‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದ ಆರು ವರ್ಷದ ಪುಟ್ಟ ಕಂದಮ್ಮ, ಇನ್ನು ನೆನಪು ಮಾತ್ರ. ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಪುಟ್ಟ ಪುಟ್ಟ ಹೆಜ್ಜೆಗಳನ್ನ ಇಡುತ್ತ, ತುಂಟ ತುಂಟ ಮಾತುಗಳನ್ನ ಆಡುತ್ತ ವೀಕ್ಷಕರನ್ನ ರಂಜಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸಮನ್ವಿ ಅವರ ಸಾವಿನ ಸುದ್ದಿ ದೊಡ್ಡ ಆಘಾತವನ್ನೇ ನೀಡಿದೆ. ಅದರಲ್ಲೂ ಅವರ ಕುಟುಂಬಕ್ಕೆ ದೊಡ್ಡ ಶಾಕ್ ಆಗಿದೆ.
ಸಮನ್ವಿ ಯಾವಾಗ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಎಂಥವ್ರ ಕರುಳು ಕೂಡ ಚುರುಕ್ ಎನ್ನುತ್ತೆ. ಹೃದಯ ಹಿಂಡುವ ಈ ವಿಡಿಯೋದಲ್ಲಿ, ಬೆಡ್ ಮೇಲೆ ಸಮನ್ವಿ ಮೊಬೈಲ್ ಹಿಡಿದು ಕೂತಿದ್ದಾರೆ. ಚಾರ್ಜಿಂಗ್ ಹಾಕಿದ್ದ ಮೊಬೈಲ್ ಹಿಡಿದಿರುವ ಸಮನ್ವಿ, ತುಂಬಾ ಗಂಭೀರವಾಗಿ ಯೋಚನೆ ಮಾಡುತ್ತಿದ್ರೆ, ಆಕೆಯ ಕಾಲ್ಮೇಲೆ ತಂದೆ ಹಾಯಾಗಿ ಮಲಗಿದ್ದಾರೆ.
ನಿದ್ರೆ ಮಾಡುತ್ತಿರುವ ತಂದೆಯ ತಲೆಯನ್ನ ಸವರುತ್ತಿರೋದನ್ನೂ ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ವಿಡಿಯೋ ಮಾಡುತ್ತಿರೋದು ಸಮನ್ವಿಗೆ ಗೊತ್ತಾಗುತ್ತೆ. ಆಗ ಕ್ಯಾಮರಾದತ್ತ ಕೈಮಾಡುತ್ತಾಳೆ.. ಈ ವಿಡಿಯೋಗೆ ಕರುಳಿನ ಸಂಬಂಧ ಅನ್ನೋ ಹಾಡನ್ನ ಹಾಕಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ಎಲ್ಲರ ಕಣ್ಣಾಲಿಗಳು ಒದ್ದೆ ಆಗುತ್ತಿದೆ.
‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ಸಮನ್ವಿ ಇನ್ನಿಲ್ಲ: ಕರುಳು ಹಿಂಡುವ ವಿಡಿಯೋ #Samanvi #NannammaSuperStar #AmritaNaidu #RealityShowContestant #SamanviIsNoMore #SamanviRelative #KannadaNews, #KannadaLiveTV, #KarnatakaliveNews, #Kannadalivetvnews, #Newsfirst, #Newsfirstkannada, pic.twitter.com/9Vbo467EsM
— NewsFirst Kannada (@NewsFirstKan) January 14, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post