ನವದೆಹಲಿ: ಪಂಚ ರಾಜ್ಯಗಳ ಎಲೆಕ್ಷನ್ಗೆ ಕಮಲ ಪಡೆ ಭರ್ಜರಿ ಸಿದ್ಧತೆ ಆರಂಭಿಸಿದೆ. ನೆರೆಯ ಗೋವಾ ವಶಕ್ಕೆ ತನ್ನದೇ ಆದ ಕೆಲ ಪ್ಲಾನ್ಗಳನ್ನ ರೆಡಿ ಮಾಡಿದೆ. ಕರ್ನಾಟಕದ ಬಿಜೆಪಿ ಶಾಸಕರಿಗೆ ಚುನಾವಣೆ ಜವಾಬ್ದಾರಿ ಹೊರಿಸುವ ಲೆಕ್ಕಾಚಾರದಲ್ಲಿದೆ. ಗೋವಾ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯನ್ನ ಆಹ್ವಾನಿಸಿದ್ದು, ಶಾಸಕರಲ್ಲಿ ಭೀತಿ ಶುರುವಾಗಿದೆ.
ಪಂಚ ರಾಜ್ಯಗಳ ಎಲೆಕ್ಷನ್ಗೆ ಕಮಲ ಪಡೆಯಿಂದ ಸಿದ್ಧತೆ
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಪಂಚ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಎಲೆಕ್ಷನ್ ಗೆಲ್ಲಲು ಭಾರೀ ಮಾಸ್ಟರ್ ಪ್ಲಾನ್ ರೂಪಿಸುತ್ತಿವೆ. ಆದ್ರೆ, ಕೊರೊನಾ ಹಿನ್ನೆಲೆ ಱಲಿ, ಅಬ್ಬರ ಪ್ರಚಾರಕ್ಕೆ ಸದ್ಯಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದ್ದು, ಗೋವಾದಲ್ಲಿ ಎಲೆಕ್ಷನ್ ಕ್ಯಾಂಪೇನ್ ಮಾಡಲು ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದೆ. ಅದರಲ್ಲೂ ಗೋವಾ ಚುನಾವಣೆ ಪ್ರಚಾರ ನಡೆಸಲು ಗೋವಾ ರಾಜ್ಯ ಉಸ್ತುಯಾಗಿರೋ ಸಿ.ಟಿ ರವಿ ಇಲ್ಲಿನ ಶಾಸಕರನ್ನ ಆಹ್ವಾನಿಸ್ತಿದ್ದಾರೆ ಎನ್ನಲಾಗಿದೆ.
ಗೋವಾ ಜವಾಬ್ದಾರಿ.. ಆಹ್ವಾನಿಸಿದ ರವಿ
ಗೋವಾದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಿಜೆಪಿ ವರಿಷ್ಠರಿಂದ ಸೂಚನೆ ಬಂದಿದೆ. ಹೀಗಾಗಿ ಗೋವಾ ರಾಜ್ಯ ಚುನಾವಣೆ ಅಖಾಡಕ್ಕೆ ಕರ್ನಾಟಕ ಬಿಜೆಪಿ ಶಾಸಕರಿಗೆ ಸಿಟಿ ರವಿ ಕರೆ ಮಾಡಿ, ಗೋವಾಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಎಲೆಕ್ಷನ್ ಪ್ರಚಾರದಲ್ಲಿ ಭಾಗಿಯಾಗುವಂತೆ ರಾಜ್ಯದ 15ಕ್ಕೂ ಹೆಚ್ಚು ಶಾಸಕರಿಗೆ ಸಿ.ಟಿ. ರವಿ ಆಹ್ವಾನ ನೀಡಿದ್ದಾರೆ. ಜನವರಿ 20ರ ಬಳಿಕ ನೇರವಾಗಿ ಗೋವಾಗೆ ಬರಲು ಫೋನ್ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ. ಗೋವಾದಲ್ಲಿ ಎಲೆಕ್ಷನ್ ಪ್ರಚಾರ ನಡೆಸೋ ಶಾಸಕರಿಗೆ ಹಲವು ಜವಾಬ್ದಾರಿಗಳನ್ನ ಬಿಜೆಪಿ ನೀಡಲಿದೆ.
ಶಾಸಕರಿಗೆ ಎಲೆಕ್ಷನ್ ಹೊಣೆ!
