ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲರ್ಗಳು, ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ದರ್ಬಾರ್ ನಡೆಸಿದ್ರು. ಆದರೆ 2ನೇ ಇನ್ನಿಂಗ್ಸ್ನಲ್ಲಿ ತಿರುಗೇಟು ನೀಡಿದ ಸೌತ್ ಆಫ್ರಿಕಾ ಬೌಲರ್ಗಳು, ಆರಂಭಿಕರನ್ನ ಬೇಗನೆ ಔಟ್ ಮಾಡುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆದರೆ ಸಂಕಷ್ಟಕ್ಕೆ ಸಿಲುಕಿದ ಪೂಜಾರ-ಕೊಹ್ಲಿ ಆಸರೆಯಾಗಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಹಾಗೂ ಅಂತಿಮ ಟೆಸ್ಟ್ ಪಂದ್ಯ ತೀವ್ರ ಕುತೂಹಲದತ್ತ ಸಾಗಿದೆ. ಸರಣಿ ಗೆಲುವಿಗಾಗಿ ಎರಡು ತಂಡಗಳ ಹೋರಾಟ ರೋಚಕತೆಯತ್ತ ತಿರುಗಿದೆ. ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ. 70 ರನ್ಗಳ ಮುನ್ನಡೆ ಪಡೆದಿರುವ ಭಾರತ, ದಕ್ಷಿಣ ಆಫ್ರಿಕಾಗೆ ಬೃಹತ್ ಗುರಿ ನೀಡುವ ಯೋಜನೆ ಹಾಕಿಕೊಂಡಿದೆ.
ಬೂಮ್ರಾಗೆ ಮಾರ್ಕರಮ್, ಉಮೇಶ್ಗೆ ಕೇಶವ್ ಕ್ಲೀನ್ಬೌಲ್ಡ್
1 ವಿಕೆಟ್ ನಷ್ಟಕ್ಕೆ 17 ರನ್ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಎಡವಿತು. ಮೊದಲ ದಿನದಾಟದಲ್ಲೇ ಆರಂಭಿಕ ಆಘಾತ ನೀಡಿದ್ದ ಜಸ್ಪ್ರಿತ್ ಬೂಮ್ರಾ, 2ನೇ ದಿನದಾಟದ ಆರಂಭದಲ್ಲಿ ಮತ್ತೆ ಕಾಡಿದರು. ದಿನದಾಟದ 2ನೇ ಎಸೆತದಲ್ಲೇ ಬೂಮ್ರಾ ಬ್ಯೂಟಿಗೆ ಆ್ಯಡಂ ಮಾರ್ಕರಮ್, ಬೌಲ್ಡ್ ಆದರು. 25 ರನ್ ಗಳಿಸಿ ಭರವಸೆಯ ಇನ್ನಿಂಗ್ಸ್ ಕಟ್ಟುತ್ತಿದ್ದ ಕೇಶವ್ ಮಹಾರಾಜ್ಗೆ ಉಮೇಶ್ ಯಾದವ್, ಕ್ಲೀನ್ ಬೌಲ್ಡ್ ಮಾಡಿ ಗೇಟ್ಪಾಸ್ ನೀಡಿದರು.
ವಾನ್ ಡರ್ ಡುಸೆನ್ಗೆ ಶಾಕ್ ಕೊಟ್ಟ ಉಮೇಶ್ ಯಾದವ್
ಮಹಾರಾಜ್ ಬಳಿಕ ವಾನ್ ಡರ್ ಡುಸೆನ್ ಮತ್ತು ಕೀಗನ್ ಪೀಟರ್ಸನ್, ಮೊದಲ ಸೆಷನ್ ಅಂತ್ಯಕ್ಕೂ ಮುನ್ನ 4ನೇ ವಿಕೆಟ್ಗೆ 50 ರನ್ಗಳ ಜೊತೆಯಾಟವಾಡಿದರು. ಆದ್ರೆ ಭೋಜನ ವಿರಾಮದ ಬಳಿಕ ದಾಳಿ ನಡೆಸಿದ ಉಮೇಶ್, ಅಪಾಯಕಾರಿ ಜೊತೆಯಾಟವನ್ನು ಮುರಿದರು. ಇದರ ಬೆನ್ನಲ್ಲೇ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಪೀಟರ್ಸನ್, ಸತತ 2ನೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾದರು.
