ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ಪ್ರಕಟಿಸಿ ಶಾಕ್ ನೀಡಿದ್ದಾರೆ. ಸೆಪ್ಟೆಂಬರ್ನಲ್ಲಿ ಟಿ20 ನಾಯಕತ್ವ ತ್ಯಜಿಸಿದ್ದ ಕೊಹ್ಲಿಯನ್ನ ಬಳಿಕ ಏಕದಿನ ಕ್ಯಾಪ್ಸನ್ಸಿಯನ್ನು ಕಿತ್ತುಕೊಂಡಿತ್ತು. ಹೀಗಾಗಿ ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ವಿರಾಟ್ ಕೊಹ್ಲಿಯೇ ಟೆಸ್ಟ್ ನಾಯಕತ್ವವನ್ನೂ ತೊರೆದು ಅಚ್ಚರಿ ಮೂಡಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ದಿಢೀರ್ ನಾಯಕತ್ವ ತ್ಯಜಿಸಿದ್ದಕ್ಕೆ ಕಾರಣ ಏನು.? ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಪ್ರತಿಷ್ಠೆಯ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಸೋಲು
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಕೊಹ್ಲಿ ಪಾಲಿಗೆ ಅತ್ಯಂತ ಪ್ರತಿಷ್ಠೆಯಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ಭಾರತ, ನಂತರ ಉಳಿದ ಎರಡು ಟೆಸ್ಟ್ಗಳಲ್ಲೂ ಮುಗ್ಗರಿಸಿ ಸರಣಿಯಲ್ಲಿ ಸೋಲು ಕಂಡಿತು. ಹೀಗಾಗಿ ಹರಿಣಗಳ ನಾಡಲ್ಲಿ 30 ವರ್ಷಗಳಿಂದ ಟೆಸ್ಟ್ ಸರಣಿ ಗೆಲ್ಲದ ಭಾರತದ ಕನಸು ನನಸಾಗಿಯೇ ಉಳಿದುಕೊಂಡಿತು. ಹೀಗಾಗಿ ಪ್ರತಿಷ್ಠೆಯ ಸರಣಿಯನ್ನ ಗೆಲ್ಲಲಿಲ್ಲವೆಂಬ ಕಾರಣಕ್ಕೂ ನಾಯಕತ್ವ ತ್ಯಜಿಸಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಬಿಸಿಸಿಐ ಕೊಕ್ ಕೋಡೋಕು ಮುನ್ನ ಸ್ವಾಭಿಮಾನದ ನಿರ್ಧಾರ
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟಿ20 ಮಾದರಿಯ ನಾಯಕತ್ವ ತ್ಯಜಿಸುವುದಾಗಿ ಕೊಹ್ಲಿ ಹೇಳಿಕೆ ನೀಡಿದ್ರು. ಒತ್ತಡ ಹೆಚ್ಚಾಗುತ್ತಿದ್ದು, ಬ್ಯಾಟಿಂಗ್ ಮೇಲೆ ಪೋಕಸ್ ಮಾಡುವುದಕ್ಕಾಗಿ ನಾಯಕತ್ವ ತ್ಯಜಿಸುತ್ತಿದ್ದೇನೆ ಎಂದು ಹೇಳಿದ್ದರು. ಇದಾದ ಬಳಿಕ ಏಕಾಏಕಿ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕಿತ್ತು ಹಾಕಿ ಟೆಸ್ಟ್ನಲ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಹೇಳಿತ್ತು. ಈಗಾಗಲೇ ಬಿಸಿಸಿಐಯೊಂದಿಗೆ ವೈಮನಸ್ಸು ಹೊಂದಿರುವ ಕಾರಣ ಕೊಹ್ಲಿ, ಮಂಡಳಿಯೇ ಕೊಕ್ ನೀಡುವುದಕ್ಕೂ ಮುನ್ನ ತಾನಾಗಿಯೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದು ಸ್ವಾಭಿಮಾನದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಕೂಡ ಹರಿದಾಡ್ತಿದೆ.
