ನವದೆಹಲಿ: ತಮಿಳುನಾಡಿನಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಓರ್ವ ಸಾವನ್ನಪ್ಪಿದ್ದು, 80 ಜನ ಗಾಯಗೊಂಡಿದ್ದಾರೆ.
ಅಲ್ಲಿಯ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಈ ಸ್ಪರ್ಧೆ ನಡೆದಿದ್ದು, ಸುಮಾರು 300ಕ್ಕೂ ಅಧಿಕ ಗೂಳಿಗಳು ಆಗಮಿಸಿದ್ದವು. ಈ ಗೂಳಿಗಳನ್ನು ಪಳಗಿಸಲು ನೂರಾರು ಸಂಖ್ಯೆಯಲ್ಲಿ ಯುವಕರು ಕೂಡ ಬಂದಿದ್ದರು. ಈ ಸಂದರ್ಭದಲ್ಲಿ 18 ವರ್ಷದ ಓರ್ವ ಯುವಕನ ಎದೆಗೆ ಗೂಳಿ ತಿವಿದಿದ್ದರಿಂದ, ಯುವಕ ಸಾವನ್ನಪ್ಪಿದ್ದಾನೆ.
ಇನ್ನು ಈ ಘಟನೆಯಲ್ಲಿ 80 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರತಿ ವರ್ಷದ ಸಂಕ್ರಮಣದ ದಿನದಂದು ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭಾಗವಹಿಸುತ್ತಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post