ಮನುಷ್ಯನಿಗಿಂತ ಪ್ರಾಣಿಗಳೇ ನಿಯತ್ತಿನಲ್ಲಿ ಮಿಗಿಲಾದದ್ದು ಎಂದು ಮತ್ತೊಮ್ಮೆ ಸಾಬೀತು ಮಾಡಿದೆ ಇಲ್ಲೊಂದು ಬೆಕ್ಕು. ಹೌದು, ಇಂತಹ ಘಟನೆಯೊಂದು ಸರ್ಬಿಯಾದಲ್ಲಿ ನಡೆದಿದ್ದು, ಬೆಕ್ಕಿನ ಮಾಲೀಕ ಮುಫ್ತಿಜಾ ಮುಮರ್ ಝುಕೋರ್ಲಿ ಸಾವನ್ನಪ್ಪಿ ಎರಡು ತಿಂಗಳು ಕಳೆದರೂ, ಅವರ ಸಾಕು ಬೆಕ್ಕು ಸಮಾಧಿ ಬಳಿಯೇ ಕಾಣಿಸುತ್ತಿದೆ.
ಬೆಕ್ಕು ಸಮಾಧಿ ಬಳಿಯೇ ಹೆಚ್ಚು ಸಮಯ ಕಳೆಯುತ್ತಿದ್ದು ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 2021ರ ನವೆಂಬರ್ 06ರಂದು ಶೇಖ್ ಮುಮರ್ ಸಾವನ್ನಪ್ಪಿದ್ದರು. ಮೊದಲ ಬಾರಿಗೆ ನವೆಂಬರ್ 7 ರಂದು ಬೆಕ್ಕು ಸಮಾಧಿ ಬಳಿ ಇರೋ ಫೋಟೋವನ್ನು ಲಾವಡರ್ ಎಂಬವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಎರಡು ತಿಂಗಳು ಕಳೆದರೂ ಬೆಕ್ಕು ಸಮಾಧಿಯ ಬಳಿಯಿಂದ ಹೋಗಿರಲಿಲ್ಲ.
After Mufti Muamer Zukorlić passed away last week, his Cat has not left his Grave since his Funeral, and is always seen standing by the Grave of the Mufti.
Even in death, his Cat wants to be close to him no matter what. pic.twitter.com/BKP8bYD6MY
— Lavader (@LavBosniak) November 9, 2021
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಫೋಸ್ಗೆ ಕಾಮೆಂಟ್ ಮಾಡಿ ಬೆಕ್ಕಿನ ನಿಯತ್ತು, ಮಾಲೀಕನ ಮೇಲಿನ ಪ್ರೀತಿ, ಏನೇ ಇರಲಿ ಬೆಕ್ಕು ಮಾಲೀಕನ ಸಾವಿನ ನಂತರವು ಜೊತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬೆಕ್ಕನ್ನು ಯಾರಾದರೂ ದತ್ತುತೆಗೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.
Woah…
This really blew up. https://t.co/t7djXYAfVR
— Lavader (@LavBosniak) January 11, 2022
ಮುಫ್ತಿಜಾ ಮುಮರ್ ಝುಕೋರ್ಲಿ ಯಾರು?
ಈತ ಸರ್ಬಿಯಾ ದೇಶದ ಪ್ರಖ್ಯಾತ ಇಸ್ಲಾಮಿಕ್ ಧರ್ಮಶಾಸ್ತ್ರಜ್ಞ ಹಾಗೂ ನ್ಯಾಷನಲ್ ಅಸೆಂಬ್ಲಿಯ ಉಪಾಧ್ಯಕ್ಷರಾಗಿದ್ದರು. ನವೆಂಬರ್ 6,2021ರಂದು ಇವರು ನಿಧನರಾದಾಗ ಸಾವಿರಾರು ಜನ ಇವರ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post