ಸ್ಟಾರ್ ಕ್ರಿಕೆಟ್ ಆಟಗಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಸಕ್ಸಸ್ ಫುಲ್ ಹೀರೋಯಿನ್ ನಟಿ ಅನುಷ್ಕಾ ಶರ್ಮಾ, ಪ್ರೀತಿಸಿ ಮದುವೆ ಆದವರು. ಒಬ್ಬರನ್ನು ಒಬ್ಬರು ತುಂಬಾ ಆಳವಾಗಿ ಅರ್ಥ ಮಾಡಕೊಂಡು, ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಪ್ರತಿಯೊಬ್ಬರು ಅವರವರ ವೃತ್ತಿಗಳಿಗೆ ಗೌರವ ನೀಡುತ್ತಾ, ಪರಸ್ಪರ ಪ್ರೀತಿಯಿಂದ ಇದ್ದಾರೆ.
ಸದ್ಯ ತಮ್ಮ ಪ್ರೀತಿಯ ಪತಿ ವಿರಾಟ್ ಬಗ್ಗೆ ಅನುಷ್ಕಾ ಸುದೀರ್ಘವಾದ ಭಾವನಾತ್ಮಕ ಪತ್ರ ಬರೆದಿದ್ದಾರೆ. ವಿರಾಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ನಾಯಕರಾದಾಗಿನಿಂದ ಹಿಡಿದು ಇಂದಿನ ವರೆಗೂ, ಅನುಷ್ಕಾ ಶರ್ಮಾ ಹೃದಯ ತುಂಬಿ ಬರೆದಿದ್ದಾರೆ. ವಿರಾಟ್ರ ಆರಂಭದ ದಿನಗಳ ಬಗ್ಗೆ ಮಾತು ಪ್ರಾರಂಭ ಮಾಡಿರುವ ಅನುಷ್ಕಾ, 2014ರಲ್ಲಿ ಎಂಎಸ್ ಧೋನಿಯವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದರಿಂದ, ನಿಮ್ಮನ್ನು ನಾಯಕನನ್ನಾಗಿ ಮಾಡಲಾಗಿದೆ ಎಂದು ಹೇಳಿದ ದಿನ ನನಗೆ ಈಗಲೂ ನೆನಪಿದೆ.
ಆ ದಿನ ಧೋನಿ,ನೀವು ಮತ್ತು ನಾನು ಚಾಟ್ ಮಾಡಿದ್ದೂ ಕೂಡ ನನಗೆ ನೆನಪಿದೆ.ಅಂದು ಧೋನಿ, ನಿಮ್ಮ ಗಡ್ಡ ಎಷ್ಟು ಬೇಗನೆ ಬಿಳಿ ಬಣ್ಣಕ್ಕೆ ತಿರುಗುತ್ತದೆ ಎಂದು ತಮಾಷೆ ಮಾಡಿದ್ದೂ ನನಗೆ ನೆನಪಿದೆ.ಆ ಜೋಕ್ ನೆನಪಿಸಿಕೊಂಡರೆ ಈಗಲೂ ನಾನು ನಗುತ್ತೇನೆ. ಧೋನಿ ಹೇಳಿದಂತೆ ಆ ದಿನದಿಂದ ನಿಮ್ಮ ಗಡ್ಡವು ಬಿಳಿ ಬಣ್ಣಕ್ಕೆ ತಿರುಗುವುದನ್ನು ನೋಡಿದ್ದೇನೆ. ಅದರ ಜೊತೆ ನಾನು ನಿಮ್ಮ ಬೆಳವಣಿಗೆಯನ್ನೂ ನೋಡಿದ್ದೇನೆ.ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ನಿಮ್ಮ ನಾಯಕತ್ವದಲ್ಲಿ ತಂಡವು ಯಾವ್ಯಾವ ಸಾಧನೆಗಳನ್ನು ಮಾಡಿದೆ ಎಂಬುದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಆದರೆ ಅದನ್ನು ಹೊರತುಪಡಿಸಿ ನಿಮ್ಮೊಳಗಿನ ಯುದ್ಧದಲ್ಲಿ ಸಾಧಿಸಿದ ಬೆಳವಣಿಗೆಯ ಬಗ್ಗೆಯೂ ನನಗೆ ಹೆಮ್ಮೆ ಕೊಂಚ ಹೆಚ್ಚೇ ಇದೆ.
2014 ರಲ್ಲಿ ನಾವು ತುಂಬಾ ಇನ್ನೂ ಚಿಕ್ಕವರು,ನಮ್ಮ ಮನಸಿನಲ್ಲಿ ಯಾವುದೇ ಕೆಟ್ಟ ಭಾವನೆಗಳಿರಲಿಲ್ಲ. ಕೇವಲ ಒಳ್ಳೆಯ ಉದ್ದೇಶಗಳು,ಒಳ್ಳೆಯ ಚಿಂತನೆಗಳು,ನಮ್ಮನ್ನು ಜೀವನದಲ್ಲಿ ಮುಂದೆ ಕರೆದುಕೊಂಡು ಹೋಗಬಹುದು ಎಂದು ಯೋಚಿಸಿದೆವು. ಕ್ರಿಕೆಟ್ ಜೀವನದಲ್ಲಿ ನೀವು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೀರಿ. ಆದರೆ ಕ್ರಿಕೆಟ್ಗಾಗಿ ನೀವು ಎದುರಿಸಿದ ಈ ಬಹಳಷ್ಟು ಸವಾಲುಗಳು, ಮೈದಾನಕ್ಕಿಂತ ನಿಮ್ಮ ಮನದಲ್ಲಿಯೇ ಹೆಚ್ಚು.
