೆ.
ಮೂರನೇ ದಿನದಾಟದ ಆರಂಭದಲ್ಲೇ ಎಡವಿದ ಭಾರತ
2 ವಿಕೆಟ್ ನಷ್ಟಕ್ಕೆ 57 ರನ್ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಭಾರತಕ್ಕೆ, ಆರಂಭದಲ್ಲೇ ದಕ್ಷಿಣ ಆಫ್ರಿಕಾ ಡಬಲ್ ಶಾಕ್ ನೀಡಿತು. ದಿನದಾಟದ 2ನೇ ಎಸೆತದಲ್ಲೇ ಪೀಟರ್ಸನ್ ಹಿಡಿದ ಅದ್ಭುತ ಕ್ಯಾಚ್ಗೆ ಚೇತೇಶ್ವರ್ ಪೂಜಾರ (9) ಬಲಿಯಾದ್ರೆ, ಅಜಿಂಕ್ಯ ರಹಾನೆ (1) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಆದ್ರೆ ಕೊಹ್ಲಿ ಮತ್ತು ಪಂತ್ ಎಚ್ಚರಿಕೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.
ರಿಷಭ್ ಪಂತ್- ವಿರಾಟ್ ಕೊಹ್ಲಿ 94 ರನ್ಗಳ ಜೊತೆಯಾಟ
ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ನೆರವಾಗಿದ್ದು ನಾಯಕ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಜೊತೆಯಾಟ. ಈ ಜೋಡಿ ತಂಡಕ್ಕೆ 94 ರನ್ಗಳ ಕಾಣಿಕೆ ನೀಡ್ತು. ಪರಿಣಾಮ ಭಾರತ ಚೇತರಿಕೆಯತ್ತ ಹೆಜ್ಜೆ ಹಾಕ್ತು. ಇದೇ ವೇಳೆ ಪಂತ್ ಅರ್ಧಶತಕ ಕೂಡ ಸಿಡಿಸಿದ್ರು. ಕೊಹ್ಲಿ ತಾಳ್ಮೆಯುತ ಬ್ಯಾಟಿಂಗ್ ಮಾಡಿದ್ರೆ, ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಬೌಲರ್ಸ್ ದರ್ಬಾರ್ ನಡುವೆಯೂ ಪಂತ್ ಭರ್ಜರಿ ಶತಕ
ಬರೋಬ್ಬರಿ 143 ಎಸೆತಗಳನ್ನು ಎದುರಿಸಿ ದೀರ್ಘ ಇನ್ನಿಂಗ್ಸ್ ಕಟ್ಟಿದ್ದ ಕೊಹ್ಲಿ (29) ಆಟಕ್ಕೆ ಲುಂಗಿ ಎನ್ಗಿಡಿ ತಡೆ ಹಾಕಿದರು. ಆದ್ರೆ ಕೊಹ್ಲಿ ಔಟಾದ ಬೆನ್ನಲ್ಲೆ ಮತ್ತೆ ಪರಾಕ್ರಮ ಮೆರೆದ ದಕ್ಷಿಣ ಆಫ್ರಿಕಾ ಬೌಲರ್ಸ್, ಅಶ್ವಿನ್ (7), ಶಾರ್ದೂಲ್ (5), ಉಮೇಶ್ (0), ಶಮಿ (0), ಬೂಮ್ರಾಗೆ (2) ಗೇಟ್ಪಾಸ್ ನೀಡುವಲ್ಲಿ ಯಶಸ್ಸು ಕಂಡರು. ಇದರ ಮಧ್ಯೆಯೂ ಪಂತ್ ಹೋರಾಟ ನಡೆಸಿದ ದಾಖಲೆಯ ಶತಕ ಸಿಡಿಸಿ ಅಜೇಯರಾಗಿ ಉಳಿದರು.