ಡಬಲ್ ಶಾಕ್ ಕೊಟ್ಟ ಶಮಿ, ಜಾನ್ಸನ್ ಬೂಮ್ರಾ ವಿಲನ್
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಪೀಟರ್ಸನ್ ಮಾತ್ರ ಭಾರತದ ಬೌಲರ್ಗಳಿಗೆ ಬಿಟ್ಟೂ ಬಿಡದೆ ಕಾಡ್ತಿದ್ರೆ, 2ನೇ ಸೆಷನ್ ಅಂತ್ಯಕ್ಕೂ ಮುನ್ನ ಹರಿಣಗಳ ಪಾಲಿಗೆ ಡಬಲ್ ಶಾಕ್ ನೀಡಿದ ಮೊಹಮ್ಮದ್ ಶಮಿ ವಿಲನ್ ಆದ್ರು. ಒಂದೇ ಓವರ್ನಲ್ಲಿ ಟೆಂಬಾ ಬವುಮಾ, ಕೈಲ್ ವೆರಿನ್ರನ್ನ ಶಮಿ ಔಟ್ ಮಾಡಿದ್ರೆ, ಮಾರ್ಕೋ ಜಾನ್ಸನ್ಗೆ ಬೂಮ್ರಾ ಶಾಕ್ ನೀಡಿದ್ರು.
ಸೌತ್ ಆಫ್ರಿಕಾ 209ಕ್ಕೆ ಪತನ, ಭಾರತಕ್ಕೆ ಅಲ್ಪ ಮುನ್ನಡೆ
ಇನ್ನು ಭಾರತದ ಬೌಲರ್ಗಳು ಕೊನೆ ಸೆಷನ್ನಲ್ಲಿ ದರ್ಬಾರ್ ನಡೆಸಿದ್ರು. ಕ್ರೀಸ್ಗೆ ಬಂದಾಗಿನಿಂದ ಭಾರತಕ್ಕೆ ತಲೆನೋವಾಗಿದ್ದ ಪೀಟರ್ಸನ್ ಅವರ ಸುದೀರ್ಘ ಹೋರಾಟ, 3ನೇ ಸೆಷನ್ ಆರಂಭದಲ್ಲೇ ಕೊನೆಗೊಂಡಿತು. ಇದರ ಬೆನ್ನಲ್ಲೇ ರಬಾಡ, ಲುಂಗಿ ಎನ್ಗಿಡಿ ಕೂಡ ಔಟಾದ್ರು. ಪರಿಣಾಮ 209ಕ್ಕೆ ಸರ್ವಪತನ ಕಂಡಿತು. ಆದ್ರೆ ಭಾರತ 13 ರನ್ಗಳ ಅಲ್ಪ ಮುನ್ನಡೆ ಪಡೆದುಕೊಳ್ತು. ಬೂಮ್ರಾ 5, ಶಮಿ, ಉಮೇಶ್ ತಲಾ 2 ವಿಕೆಟ್ ಪಡೆದ್ರು.
BOOM BOOM 🔥
7th 5-wkt haul in Test cricket for @Jaspritbumrah93 👏👏#TeamIndia #SAvIND pic.twitter.com/CYhZD86JsY
— BCCI (@BCCI) January 12, 2022
ಮತ್ತೆ ಕೈಕೊಟ್ಟ ಆರಂಭಿಕರು, ಸಂಕಷ್ಟದಲ್ಲಿ ಭಾರತ..!
13 ರನ್ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಶುರು ಮಾಡಿದ ಭಾರತದ ಆರಂಭಿಕರು ಎರಡನೇ ಇನ್ನಿಂಗ್ಸ್ನಲ್ಲೂ ಕೈಕೊಟ್ಟರು. ಮಯಾಂಕ್ ಅಗರ್ವಾಲ್ 7 ರನ್ KL ರಾಹುಲ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ರು. ಆದರೆ ಇಕ್ಕಟ್ಟಿಗೆ ಸಿಲುಕಿದ ತಂಡಕ್ಕೆ ಕೊಹ್ಲಿ ಮತ್ತು ಪೂಜಾರ ನೆರವಾಗಿದ್ದು, ಉತ್ತಮ ಮೊತ್ತದತ್ತ ಸಾಗುವ ನಿರೀಕ್ಷೆ ಮೂಡಿಸಿದ್ದಾರೆ. ಆದರಿಂದು ಆಫ್ರಿಕಾ ಬೌಲರ್ಗಳ ದಾಳಿಯನ್ನು ಈ ಇಬ್ಬರು ಮೆಟ್ಟಿನಿಲ್ತಾರಾ ಅನ್ನೋದನ್ನ ಕಾದುನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post