ನೀವು ಸವಾಲುಗಳನ್ನು ಎದುರಿಸುವಾಗ ಯಾವತ್ತೂ ಕೂಡ ನನ್ನ ಪ್ರೀತಿಯನ್ನು ಕಡೆಗಣಿಸಲಿಲ್ಲ. ಈ ವಿಚಾರವಾಗಿ ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ಎಷ್ಟೋ ವಿಷಯಗಳನ್ನು ನಾನು ಹೇಳಬಾರದು ಅಂದುಕೊಂಡಿದ್ದೆ. ಕೆಲವು ಕಠಿಣ ಸಂದರ್ಭಗಳಲ್ಲಿ ನಾನು ನಿಮ್ಮ ಕಣ್ಣುಗಳಲ್ಲಿನ, ಕಣ್ಣೀರಿನೊಂದಿಗೆ ನಿಮ್ಮ ಪಕ್ಕದಲ್ಲಿ ಕುಳಿತಿದ್ದೇನೆ. ನೀವು ನಿಮ್ಮ ನೇರ ಮಾತುಗಳಿಂದ ನಿಷ್ಠೂರತೆಯನ್ನು ಎದುರಿಸಿದ್ದೀರಿ.ಆದರೆ ಇದು ನನ್ನ ಮತ್ತು ನಿಮ್ಮ ಅಭಿಮಾನಿಗಳ ದೃಷ್ಟಿಯಲ್ಲಿ,ನಿಮ್ಮನ್ನು ಮತ್ತಷ್ಟು ಶ್ರೇಷ್ಠನನ್ನಾಗಿ ಮಾಡಿದೆ. ನಿಮ್ಮ ಮನಸ್ಸು ಶುದ್ಧ, ಕೆಟ್ಟ ಉದ್ದೇಶಗಳು ಇಲ್ಲದೆ ಸ್ವಚ್ಚವಾಗಿದೆ.
ಪ್ರಪಂಚದಲ್ಲಿ ಯಾರೂ ಶ್ರೇಷ್ಟರಲ್ಲ.ಅದೇ ರೀತಿ ನೀವು ಪರಿಪೂರ್ಣರಲ್ಲ.ಮತ್ತು ನೀವು ಕೂಡ ನ್ಯೂನತೆಗಳನ್ನು ಹೊಂದಿದ್ದೀರಿ.ಆದರೆ ನೀವು ಅದನ್ನು ಇನ್ನೊಬ್ಬರಿಗೆ ತೊಂದರೆ ಆಗದಂತೆ,ಸದಾ ಮರೆಮಾಚಲು ಪ್ರಯತ್ನಿಸಿದ್ದೀರಿ.ನೀವು ದುರಾಸೆಯಿಂದ ಏನನ್ನೂ ಮಾಡಿಲ್ಲ.ಈ ಸ್ಥಾನಗಳೆಲ್ಲವೂ ಅದಾಗೆ ನಿಮ್ಮ ಬಳಿಗೆ ಬಂದಿರುವುದು ಎಂದು ನನಗೆ ತಿಳಿದಿದೆ.
ನಿಮ್ಮ ಮೇಲೆ ನನ್ನ ಪ್ರೀತಿಯ ಮಿತಿಯಿಲ್ಲ. ಪ್ರತಿಯೊಬ್ಬರೂ ಅದನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.ನಾನು ಹೇಳಿದಂತೆ, ಕಣ್ಣಿಗೆ ಕಾಣುವುದಕ್ಕಿಂತ,ನಿಮ್ಮನ್ನು ಮನಸ್ಸಿನಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರಿಗೆ ನಿಜವಾಗಿಯೂ ನನ್ನ ಧನ್ಯವಾದಗಳು. ಎಂದು ಅನುಷ್ಕಾ ಶರ್ಮಾ ತುಂಬಾ ಭಾವುಕರಾಗಿ ತಮ್ಮ ಸಂಗಾತಿಗಾಗಿ ಸುದೀರ್ಘ ಪತ್ರ ಬರೆದಿದ್ದಾರೆ. ಇಷ್ಟೆಲ್ಲಾ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ಪತ್ನಿಯನ್ನು ಪಡೆದ ವಿರಾಟ್ ಧನ್ಯ ಎನ್ನುತ್ತಿದ್ದಾರೆ ವಿರುಷ್ಕಾ ಅಭಿಮಾನಿಗಳು.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post