198ಕ್ಕೆ ಭಾರತ ಆಲ್ಔಟ್-ಎದುರಾಳಿಗೆ 212 ಟಾರ್ಗೆಟ್
ದಕ್ಷಿಣ ಆಫ್ರಿಕಾ ಬೌಲರ್ಗಳ ಮಾರಕ ದಾಳಿಯಿಂದಾಗಿ ಭಾರತ 198 ಕ್ಕೆ ಕುಸಿಯಿತು. ಮಾರ್ಕೋ ಜಾನ್ಸನ್ 4 ವಿಕೆಟ್, ರಬಾಡ, ಲುಂಗಿ ಎನ್ಗಿಡಿ ತಲಾ 3 ವಿಕೆಟ್ ಪಡೆದು ಮಿಂಚಿದರು. 13 ರನ್ ಅಲ್ಪಮುನ್ನಡೆ ಮತ್ತು ಪಂತ್ ಶತಕದ ಬಲದಿಂದ ಗಳಿಸಿದ 198 ರನ್ಗಳನ್ನೂ ಸೇರಿಸಿ ದಕ್ಷಿಣ ಆಫ್ರಿಕಾಗೆ ಭಾರತ 212 ರನ್ಗಳ ಸಾಧಾರಣ ಗುರಿ ನೀಡ್ತು.
A simply outstanding knock by @RishabhPant17 at a crucial stage!
Well done.#SAvIND pic.twitter.com/gdlTgfH3UE
— Sachin Tendulkar (@sachin_rt) January 13, 2022
ಗೆಲುವಿನತ್ತ ಆಫ್ರಿಕಾ ಹೆಜ್ಜೆ, ಭಾರತದ ಬೌಲರ್ಗಳ ಪರದಾಟ
212 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಗೆಲುವಿನತ್ತ ಹೆಜ್ಜೆ ಹಾಕಿದೆ. ಆರಂಭದಲ್ಲಿ ಮಾರ್ಕರಮ್ ವಿಕೆಟ್ ಕಳೆದುಕೊಂಡ್ರೂ, ಡೀನ್ ಎಲ್ಗರ್ ಮತ್ತು ಪೀಟರ್ಸನ್ ದಿಟ್ಟ ಹೋರಾಟ ನಡೆಸಿ 78 ರನ್ಗಳ ಭರ್ಜರಿ ಜೊತೆಯಾಟ ನೀಡಿದ್ರು. ಪೀಟರ್ಸನ್ 2ನೇ ಇನ್ನಿಂಗ್ಸ್ನಲ್ಲಿ 48 ರನ್ ಗಳಿಸಿ ಅಜೇಯರಾಗಿ ಉಳಿದಿದ್ರೆ, ದಿನದ ಕೊನೆಯಲ್ಲಿ ಬೂಮ್ರಾಗೆ ಎಲ್ಗರ್ (30) ಔಟಾದ್ರು. ಆದ್ರೆ ಗೆಲುವಿನ ಎಲ್ಲಾ ಲೆಕ್ಕಾಚಾರ ಸೌತ್ ಆಫ್ರಿಕಾ ಕಡೆಯೇ ಇದೆ.
ಸದ್ಯ 3ನೇ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 101 ಗಳಿಸಿರುವ ದಕ್ಷಿಣ ಆಫ್ರಿಕಾ, ಗೆಲುವಿಗೆ ಕೇವಲ 111 ರನ್ ಬೇಕಿದೆ. ಆದರೆ ಭಾರತ ಇದನ್ನು ಡಿಫೆಂಡ್ ಮಾಡಿಕೊಂಡು ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸುತ್ತಾ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.
ಸಂಕ್ಷಿಪ್ತ ಸ್ಕೋರ್
- ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್- 223ಕ್ಕೆ ಆಲೌಟ್
- ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 210ಕ್ಕೆ ಆಲೌಟ್
- ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ 198ಕ್ಕೆ ಕುಸಿತ
A big wicket at the stroke of Stumps on Day 3.
Bumrah picks up the wicket of Dean Elgar as South Africa are 101/2.
An all important Day 4 awaits.
Scorecard – https://t.co/9V5z8QkLhM #SAvIND pic.twitter.com/XJQwKanywz
— BCCI (@BCCI) January 13, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post