ದಾವಣಗೆರೆ: ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ದುರ್ಘಟನೆ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿತ್ತು. ಈ ಘಟನೆಯಲ್ಲಿ ಮೃತಪಟ್ಟ ಏಳು ಜನರ ಗುರುತು ಪತ್ತೆಯಾಗಿದೆ.
ಮೃತ ಪಟ್ಟ ಏಳು ಜನ ಸಹ ಯುವಕರಾಗಿದ್ದು ಮಲ್ಲನಗೌಡ (22), ಸಂತೋಷ (21), ಸಂಜೀವ್ (20), ಬೀಮ್ (18), ರಘು(23), ಸಿದ್ದೇಶ್ (20), ವೇದಮೂರ್ತಿ (18) ಅಪಘಾತದಲ್ಲಿ ಸಾವಿಗೀಡಾದ ಯುವಕರು ಎಂದು ಗುರುತಿಸಲಾಗಿದೆ. ಮೃತರಲ್ಲಿ 4 ಜನ ಯಾದಗಿರಿ ಜಿಲ್ಲೆಯ ಸುರಪುರದವರು, ಇಬ್ಬರು ವಿಜಯನಗರದವರು ಹಾಗೂ ಒಬ್ಬ ವಿಜಯಪುರದ ಯುವಕ ಎಂಬ ಮಾಹಿತಿ ತಿಳಿದು ಬಂದಿದೆ.
ಬೆಂಗಳೂರಿನಿಂದ ಹೊಸಪೇಟೆ ಕಡೆ ಹೊರಟಿದ್ದ ಇಂಡಿಕಾ ಕಾರ್ ಡಿವೈಡರ್ಗೆ ಗುದ್ದಿದ ಕಾರಣ ಯುವಕರು ಸಾವಿಗೀಡಾಗಿದ್ದಾರೆ. ಸಾವಿಗೀಡಾದ ಯುವಕರ ಮರಣೋತ್ತರ ಪರೀಕ್ಷೆಯನ್ನು ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post