ಯಾದಗಿರಿ: ಜಿಲ್ಲೆಯ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ರದ್ದುಗೊಂಡಿದ್ದರೂ ಕೂಡ ಜಾತ್ರೆಗೆ ಆಗಮಿಸುತ್ತಿದ್ದ ಸಾವಿರಾರು ಸಂಖ್ಯೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮೊರೆ ಹೋಗಿದ್ದಾರೆ.
ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯನ್ನು ಕೋವಿಡ್ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಆದ್ರೆ ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೆ ಎನ್ನದ ಭಕ್ತರು ಪೊಲೀಸರ ಕಣ್ಣು ತಪ್ಪಿಸಿ ಮಾಸ್ಕ್ ಹಾಕದೇ, ಯಾವುದೇ ನಿಯಮ ಪಾಲಿಸದೆ ಬೇಲಿ ಹಾರಿ ಮೈಲಾಪುರಕ್ಕೆ ಆಗಮಿಸುತ್ತಿದ್ದರು. ಪರಿಣಾಮ ಮೈಲಾಪುರನಲ್ಲಿ ಕೊರೊನಾ ಸ್ಫೋಟ ಆತಂಕ ಹೆಚ್ಚಾಗಿದ್ದು, ಭಕ್ತರನ್ನು ವಾಪಸ್ ಕಳುಹಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
ವಿಷಯ ತಿಳಿಸಯುತ್ತಿದ್ದಂತೆ ಖುದ್ದು ಫೀಲ್ಡಿಗಿಳಿದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಕೊವೀಡ್ ನಿಯಮ ಉಲ್ಲಂಘಿಸಿ ಬಂದೋರಿಗೆ ಲಾಠಿ ರುಚಿ ತೋರಿಸಿದ್ದಾರೆ. ಇತ್ತ ಲಾಠಿ ಸದ್ದು ಮಾಡುತ್ತಿದ್ದಂತೆ ಭಕ್ತರು ತಾ ಮುಂದು, ತಾ ಮುಂದು ಎಂದು ಓಡಿ ಹೋಗುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post