- ಸೂಚನೆ 1 : ಜವಾಬ್ದಾರಿ ಹೊತ್ತವರು ಗೋವಾದಲ್ಲಿಯೇ ವಾಸ್ತವ್ಯ ಹೂಡಬೇಕು
- ಸೂಚನೆ 2 : ಗೋವಾದ ಒಂದು ಕ್ಷೇತ್ರದ ಜವಾಬ್ದಾರಿಯನ್ನ ವಹಿಸಿಕೊಳ್ಳಬೇಕು
- ಸೂಚನೆ 3 : ಹೊಣೆ ಹೊತ್ತ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವಿನ ದಡ ಮುಟ್ಟಿಸಬೇಕು
- ಸೂಚನೆ 4 : ಸ್ಥಳೀಯ ಕಾರ್ಯಕರ್ತರನ್ನು ಒಗ್ಗೂಡಿಸಿ ಕಾರ್ಯತಂತ್ರ ಹೆಣೆಯಿರಿ
- ಸೂಚನೆ 5 : ಕೊರೊನಾ ನಿಯಮ ಪರಿಪಾಲಿಸುತ್ತಾ ಕ್ಷೇತ್ರದಲ್ಲಿ ಪ್ರಚಾರ ಮಾಡಿ
ಬಿಜೆಪಿ ಹೈಕಮಾಂಡ್ ಏನೋ ತಮ್ಮ ಶಾಸಕರಿಗೆ ಇಷ್ಟೆಲ್ಲಾ ಸೂಚನೆಗಳನ್ನ ನೀಡಿದೆ. ಆದ್ರೆ, ಗೋವಾಕ್ಕೆ ತೆರಳಲು ಶಾಸಕರಿಗೆ ಭೀತಿ ಶುರುವಾಗಿದೆಯಂತೆ.
ಬಿಜೆಪಿ ಶಾಸಕರಲ್ಲಿ ಭೀತಿ!
- ಆತಂಕ 1 : ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಆಹ್ವಾನ ಕೊಡುತ್ತಿರುವ ಸಿ.ಟಿ.ರವಿ
- ಆತಂಕ 2 : ಸಿ.ಟಿ.ರವಿ ಆಹ್ವಾನ ಹಿನ್ನೆಲೆಯಲ್ಲಿ ಗೊಂದಲಕ್ಕೆ ಬಿದ್ದ ರಾಜ್ಯದ ಶಾಸಕರು
- ಆತಂಕ 3 : ಗೋವಾ ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿ ಮೀರಿ ವ್ಯಾಪಿಸುತ್ತಿದೆ
- ಆತಂಕ 4 : ಪಕ್ಷದ ವರಿಷ್ಠರ ಸೂಚನೆಯಂತೆ ಆಹ್ವಾನಿಸಿದ ಮೇಲೆ ಹೋಗಲೇಬೇಕು
- ಆತಂಕ 5 : ಅಲ್ಲಿ ಹೋದಾಗ ಕೊರೊನಾ ಸೋಂಕು ತಗುಲಿದ್ರೆ ಏನು ಮಾಡುವುದು?
- ಆತಂಕ 6 : ಸೋಂಕು ತಗುಲಿ ಅಲ್ಲಿ ಆಸ್ಪತ್ರೆ ಸೇರಿದರೆ, ಕುಟುಂಬಸ್ಥರ ಗತಿಯೇನು?
ಒಟ್ಟಾರೆ, ಗೋವಾದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ರಣತಂತ್ರಗಳನ್ನ ಹೆಣೆಯುತ್ತಿದೆ. ಇದರ ಭಾಗವಾಗಿ ಕರ್ನಾಟಕದ ಶಾಸಕರಿಗೂ ಪ್ರಚಾರದ ಅಖಾಡಕ್ಕೆ ಕಳಿಸಲು ಮುಂದಾಗಿದೆ. ಆದ್ರೆ, ಈ ಆಹ್ವಾನವನ್ನ ಯಾವೆಲ್ಲಾ ಶಾಸಕರು ಸ್ವೀಕರಿಸ್ತಾರೆ.. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ತಮ್ಮ ಹೊಣೆಯನ್ನ ಸಮರ್ಥವಾಗಿ ನಿಭಾಯಿಸ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ವರದಿ: ಮಧುಸೂದನ್ ಪೊಲಿಟಿಕಲ್ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post