ಬೆಂಗಳೂರು: ಪ್ರೊ ಕಬಡ್ಡಿಯ ಪವನ್ ಸೆಹ್ರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ಮತ್ತೆ ಅಗ್ರಸ್ಥಾನಕ್ಕೇರಿದೆ.
ಗುಜರಾತ್ ಜೈಂಟ್ಸ್ ವಿರುದ್ಧ ಬುಲ್ಸ್ 46-37 ಅಂಕಗಳಿಂದ ಗೆದ್ದು ತನ್ನ ಗೆಲುವಿನ ಓಟವನ್ನ ಮುಂದುವರೆಸಿದೆ. ಮೊದಲ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರು 22, ಗುಜರಾತ್ 17 ಅಂಕ ಗಳಿಸಿತ್ತು. ದ್ವಿತಿಯಾರ್ಧದಲ್ಲೂ ಮುನ್ನಡೆ ಬಿಟ್ಟು ಕೊಡದ ಬೆಂಗಳೂರು ಮೇಲುಗೈ ಸಾಧಿಸಿತು.
ಬೆಂಗಳೂರು ಪರ ನಾಯಕ ಸೆಹ್ರಾವತ್ ಒಟ್ಟು 27 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 19 ಅಂಕಗಳಿಸಿ ಗೆಲುವಿಗೆ ಕಾರಣರಾಗಿದ್ದಾರೆ.
ಸಂಕ್ರಾಂತಿಗೆ ಬುಲ್ಸ್ ಭರ್ಜರಿ ಸುಗ್ಗಿ 🔥@GujaratGiants ವಿರುದ್ಧ ಕಿಚ್ಚು ಹಾಯ್ದ @bengalurubulls 👊
ಲೀಗ್ ಟೇಬಲ್ ನಲ್ಲಿ No.1⃣ ಸ್ಥಾನಕ್ಕೆ ಏರಿದ ನಮ್ಮ ಬುಲ್ಸ್ 🥳#LePanga #vivoProKabaddi #GGvBLR pic.twitter.com/AnstwgDN5Q
— Star Sports Kannada (@StarSportsKan) January 14, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post