ಬಿಗ್ ಬಾಸ್ ಸೀಸನ್ 5ರ ಖ್ಯಾತಿಯ ನಿವೇದಿತಾ ಗೌಡ ತಮ್ಮ ಪತಿ ಚಂದನ್ ಶೆಟ್ಟಿಗೆ ಶಾಕ್ ನೀಡಿದ್ದಾರೆ. ನಿವೇದಿತಾ ಹಾಗೂ ಕನ್ನಡ ಱಪರ್ ಚಂದನ್ ಶೆಟ್ಟಿ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಖತ್ ಆ್ಯಕ್ಟಿವ್ ಆಗಿ ಇರ್ತಾರೆ. ತಮ್ಮ ಕ್ಯೂಟ್ ಫೋಟೋಸ್ ಹಾಗೂ ಕೆಲವೊಂದು ಫನ್ನಿ ವಿಡಿಯೋಗಳನ್ನು ಈ ಜೋಡಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಅದರಂತೆ ಈ ಬಾರಿ ನಿವೇದಿತಾ ತಮ್ಮ ಪತಿ ಚಂದನ್ ಶೆಟ್ಟಿ ಅವರಿಗೆ ಪ್ರ್ಯಾಂಕ್ ಮಾಡಿರುವ ಫನ್ನಿ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರ್ಯಾಂಕ್ ಮಾಡಲು ಹೋಗಿ ನಿವೇದಿತಾ, ಚಂದನ್ ಶೆಟ್ಟಿಗೆ ಶಾಕ್ ನೀಡಿದ್ದಾರೆ. ತಮ್ಮ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ ನಿವೇದಿತಾ ಟವಲ್ ಕಟ್ಟಿಕೊಂಡು ಬಂದು ಕ್ಯಾಮರಾ ಮುಂದೆ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ.
ಇನ್ನು ಚಂದನ್ ಅಲ್ಲೆ ಪಕ್ಕದಲ್ಲಿ ಇರುವ ಸೋಫಾ ಮೇಲೆ ಕುಳಿತು ಲ್ಯಾಪ್ ಟಾಪ್ ನೋಡ್ತಾ ಇರ್ತಾರೆ. ಸಡನ್ ಆಗಿ ನಿವೇದಿತಾ ಕ್ಯಾಮೆರಾ ಮುಂದೆ ತಾವು ಕಟ್ಟಿಕೊಂಡಿದ್ದ ಟವಲ್ ಬಿಚ್ಚುವ ರೀತಿ ಮಾಡುವಾಗ ಚಂದನ್ ಲ್ಯಾಪ್ ಟಾಪ್ ಅನ್ನು ಪಕ್ಕದಲ್ಲಿ ಇಟ್ಟು ಕೂಡಲೇ ನಿವೇದಿತಾ ಅವರನ್ನು ಹಿಡಿಯಲು ಬರುತ್ತಾರೆ. ನಂತರ ನಿವೇದಿತಾ ತಮಗೆ ಪ್ರ್ಯಾಂಕ್ ಮಾಡಿದ್ದಾರೆ ಎಂಬುದು ಚಂದನ್ಗೆ ಗೊತ್ತಾಗಿ ಟವಲ್ ಅನ್ನು ನಿವೇದಿತಾ ಮೇಲೆ ಎಸೆದಿದ್ದಾರೆ. ಸದ್ಯ ಈ ವಿಡಿಯೋ ಬಹಳ ಫನಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post