ಬಳ್ಳಾರಿ/ವಿಜಯನಗರ: ಡೆಡ್ಲಿ ಕೊರೊನಾ ಆರ್ಭಟ ರಾಜ್ಯದಲ್ಲಿ ಮತ್ತಷ್ಟೂ ಹೆಚ್ಚಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಬ್ಬರ ಮುಂದುವರೆಸಿರುವ ಹೆಮ್ಮಾರಿ ಕಂಡ ಕಂಡವರ ದೇಹ ಹೊಕ್ಕು ಅಬ್ಬರಿಸುತ್ತಿದೆ. ಪರಿಣಾಮ ಗಣಿನಾಡಿಲ್ಲಿ ಬರೋಬ್ಬರಿ 156 ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಯ 156 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿರೋದಾಗಿನ್ಯೂಸ್ಫಸ್ಟ್ಗೆ ಬಳ್ಳಾರಿಯ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಎರಡು ಜಿಲ್ಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಕ್ಕರಿಸ್ತಿರೋ ವೈರಸ್ ಭೀತಿ ಸೃಷ್ಟಿಸಿದ್ದು ಪೋಷಕರಲ್ಲಿ ಆತಂಕ ಉಂಡು ಮಾಡಿದೆ.ಸದ್ಯ ಕೊರೊನಾ ದೃಢಪಟ್ಟ ಮಕ್ಕಳನ್ನು ಕ್ವಾರಂಟೀನ್ನಲ್ಲಿ ನಿಗಾ ಇಡಲಾಗಿದೆ.
ಜನವರಿ 1 ತಾರೀಖಿನಿಂದ ಇಲ್ಲಿಯವರೆಗೆ ಅಂದರೆ 15 ದಿನಗಳ ಅಂತರದಲ್ಲಿ ಇಷ್ಟು ಕೇಸ್ಗಳು ಪತ್ತೆಯಾಗಿವೆ. ಪೋಷಕರು ಆತಂಕಕ್ಕೊಳಗಾಗದೇ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post