ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿ ದೆಹಲಿ ಮೂಲ್ಚಾಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1 ತಿಂಗಳ ಮಗು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದೆ.
ಇತ್ತೀಚಿಗೆ ಕಿವಿಯ ಸೋಂಕಿನಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆಗೂ ಮುನ್ನ ಮಗುವಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಟೆಸ್ಟ್ನಲ್ಲಿ ಕಂದಮ್ಮನಿಗೆ ಮಾರಿ ಕೊರೊನಾ ತಗುಲಿರುವುದು ಖಾತ್ರಿಯಾಗಿತ್ತು. ಸೋಂಕು ತಗುಲಿದ ಬೆನ್ನಲ್ಲೇ ಮಗುವಿಗೆ ವಿಶೇಷ ಆರೈಕೆಯೊಂದಿಗೆ ನಿಗಾ ವಹಿಸಲಾಗಿತ್ತು.
Covid-19 update :
One month old baby , came with ear infection and tested positive on admission . Getting discharged with full recovery .
Well taken care of by the Neonatologists and NICU staff in COVID isolation unit.@PMOIndia @ndtv @PTI_News @ANI @timesofindia pic.twitter.com/7bPYcND3GL— Moolchand Healthcare (@Moolchand_Hosp) January 14, 2022
ಸದ್ಯ ಮಗು ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಕೊನೆಗೆ ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದೆ. ಇದನ್ನು ಆಸ್ಪತ್ರೆಯು ತನ್ನ ಟ್ವಿಟರ್ ಖಾತೆಯಲ್ಲಿ ದೃಢಪಟಿಸಿದ್ದು ಮಗು ಈಗ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖ ಹೊಂದಿದೆ ಎಂದು ತಿಳಿಸಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳಿಗೆ ಹೆಚ್ಚಿನ ಸೋಂಕು ತಗುಲುತ್ತಿದ್ದು ಫೊಷಕರು ಕೋವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ ಮಕ್ಕಳನ್ನು ಸೋಂಕಿನಿಂದ ದೂರ ಇಡಬೇಕು ಎಂದು ತಜ್ಞರು ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post