ಕಳಪೆ ಪ್ರದರ್ಶನ- ಎರಡು ವರ್ಷಗಳಿಂದ ಸಿಡಿಸಿಲ್ಲ ಶತಕ
ಹೌದು.. ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿ ಅತ್ಯಂತ ಯಶಸ್ವಿಯಾಗಿದ್ದರೂ, ಬ್ಯಾಟಿಂಗ್ ಎರಡು ವರ್ಷಗಳಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗಂತ ಸಂಪೂರ್ಣ ವೈಫಲ್ಯಕ್ಕೆ ತುತ್ತಾಗಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಅಂದರೆ ಬರೋಬ್ಬರಿ 30 ಇನ್ನಿಂಗ್ಸ್ಗಳಿಂದ ಒಂದೇ ಒಂದು ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಶತಕಗಳ ಸರದಾರ ಎಂದೇ ಕರೆಸಿಕೊಳ್ಳೋ ಕೊಹ್ಲಿ, ಶತಕ ಸಿಡಿಸದೇ ಇರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಹುಶಃ ನಾಯಕತ್ವ ಒತ್ತಡವೇ ಕಾರಣ ಎಂದು ಹೇಳಲಾಗ್ತಿದೆ. ಆದ್ದರಿಂದಲೇ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗ್ತಿದೆ.
ಆಯ್ಕೆ ಸಮಿತಿ ಹಾಗೂ ಬಿಸಿಸಿಐ ನಡೆಸಿಕೊಂಡ ಬಗ್ಗೆ ಇತ್ತು ಬೇಸರ
ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮತ್ತು ಬಿಸಿಸಿಐ, ವಿರಾಟ್ ಕೊಹ್ಲಿ ಜೊತೆಗೆ ನಡೆದುಕೊಂಡ ರೀತಿ ಕೂಡ ನಾಯಕತ್ವ ತ್ಯಜಿಸಲು ಕಾರಣವಾಗಿದೆ ಎನ್ನಲಾಗಿದೆ. ಟಿ20 ನಾಯಕತ್ವದಿಂದ ಕೊಹ್ಲಿ ಕೆಳಗಿಳಿದಾಗ ಬಿಸಿಸಿಐ ಅಧ್ಯಕ್ಷ ಗಂಗೂಲಿ, ನಾಯಕತ್ವದಿಂದ ಕೆಳಗಿಳಿಯದಂತೆ ಮಾಡಿದ್ವಿ ಅಂತ ಹೇಳಿದ್ರು. ಇದೇ ಮಾತನ್ನು ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಚೇತನ್ ಶರ್ಮಾ ಕೂಡ ಪುನರುಚ್ಛರಿಸಿದ್ರು. ಆದ್ರೆ ನನ್ನೊಂದಿಗೆ ಚರ್ಚೆ ನಡೆಸಿಯೇ ಇಲ್ಲ. ಏಕದಿನ ನಾಯಕತ್ವದಿಂದ ತೆಗೆದು ಹಾಕುವ ಮುನ್ನ ಮಾತ್ರ ಮಾತನಾಡಿದ್ರು ಅಂತ ಕೊಹ್ಲಿ ಹೇಳಿದ್ರು. ಬಳಿಕ ಮನಸ್ತಾಪಗಳು ಉಂಟಾಗಿ ಕೊಹ್ಲಿ ಜೊತೆಗೆ ಬಿಸಿಸಿಐ ಸರಿಯಾಗಿ ನಡೆದುಕೊಳ್ತಿಲ್ಲ ಎಂದು ಹೇಳಲಾಗ್ತಿದೆ. ಈ ಬೇಸರದಿಂದಲೂ ಕೊಹ್ಲಿ ಟೆಸ್ಟ್ ಪಟ್ಟ ತ್ಯಜಿಸಿದ್ರು ಎನ್ನಲಾಗ್ತಿದೆ.
— Virat Kohli (@imVkohli) January 15, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post