ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ಕುರಿತಂತೆ ಸಲ್ಲಿಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕೋರ್ಟ್ಗೆ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್ ಅನ್ನು ನಗರದ 8ನೇ ಎಸಿಎಂಎಂ ಕೋರ್ಟ್ ಮಾನ್ಯ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 20 ದಿನಗಳ ಹಿಂದೆ ದೂರದಾರರಾದ ಶೃತಿ ಹರಿಹರನ್ ಅವರು ಮಾಡಿದ್ದ ಆರೋಪಗಳಿಗೆ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಿ ರಿಪೋರ್ಡ್ ಹಾಕಿದ್ದರು. ಬಿ ರಿಪೋರ್ಟ್ಗೆ ಅಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿನೇ ನೀಡಿತ್ತು. ಆದರೆ ಇಂದು ಆಕ್ಷೇಪಣೆ ಸಲ್ಲುಸಲು ಶೃತಿ ಹರಿಹರನ್ ಬಾರದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ಅನ್ನು ಕೋರ್ಟ್ ಮಾನ್ಯ ಮಾಡಿ ದಾಖಲಿಸಿದೆ. ಇದರೊಂದಿಗೆ ಪ್ರಕರಣದಿಂದ ಅರ್ಜುನ್ ಸರ್ಜಾ ಖುಲಾಸೆಯಾಗುವ ನಿರೀಕ್ಷೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post